Friday, May 17, 2024

ದೇಶಾದ್ಯಂತ ಗೌರಿ, ಗಣೇಶ ಹಬ್ಬ ಆಚರಣೆಗೆ ದಿನಗಣನೆ

ಬೆಂಗಳೂರು : ದೇಶಾದ್ಯಂತ ಗೌರಿ ಗಣೇಶ ಹಬ್ಬ ಆಚರಣೆಗೆ ದಿನಗಣನೆ ಆರಂಭವಾಗಿದೆ. ಕೊವಿಡ್ ನಂತರ ಈ ಬಾರಿ ಗಣೇಶೋತ್ಸವ ಅದ್ದೂರಿಯಾಗಿಯೇ ಇರಲಿದೆ. ಅದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸೋರಿಗೆ ಪೊಲೀಸ್ ಇಲಾಖೆಯಿಂದ ಟಫ್ ರೂಲ್ಸ್ ಕೂಡ ಇರಲಿದೆ. ಹೌದು. ನೂರಾರು ಜನ ಒಂದೆಡೆ ಸೇರಿ ಸಂಭ್ರಮಿಸೋ ಈ ಹಬ್ಬದಲ್ಲಿ ಗಲಾಟೆ, ಗುಂಪು ಗಲಭೆಗಳು ಆಗಬಾರದು ಎಂದು ಪೊಲೀಸರು ಹೈ ಅರ್ಲಟ್ ಆಗಿದ್ದಾರೆ‌. ಈ ಬಾರಿ ಒಂದಷ್ಟು ಧಾರ್ಮಿಕ ಸಂಘರ್ಷಗಳ ವಾತಾವರಣ ನಿರ್ಮಾಣ ಆಗಿರೋ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಭಾರಿ ಕಟ್ಟೆಚ್ಚರ ವಹಿಸಿದೆ. ಈ ಹಿನ್ನೆಲೆ ಬೆಂಗಳೂರು ನಗರವನ್ನ ಮೂರು ವಲಯಗಳಾಗಿ ವಿಂಗಡಿಸಿಕೊಂಡಿದ್ದಾರೆ. ಸೂಕ್ಷ್ಮ, ಅತೀ ಸೂಕ್ಷ್ಮ ಮತ್ತು ಸಾಮಾನ್ಯ ವಲಯಗಳೆಂದು ಮೂರು ವಲಯಗಳಾಗಿ ಸಿಲಿಕಾನ್ ಸಿಟಿಯನ್ನು ಗುರ್ತಿಸಿಕೊಳ್ಳಲಾಗಿದೆ.

ಈದ್ಗಾ ಮೈದಾನ ವಿಚಾರವಾಗಿ ಚಾಮರಾಜಪೇಟೆ ಏರಿಯಾವನ್ನು ಸೂಕ್ಷ್ಮ ಪ್ರದೇಶ ಎಂದು ಗುರ್ತಿಸಿದ್ದು. ಅದಲ್ಲದೇ ಡಿಜೆ ಹಳ್ಳಿ, ಕೆಜಿ ಹಳ್ಳಿ, ಗೋವಿಂದಪುರ, ಚಂದ್ರಾಲೇಔಟ್ ಏರಿಯಾಗಳನ್ನ ಸೂಕ್ಷ್ಮ ಪ್ರದೇಶಗಳೆಂದು ಗುರ್ತಿಸಿಲಾಗಿದೆ. ಇಂತಹ ಸೆಲೆಕ್ಟೆಡ್ ಏರಿಯಾಗಳಲ್ಲಿ ಸ್ಥಳೀಯ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಗಣೇಶೋತ್ಸವ ಆಯೋಜಕರ ಬಗ್ಗೆ ಆಯಾ ಪೊಲೀಸ್ ಇನ್ಸ್​ಪೆಕ್ಟರ್​ಗಳು ಸಂಪೂರ್ಣ ಮಾಹಿತಿ ಕಲೆ ಹಾಕಿ ಗಣೇಶ ಮೆರವಣಿಗೆ ಮಾಡೋ ಬ್ಲೂ ಪ್ರಿಂಟ್ ಮಾಹಿತಿ ಪಡೆದಿರಬೇಕು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಸೂಕ್ಷ್ಮ ಪ್ರದೇಶಗಳಲೆಲ್ಲಾ ಸಿಸಿ ಕ್ಯಾಮರಾ ಅಳವಡಿಸಲಾಗುತ್ತೆ. ಗಣೇಶೋತ್ಸವ ಮೆರವಣೆಗೆ ಮಾಡೋ ಎಲ್ಲಾ ಆಯೋಜಕರೊಟ್ಟಿಗೆ ಎರಡು ದಿನಗಳ ಮುಂಚೆ ಸಭೆ ನಡೆಸಿ ಮೆರವಣಿಗೆಯ ಎಲ್ಲಾ ವಿವರಗಳನ್ನು ಪಡೆದುಕೊಳ್ಳಲಾಗುವುದು. ಮೆರವಣಿಗೆ ಸಂಪೂರ್ಣ ಚಿತ್ರೀಕರಣ ಆಗ್ಬೇಕು ಅಂತಾ ಆಯೋಜಕರಿಗೆ ಎಚ್ಚರಿಕೆ ನೀಡಿ ಸೆನ್ಸಿಟೀವ್ ಏರಿಯಾಗಳಲ್ಲಿ ಪೊಲೀಸರು ದಿನದ 24 ಗಂಟೆಗಳ ಕಾಲ ನಿರಂತರವಾಗಿ ಗಸ್ತಿನಲ್ಲಿ ಇರಬೇಕು ಎಂದು ಸೂಚನೆ ನೀಡಿದೆ.

ಅಶ್ವಥ್ ಎಸ್.ಎನ್, ಕ್ರೈಂ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES