Sunday, January 19, 2025

ಹೈವೋಲ್ಟೆಜ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು

ದುಬೈ: ಪಾಕಿಸ್ತಾನ-ಭಾರತ ನಡುವಿನ ಹೈವೋಲ್ಟೆಜ್​ ಏಷ್ಯಾಕಪ್​ ಟಿ-20 ಪಂದ್ಯದಲ್ಲಿ ಭಾರತ 5 ವಿಕೆಟ್​ಗಳಿಂದ ಭರ್ಜರಿ ಜಯಗಳಿಸಿದೆ.

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲು ಟಾಸ್​ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. 19.5 ಓವರ್​ಗಳಲ್ಲಿ ಪಾಕಿಸ್ತಾನ ತಂಡ ತನ್ನ ಎಲ್ಲಾ ವಿಕೆಟ್​ ಕಳೆದುಕೊಂಡು 147 ರನ್​ ಕಲೆಹಾಕಿತು. 147 ರನ್​ ಗುರಿ ಬೆನ್ನತ್ತಿದ ಭಾರತ ತಂಡ 19.4 ಓವರ್​ಗಳಲ್ಲಿ 148 ರನ್​ ಗಳಿಸುವ ಮೂಲಕ ಭಾರತ ಜಯಗಳಿಸಿತು.

ಭಾರತದ ಪರ ರೋಹಿತ್​ ಶರ್ಮಾ 12, ವಿರಾಟ್​ ಕೊಹ್ಲಿ 35, ರವೀಂದ್ರ ಜಡೆಜಾ 35, ಸುರ್ಯಕುಮಾರ್​ ಯಾದವ್​​ 18, ಹಾರ್ದಿಕ ಪಾಂಡ್ಯ 33  ರನ್ ಕಲೆಹಾಕಿದರೆ, ಭುವನೇಶ್ವರ್ ಕುಮಾರ್ 4, ಹಾರ್ದಿಕ್ ಪಾಂಡ್ಯ 3, ಅರ್ಶದೀಪ್ ಸಿಂಗ್ 2 ವಿಕೆಟ್ ಪಡೆದು ಮಿಂಚಿದರು.

ಪಾಕಿಸ್ತಾನ ಪರ ಮೊಹಮ್ಮದ್ ರಿಜ್ವಾನ್ 43,  ಇಫ್ತಿಕರ್ ಅಹಮದ್ 28 ರನ್ ಕಲೆಹಾಕಿದರು.

RELATED ARTICLES

Related Articles

TRENDING ARTICLES