ಬೀದರ್ : ಎಲ್ಲೆಲ್ಲೂ ಈಗ ಗೌರಿ ಗಣೇಶ ಹಬ್ಬದ ಕಾರುಬಾರು. ಆದ್ರೆ ಕೋಟೆ ನಗರಿ ಬೀದರ್ನಲ್ಲಿ ಗಣೇಶ ಹಬ್ಬ ತುಸು ಭಿನ್ನ. ಈ ವರ್ಷ ಗಡಿ ಜಿಲ್ಲೆ ಬೀದರ್ನಲ್ಲಿ ಹಬ್ಬದ ವಾತಾವರಣ ಜೋರಾಗಿದೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಗಣೇಶ ಮೂರ್ತಿಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಇದರಿಂದ ಜಿಲ್ಲೆಯ ವ್ಯಾಪಾರಿಗಳು ಫುಲ್ ಖುಷ್ ಆಗಿದ್ದಾರೆ. ಗ್ರಾಹಕರು ಕೂಡ ಗಣೇಶ ಮೂರ್ತಿ ಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ನಗರದಲ್ಲಿ ನೂರಾರು ಕಡೆ ಪ್ರತಿಷ್ಠಾಪನೆ ಮಾಡುತ್ತಿದ್ದ ಗಣೇಶನ ಮೂರ್ತಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಜೊತೆಗೆ ಗಣೇಶನ ಮೂರ್ತಿಗಳತ್ತ ಕೊಳ್ಳುವವರು ಚೌಕಾಸಿ ಮಾಡದೆ ಖರೀದಿ ಮಾಡುತ್ತಿದ್ದಾರೆ. ಈ ವರ್ಷ ಗೌರಿ ಗಣೇಶ ಹಬ್ಬ ಜಿಲ್ಲೆಯ ಜನತೆಗೆ ವಿಶೇಷ ಎನಿಸಿದೆ.
ಒಟ್ಟಾರೆ ಗಣೇಶ ಹಬ್ಬ ಸಮೀಪಿಸುತ್ತಿರುವಂತೆ ಗಡಿ ಜಿಲ್ಲೆ ಬೀದರ್ನಲ್ಲಿ ಗಣಪತಿ ಬಪ್ಪನ ಮಾರಾಟ ಚುರುಕಾಗಿದೆ. ಈ ವರ್ಷ ಬಂಪರ್ ಬೆಲೆಯಲ್ಲಿ ಗ್ರಾಹಕರಿಗೆ ಗಣಪತಿ ಮಾರಾಟ ಮಾಡೋ ವ್ಯಾಪಾರಿಗಳ ಆಸೆ ಈಡೇರುತ್ತಿದೆ. ಜನರಲ್ಲಿ ಕೂಡ ಹಬ್ಬದ ಉತ್ಸಾಹ ಹೆಚ್ಚಾಗಿದೆ. ವಿಶೇಷವಾಗಿ ಮಣ್ಣಿನ ಮೂರ್ತಿಗಳತ್ತ ಚಿತ್ತ ಹರಿಸಿ ಹಬ್ಬ ಆಚರಣೆ ಮಾಡಲು ಅಣಿಯಾಗುತ್ತಿದ್ದಾರೆ.
ರಾಜಕುಮಾರ, ಪವರ್ ಟಿವಿ, ಬೀದರ್