ಬಾಗಲಕೋಟೆ : ಅದು ಗುಡ್ಡದ ಓರೆಯಲ್ಲಿರೋ ಗ್ರಾಮ. ನಿರಂತರ ಮಳೆಯಾದ್ರೆ ಆ ಗ್ರಾಮಕ್ಕೆ ಝರಿ ನೀರು ಪ್ರವಾಹದ ರೂಪದಲ್ಲಿ ಹರಿದು ಬರುತ್ತಿತ್ತು. ಗುಡ್ಡದಿಂದ ಹರಿದು ಬರುತ್ತಿದ್ದ ನೀರನ್ನ ಇದೀಗ ಗ್ರಾಮಸ್ಥರು ಅಮೃತವಾಗಿ ಸ್ವೀಕರಿಸಿ ಗ್ರಾಮ ಜಮೀನುಗಳಲ್ಲಿನ ಕೊಳವೆಭಾವಿಗಳಿಗೆ ನೀರು ಹೆಚ್ಚಿಸುವಂತೆ ಅಮೃತ ಯೋಜನೆ ಅಡಿ ಕರೆ ನಿರ್ಮಿಸಿ ದೇಶವೇ ತಿರುಗಿ ನೋಡುವಂತೆ ಮಾಡಿದೆ ಆ ಗ್ರಾಮ. ನಮೋ ಮನ್ ಕಿ ಬಾತ್ ನಲ್ಲಿ ಮೋದಿ ಪ್ರಸ್ತಾಪ ಮಾಡಿದ್ದು ಬಾಗಲಕೋಟೆ ಮಂದಿಯಲ್ಲಿ ಖುಷಿ ಹೆಚ್ಚಿಸಿದೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಬಿಲ್ ಕೆರೂರ ಗ್ರಾಮದ ಅಮೃತ ಸರೋವರ ಕರೆ ಮಳೆಯಾದಲೆಲ್ಲ ಬಿಲ್ ಕೆರೂರು ಗ್ರಾಮಕ್ಕೆ ಗುಡ್ಡದಿಂದ ನೀರು ಹರಿದು ಬಂದು ಜಲಾವೃತದ ಆತಂಕ ಹೆಚ್ಚಿಸಿತು. ಇದೀಗ ಗ್ರಾಮಕ್ಕೆ ಹರಿದು ಬರುತ್ತಿದ್ದ ಗುಡ್ಡದ ನೀರು ಸಂಗ್ರಹಿಸುವುದಕ್ಕಾಗಿ ಕೇಂದ್ರ ಸರ್ಕಾರ ಅಮೃತ ಸರೋವರ ಯೋಜನೆಯಡಿ
ಕೆರೆಯ ನಿರ್ಮಾಣ ಮಾಡಿ ಗ್ರಾಮ ಹಾಗೂ ಜಮೀನಿಗೆ ಹಾನಿಯುಂಟು ಮಾಡುತ್ತಿದ್ದ ಮಳೆ ನೀರನ್ನ ಅಮೃತ ಸರೋವರದಲ್ಲಿ ಸಂಗ್ರಹಿಸಲಾಗುತ್ತಿದೆ. ಅಗಸ್ಟ್ 15 ರಂದು ಬಿಲ್ ಕೆರೂರಿನ ಅಮೃತ ಸರೋವರ ಲೋಕಾರ್ಪಣೆಗೊಂಡಿದ್ದು, ಇದು ಗ್ರಾಮಸ್ಥರ ಬದುಕನ್ನೆ ಹಸನಾಗಿಸಿದೆ.
ಇನ್ನು ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಅಮೃತ ಸರೋವರ ಯೋಜನೆಯಡಿ 10 ಕೆರೆಗಳು ಅಭಿವೃದ್ಧಿಗೆ ಆಯ್ಕೆಯಾಗಿದ್ದು, ಕ್ಷೇತ್ರದ ಬಿಲ್ ಕೆರೂರು ಗ್ರಾಮದ ಕೆರೆ ಅಮೃತ ಸರೋವರ ಯೋಜನೆಯಡಿ ಕೆರೆ ನಿರ್ಮಿಸಿ ಅಗಸ್ಟ್ 15 ರಂದು ಸ್ಥಳೀಯ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಉದ್ಘಾಟನೆಗೊಳಿಸಿದ್ರು. ಬಿಲ್ ಕೆರೂರು ಗ್ರಾಮದಲ್ಲಿ 431 ಕುಟುಂಬಗಳು ನೆಲೆಸಿವೆ. ಇಲ್ಲಿನ ಜನರು ಕೃಷಿಯನ್ನೇ ಮೂಲ ಕಸಬನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮನ್ ಕಿ ಬಾತ್ ನಲ್ಲಿ ಬಿಲ್ ಕೆರೂರ ಗ್ರಾಮದ ಕೆರೆ ಬಗ್ಗೆ ಪ್ರಸ್ತಾಪಿಸಿ ಪ್ರಧಾನಿ ಮೋದಿ ಅವರು ಶ್ಲಾಘನೀಯ ಮಾತುಗಳನ್ನಾಡಿದ್ದಾರೆ.ಹರಿದು ಹೋಗುತ್ತಿದ್ದ ನೀರು ತಡೆ ಹಿಡಿಯಲಾಗಿದೆ, ಇದು ಶ್ಲಾಘನೀಯ ಎಂದು ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.ಬಿಲ್ ಕೆರೂರ ಕರೆ 40 ಲಕ್ಷ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಪಡಿಸಲಾಗಿದೆ..
ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಒಂದಾದ ಅಮೃತ ಸರೋವರದ ಕಲ್ಪನೆ ಗ್ರಾಮೀಣ ಜನರ ಬದುಕನ್ನ ಹಚ್ಚ ಹಸಿರುವ ಮಾಡುವ ಯೋಜನೆಯಾಗಿದ್ದು.ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ನನಸು ಮಾಡುವ ಮೂಲಕ ಮನ್ ಕಿ ಬಾತ್ ನಲ್ಲಿ ಬಾಗಲಕೋಟೆ ವಿಧಾನ ಸಭಾ ಕ್ಷೇತ್ರದ ಬಿಲ್ ಕೆರೂರ ಗ್ರಾಮದ ಕೆರೆ ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿ ಪಡೆಸಿ ದೇಶದ ಗಮನ ಸೆಳೆಯುವಂತೆ ಮಾಡಿದಂತೂ ಸುಳ್ಳಲ್ಲ.
ನಿಜಗುಣ ಮಠಪತಿ,ಪವರ್ ಟಿವಿ ಬಾಗಲಕೋಟೆ