Monday, December 23, 2024

ಕುಡಿದ ನಶೆಯಲ್ಲಿ ವಿದೇಶಿ ಮಹಿಳೆಯರ ಪುಂಡಾಟ

ಬೆಂಗಳೂರು : ಕುಡಿದ ಮತ್ತಿನಲ್ಲಿ ವಿದೇಶಿ ಮಹಿಳೆಯರು ಪುಂಡಾಟ ನಡೆಸಿರುವಂತಹ ಘಟನೆ ನಗರದ ಬ್ರಿಗೇಡ್ ರಸ್ತೆಯಲ್ಲಿ ತಡರಾತ್ರಿ  ನಡೆದಿದೆ.

ಟೈಮ್ ಹೆಚ್ಚಾಗಿದ್ದರಿಂದ ಮನೆಗೆ ತೆರಳಲು ಸೂಚಿಸಿದ್ದು, ಈ ವೇಳೆ ಕಬ್ಬನ್​ ಪಾರ್ಕ್ ಠಾಣೆ​​​​​ ಪೊಲೀಸರ ಜತೆ ಕಿರಿಕ್ ಮಾಡಲಾಗಿದೆ. ನೈಟ್ ರೌಂಡ್ಸ್​​ನಲ್ಲಿದ್ದ ಹೊಯ್ಸಳ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ, ಅವರ ಮೇಲೆ ಮೂವರು ಆಫ್ರಿಕನ್​ ಮಹಿಳೆಯರಿಂದ ಹಲ್ಲೆಗೆ ಯತ್ನ ಮಾಡಲಾಗಿದೆ ಎನ್ನಲಾಗುತ್ತಿದೆ.

ಇನ್ನು, ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸಿಗರೇಟ್​ ಬಾಕ್ಸ್​ಗಳನ್ನು ಕಸ್ಟಮ್ಸ್​ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ದುಬೈನಿಂದ ಅಕ್ರಮವಾಗಿ ತಂದಿದ್ದ 16.38 ಲಕ್ಷ ರೂ. ಮೌಲ್ಯದ ಒಟ್ಟು 84 ವಿದೇಶಿ ಸಿಗರೇಟ್​ ಬಾಕ್ಸ್​ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES