Sunday, January 12, 2025

ರಾಜ್ಯದಲ್ಲಿ ಮತ್ತೆ ಶುರುವಾಯ್ತು ಧರ್ಮ ದಂಗಲ್..!

ಬೆಂಗಳೂರು : ಗಣೇಶ ಹಬ್ಬಕ್ಕೆ ಹಿಂದೂ ವ್ಯಾಪಾರಿಗಳಿಂದ ವಸ್ತು ಖರೀದಿಸುವಂತೆ ಹಿಂದುಪರ ಸಂಘಟನೆಗಳು ಮನವಿ ಮಾಡಿದ್ದಾರೆ.

ಜಟ್ಕಾ ಕಟ್ ಆಯ್ತು, ಹಲಾಲ್ ಕಟ್ ಆಯ್ತು,ಆಜಾನ್ ಆಯ್ತು, ಈಗ ಮತ್ತೊಂದು ಅಭಿಯಾನ ಪ್ರಾರಂಭವಾಗಿದ್ದು, ಗಣೇಶ ಹಬ್ಬ ಬರುತ್ತಿದ್ದಂತೆ ಮತ್ತೊಂದು ಧರ್ಮ‌ ದಂಗಲ್ ಶುರುವಾಗಿದೆ. ಹಿಂದೂ ಪರ‌ ಸಂಘಟನೆಗಳಿಂದ ಹಿಂದೂಗಳಿಂದಲೇ ವಸ್ತು ಖರೀದಿಸಿ ಅಭಿಯಾನ ಪ್ರಾರಂಭವಾಗಿದ್ದು, ಗಣೇಶ ಹಬ್ಬಕ್ಕೆ ಹಿಂದೂ ವ್ಯಾಪಾರಿಗಳಿಂದ ವಸ್ತು ಖರೀದಿಸುವಂತೆ ಮನವಿ ಮಾಡಿದ್ದಾರೆ.

ಇನ್ನು, ಯಾರು ಮುಸ್ಲಿಂ ವ್ಯಾಪಾರಿಗಳಿಂದ ಹಬ್ಬದ ವಸ್ತುಗಳನ್ನ ಖರೀದಿಸಬೇಡಿ. ಎಂದು ಪರೋಕ್ಷವಾಗಿ ಹಿಂದುಗಳಿಗೆ ಸಂದೇಶ ರವಾನಿಸಲಾಗಿದ್ದು, ಪ್ರತಿ ವರುಷ ಗಣೇಶ ಹಬ್ಬದಿಂದ ಸಾವಿರಾರು ಕೋಟಿ ವ್ಯವಹಾರ ನಡೆಯುತ್ತೆ. ಹಿಂದೂ ವಿರೋಧಿಗಳಿಗೆ ಇದರ ಲಾಭ ಸಿಗಬಾರದು. ವಿಶ್ವ ಹಿಂದೂ ಪರಿಷತ್ ನಿಂದಲೇ ಮತ್ತೊಂದು ಅಭಿಯಾನ ಶುರುವಾಗಿದ್ದು, ಗೌರಿ-ಗಣೇಶ ಹಬ್ಬ ಹಿನ್ನೆಲೆ ವಿಶ್ವ ಹಿಂದೂ ಪರಿಷತ್​​ನಿಂದ ಹೊಸ ಕ್ಯಾಂಪೇನ್ ಪ್ರಾರಂಭವಾಗಿದೆ. ಅದಲ್ಲದೇ, ಹಿಂದೂ ವ್ಯಾಪಾರಿಗಳಿಂದಲೇ ಹಬ್ಬ ವಸ್ತುಗಳನ್ನ ಖರೀದಿಸುವಂತೆ ಕರೆ ನೀಡಿದ್ದು, ವಿಶ್ವ ಹಿಂದೂ ಪರಿಷತ್ ತಮ್ಮ ಫೇಸ್ ಬುಕ್ ವಾಲ್​​ನಲ್ಲಿ ನೂತನ ಅಭಿಯಾನಕ್ಕೆ ನಾಂದಿ ಹಾಡಿದೆ.

RELATED ARTICLES

Related Articles

TRENDING ARTICLES