ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಬಂದಿದೆ ಆದರೆ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಚಿತ್ರದುರ್ಗಾ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ.
ಮುರುಘಾ ಮಠಕ್ಕೆ ಜಿಲ್ಲಾಧಿಕಾರಿ ಭೇಟಿ ಕೊಟ್ಟಿದ್ದ ಹಿನ್ನಲೆ ಮಾತುಕತೆ ನಡೆಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸಂತ್ರಸ್ತ ಬಾಲಕಿಯರ ಬಾಲ ಮಂದಿರಕ್ಕೆ ಬರುತ್ತಿದ್ದಂತೆ ಪ್ರತಿಭಟನಾಕಾರರು ಧಿಕ್ಕಾರ ಕೂಗಿ, ಸರಿಯಾದ ರೀತಿ ತನಿಖೆ ಮಾಡುತ್ತಿಲ್ಲ ಅಂತ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಅಪಾರ ಸಂಖ್ಯೆಯಲ್ಲಿ ಭಕ್ತರು ಮುರುಘಾ ಮಠಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಮಠದ ಗೇಟ್ ಹಾಕಿದ್ದು, ಇದಕ್ಕೆ ಪೊಲೀಸರು- ಭಕ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ತನಿಖೆಗೆ ಆಗಮಿಸಿದ ವೇಳೆ ಮಠದ ಮುಖ್ಯ ಬಾಗಿಲು ಪೊಲೀಸರು ಹಾಕಿದ್ದರು. ಇದರಿಂದ ಮಠದ ಮುಖ್ಯದ್ವಾರದ ಬಳಿ ಭಕ್ತರು ಪೊಲೀಸರ ವಿರುದ್ಧ ಕಿಡಿಕಾರಿದರು.
ಇನ್ನು ಮುರುಘಾಮಠಕ್ಕೆ ಒಳಪಟ್ಟಿರುವ ಮಲ್ಲಾಡಿಹಳ್ಳಿ ಆಶ್ರಮದಲ್ಲಿ ಮುರುಘಾಶ್ರೀ ಭಾವಚಿತ್ರ ಹೊರಗಿಟ್ಟು ಚಪ್ಪಲಿ, ಬೆಂಕಿ, ಪುಥ್ಧಳಿ ಹೊಡೆದು ಹಾಕಿ ಮುರುಘಾ ಶ್ರೀ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.