Monday, December 23, 2024

KGF ನಿಧಿಯೊಂದಿಗೆ ಸಿಲಿಕಾನ್ ಸಿಟಿಯಲ್ಲಿ ಕೋಬ್ರಾ ವಿಕ್ರಮ್

ನಮ್ಮ ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿಯ ಕೋಬ್ರಾ ಸಿಲಿಕಾನ್ ಸಿಟಿಗೆ ಕಾಲಿಟ್ಟಿದೆ. ಹೃದಯಾಘಾತದಿಂದ ಚೇತರಿಸಿಕೊಂಡ ಬಳಿಕ ಇದೇ ಮೊದಲ ಬಾರಿ ಬೆಂಗಳೂರಿಗೆ ಬಂದ ವಿಕ್ರಮ್​ಗೆ ಗ್ರ್ಯಾಂಡ್ ವೆಲ್ಕಮ್ ಸಿಕ್ಕಿದೆ. ಇಷ್ಟಕ್ಕೂ ಕನ್ನಡಿಗರನ್ನ ಉದ್ದೇಶಿಸಿ ಚಿಯಾನ್ ವಿಕ್ಕಿ ಹೇಳಿದ್ದೇನು..? ಆ ಕ್ರೇಜ್ ಹೇಗಿತ್ತು ಅಂತೀರಾ..? ಈ ಸ್ಟೋರಿ ಓದಿ.

  • ಹೃದಯಾಘಾತದಿಂದ ಚೇತರಿಸಿಕೊಂಡು ಕರುನಾಡಿಗೆ ಎಂಟ್ರಿ

ಕೋಬ್ರಾ.. ಚಿಯಾನ್ ವಿಕ್ರಮ್ ಕರಿಯರ್​​ನ ಬಿಗ್ಗೆಸ್ಟ್ ಸಿನಿಮಾ. ಹೌದು.. ನಮ್ಮ ಕನ್ನಡದ ಕೆಜಿಎಫ್ ಗ್ಲಾಮರ್ ಡಾಲ್ ಶ್ರೀನಿಧಿ ಶೆಟ್ಟಿ ಲೀಡ್​ನಲ್ಲಿ ನಟಿಸಿರೋ ಈ ಸಿನಿಮಾ, ಟೀಸರ್ ಹಾಗೂ ಟ್ರೈಲರ್​ಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇದೀಗ ರಿಲೀಸ್​ಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದೇ ಆಗಸ್ಟ್ 31ಕ್ಕೆ ವರ್ಲ್ಡ್​ ವೈಡ್ ತೆರೆಗಪ್ಪಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ಯಾನ್ ಇಂಡಿಯಾ ಪ್ರೊಮೋಷನ್ಸ್ ಮಾಡ್ತಿದೆ.

ನಟ ವಿಕ್ರಮ್ ಕೂಡ ತಮ್ಮ ನಾಯಕನಟಿ ಶ್ರೀನಿಧಿ ಶೆಟ್ಟಿಯೊಂದಿಗೆ ನಮ್ಮ ಬೆಂಗಳೂರಿಗೆ ಬಂದು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಏರ್​ಪೋರ್ಟ್​ನಲ್ಲಿ ಇಳಿದ ಚಿಯಾನ್ ವಿಕ್ರಮ್​ಗೆ ಅದ್ಧೂರಿ ಸ್ವಾಗತ ಸಿಕ್ಕಿತು. ನಂತ್ರ ಕೋರಮಂಗಲದ ಫೋರಮ್ ಮಾಲ್​ನಲ್ಲಿ ಸಹಸ್ರಾರು ಅಭಿಮಾನಿಗಳನ್ನ ಉದ್ದೇಶಿಸಿ ವಿಕ್ರಮ್ ಮಾತನಾಡಿದ್ರು.

ಅಂದಹಾಗೆ ಇತ್ತೀಚೆಗೆ ಲಘು ಹೃದಯಾಘಾತದಿಂದ ಬಳಲಿದ್ದ ವಿಕ್ರಮ್, ಅದ್ರಿಂದ ಚೇತರಿಸಿಕೊಂಡ ಬಳಿಕ ಇದೇ ಮೊದಲ ಬಾರಿ ನಮ್ಮ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಮೇಕಿಂಗ್​ನಿಂದ ಸಖತ್ ಸದ್ದು ಮಾಡ್ತಿರೋ ಕೋಬ್ರಾ, ದೇಶ ವಿದೇಶಗಳಲ್ಲಿ ಚಿತ್ರಿತವಾಗಿದ್ದು, ಕಮಲ್ ದಶಾವತಾರಂ ರೀತಿ ವಿಕ್ರಮ್ ನಾನಾ ಅವತಾರಗಳಲ್ಲಿ ಕಾಣಸಿಗಲಿದ್ದಾರೆ.

ಜೀನಿಯಸ್ ಮ್ಯಾಥಮೆಟಿಷಿಯನ್ ಆಗಿ ವಿಕ್ರಮ್ ಕಮಾಲ್ ಮಾಡಲಿದ್ದು, ಅವ್ರ ಎದುರು ಕ್ರಿಕೆಟರ್ ಇರ್ಫಾನ್ ಪಠಾಣ್ ಖಡಕ್ ಖಳನಾಯಕನಾಗಿ ಅಬ್ಬರಿಸಲಿದ್ದಾರೆ. ಸ್ಕಾಟ್ಲೆಂಡ್ ಪ್ರಿನ್ಸ್ ಅಸಾಸಿನೇಷನ್ ಅಂತಹ ಕ್ರೈಂ ಜೊತೆ ಲಿಂಕ್ ಇರೋ ಕಥೆಯೊಂದಿಗೆ ನೋಡುಗರಿಗೆ ಮಸ್ತ್ ಮನರಂಜನೆ ಕೊಡೋಕೆ ಸಿದ್ಧವಾಗಿದೆ ಕೋಬ್ರಾ.

ಅನಿಯನ್ ರೀತಿಯ ಕಥೆಯೇ ಇರೋ ಕೋಬ್ರಾದಲ್ಲಿ ವಿಕ್ರಮ್ ಸ್ಟೈಲು, ಮ್ಯಾನರಿಸಂ ನೋಡೋಕೆ ಎಲ್ರೂ ಕಾತರರಾಗಿದ್ದಾರೆ. 90 ಕೋಟಿ ಭಾರೀ ಬಜೆಟ್​ನಲ್ಲಿ ತಯಾರಾದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಎಷ್ಟು ಕೋಟಿ ದೋಚುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES