Monday, December 23, 2024

50 ವರ್ಷಗಳವರೆಗೆ ಕಂಗೊಳಿಸಲಿದ್ದಾನೆ ಶ್ರೀರಾಮಧೂತ..!

ಹಾವೇರಿ :  ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಕಾಂತೇಶ ದೇವಸ್ಥಾನದಲ್ಲಿ ಕಳೆದ 25 ವರ್ಷಗಳ ಬಳಿಕ ಎರಡೂವರೆ ಲಕ್ಷ ವೆಚ್ಚದಲ್ಲಿ ಕದರಮಂಡಲಿಗೆ ಕಾಂತೇಶ್ ಸ್ವಾಮಿ ಮೂರ್ತಿಗೆ ವಜ್ರಲೇಪನ ಮಾಡಲಾಗಿದ್ದು, ಮುಂದಿನ 50 ವರ್ಷಗಳವರೆಗೆ ಈ ಲೇಪನ ಕಂಗೊಳಿಸಲಿದೆ ಎಂದು ದೇವಸ್ಥಾನ ಕಮಿಟಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಜ್ರಲೇಪಿತ ಸ್ವಾಮಿಯ ದರ್ಶನ ಪಡೆಯಲು ಭಕ್ತರು ಮುಗಿಬಿದ್ದರು.

ಇನ್ನೂ ಈ ದೇವಸ್ಥಾನ ಪಾಂಡವರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಈ ಆಂಜನೇಯನ ಗುಡಿ ವಿಶೇಷತೆ ಎಂದರೆ, ಆಂಜನೇಯ ನೇರವಾಗಿ ನಿಂತಿರುವುದು, ಬೇರೆಲ್ಲಾ ದೇವಸ್ಥಾನಗಳಲ್ಲಿ ಹನುಮ ಎಡಕ್ಕೋ, ಬಲಕ್ಕೋ ತಿರುಗಿಕೊಂಡು ನಿಂತಿರುತ್ತಾನೆ. ಈ ದೇವಸ್ಥಾನಕ್ಕೆ ಪೌರಾಣಿಕ ಹಿನ್ನೆಲೆ ಇರೋದು ಮತ್ತೊಂದು ವಿಶೇಷ. ಪಾಂಡವರ ಕೊನೆಯ ಅರಸನಾಗಿದ್ದ ಜಯಮೇಜಯ ಈ ದೇವಸ್ಥಾನವನ್ನು ಕಟ್ಟಿಸಿದನೆಂಬ ಪ್ರತೀತಿ ಇದೆ.

ಒಟ್ಟಿನಲ್ಲಿ ಹಲವು ವೈಶಿಷ್ಠ್ಯತೆಗಳಿಂದ ಈ ಕಾಂತೇಶನ ಹಾಗೂ ಶಿಕಾರಿಪುರದ ಭ್ರಾಂತೇಶ ಮತ್ತು ಸಾತೇನಹಳ್ಳಿಯ ಶಾಂತೇಶನವನ್ನು ಈ ಶ್ರಾವಣ ಮಾಸದಲ್ಲಿ ದರ್ಶನ ಪಡೆದ್ರೆ ತಿರುಪತಿಗೆ ಹೋಗಿ ಬಂದಷ್ಟೆ ಪುಣ್ಯ ಸಿಗುತ್ತೆ ಎಂಬ ಪ್ರತೀತಿ ಇದೆ. ಸಾಧ್ಯವಾದ್ರೆ ನೀವು ಕೂಡ ಈ ಆಂಜನೇಯನ ದರ್ಶನ ಪಡೆದು ಪುನೀತರಾಗಿ.

ವೀರೇಶ ಬಾರ್ಕಿ, ಪವರ್ ಟಿವಿ, ಹಾವೇರಿ

RELATED ARTICLES

Related Articles

TRENDING ARTICLES