ಹಾಸನ: ಜಿಲ್ಲೆಯೊಳಗೆ ಕಳೆದ ಮೂರು ತಿಂಗಳಿನಿಂದ ಮಳೆ ಸುರಿಯುತ್ತದೆ. ಮಳೆಗೆ ರಸ್ತೆ ಸಂಪೂರ್ಣ ಉಳಿದಿಲ್ಲ, ಎಲ್ಲಾ ಹಾಳಾಗಿಹೋಗಿದೆ. ಹೊಳೆನರಸೀಪುರದಿಂದ ಚನ್ನರಾಯಪಟ್ಟಣ ಹೊಗೋ ರಸ್ತೆಯಲ್ಲಿ ಏನೂ ಉಳಿದಿಲ್ಲ. ಬರೀ ನನ್ನ ವಿಧಾನಸಭಾ ಕ್ಷೇತ್ರವಲ್ಲ, ಎಲ್ಲಾ ಕ್ಷೇತ್ರದಲ್ಲಿಯೂ ಹೀಗೆ ಆಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಕೊಡುಗು ಹಾಗೂ ನಮಗೆ ಸೇರಿ ಬರೀ 25 ಕೋಟಿ ರೂ ರಾಜ್ಯ ಸರ್ಕಾರ ಕೊಟ್ಟಿದೆ. 25 ಕೋಟಿ ಕೊಟ್ಟರೆ ಅದು ಎಲ್ಲಿಗೆ ಸಾಲುತ್ತದೆ. ಕೊಡಗಿಗೆ 10 ಕೋಟಿ ಹೋದರೆ, ನಮಗೆ 15 ಕೋಟಿ ಏನಕ್ಕೆ ಸಾಲುತ್ತದೆ. ನಮಗೆ ಕಡ್ಲೆ ಪುರಿ ಎರಿಚಿದಂಗೆ ಎರಚುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ 200 ಕೋಟಿ ಮೇಲೆ ಕೊಟ್ಟಿದ್ದಾರೆ ಎಂದು ಸಿಎಂ ವಿರುದ್ಧ ಹರಿಹಾಯ್ದರು.
ಉ.ಕ ಕೊಡಲಿ, ನಮಗೆ ಅದಕ್ಕೆ ಆಕ್ಷೇಪ ಇಲ್ಲ. ನಮ್ಮ ಜಿಲ್ಲೆಯಲ್ಲಿ ಆಲೂಗಡ್ಡೆ ಸಂಪೂರ್ಣ ಹಾಳಾಗಿದೆ. ಹಾಸನ ತಾಲೂಕಿನಲ್ಲಿ ಒಂದು ಆಲೂಗಡ್ಡೆಯೂ ಉಳಿದಿಲ್ಲ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಪಾಟ್ ಗೆ ಹೋಗ್ತಿಲ್ಲ. ಕೃಷಿ ಹಾಗೂ ಕಂದಾಯ ಇಲಾಖೆಗಳು ಯುದ್ದದ ಮಾದರಿಯಲ್ಲಿ ಕೆಲಸ ಮಾಡಬೇಕಿದೆ.
ಕಳೆದ ಮೂರು ತಿಂಗಳಿನಿಂದ ನಾಟಿ ಮಾಡಿರೋ ಎಲ್ಲಾ ಬೆಳೆ ಹಾಳಾಗಿ ಹೋಗಿಲ್ಲ. ನಾಟಿ ಮಾಡಿರೋ ಎಲ್ಲಾ ಬೆಳೆಗಳು ಕೊಚ್ಚಿ ಹೋಗಿವೆ. ನೆರೆ ಪ್ರದೇಶಗಳಿಗೆ ಹತ್ತು ರೂಪಾಯಿ ದುಡ್ಡು ಕೊಟ್ಟಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ನಮ್ಮ ಜಿಲ್ಲೆಗೆ ಏನೂ ಮಾಡಲಿಲ್ಲ
ನಮ್ಮ ರೈತರು ವಿಷ ಕುಡಿಯೋ ಸ್ಥಿತಿಗೆ ಬಂದಿದೆ. ನಮ್ಮ ಜಿಲ್ಲೆಯಲ್ಲಿ ಎಲ್ಲದರಲ್ಲಿಯೂ ಲೂಟಿ ನಡೆಯುತ್ತಿದೆ ಎಂದು ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರು ಹೇಳಿದರು.