Monday, December 23, 2024

ಹಾಲಿವುಡ್​ಗೆ ಜಬರ್ದಸ್ತ್  ‘ಪುಷ್ಪ’ರಾಜ್.. ತಗ್ಗೋದೆ ಇಲ್ಲ..!

ಜಬರ್ದಸ್ತ್​​​​​​ ಅ್ಯಕ್ಟಿಂಗ್​​ ಮೂಲಕ ಪೊಗರ್ದಸ್ತ್ ಆಗಿ ಅಬ್ಬರಿಸಿದ ನಟ ಅಲ್ಲು ಅರ್ಜುನ್​. ನಾನು ತಗ್ಗೋದೆ ಇಲ್ಲ ಎಂದಿದ್ದ ಪುಷ್ಪರಾಜ್​​​ ಬಾಕ್ಸ್ ಅಫೀಸ್​ ಲೆಕ್ಕಾಚಾರಗಳನ್ನು ಬುಡಮೇಲು ಮಾ​ಡಿದ್ದ. ಇದೀಗ ಅಲ್ಲು ಅರ್ಜುನ್​ ಭಾರತೀಯ ಚಿತ್ರರಂಗದಲ್ಲಿ ಟ್ರೆಂಡ್​ ಸೆಟ್ಟರ್​​ ಆಗಿದ್ದಾರೆ. ಸ್ಟೈಲೀಶ್​ ಐಕಾನ್​ಗೆ ಹಾಲಿವುಡ್​ನಿಂದಲೂ ಆಫರ್ಸ್​ ಬರ್ತಿದೆ. ಯೆಸ್​.. ಅಲ್ಲು ಖದರ್​ ಚೇಂಜ್​ ಅಗಿರೋ ಇಂಟ್ರೆಸ್ಟಿಂಗ್​ ಮಾಹಿತಿ ಇಲ್ಲಿದೆ.

  • ಸೂಪರ್​ ಹೀರೋ ಪಾತ್ರದಲ್ಲಿ ಟಾಲಿವುಡ್​ ಸೂಪರ್​ ಸ್ಟಾರ್​

ಪುಷ್ಪ ಸಿನಿಮಾ ಬಾಕ್ಸ್​​ ಆಫೀಸ್​ ಕೊಳ್ಳೆ ಹೊಡೆದ ಮೇಲೆ ಅಲ್ಲು ಅರ್ಜುನ್​​ಗೆ ಡಿಮ್ಯಾಂಡ್​ ಜಾಸ್ತಿಯಾಗಿದೆ. ದೇಶ ವಿದೇಶಗಳಲ್ಲಿ ತಗ್ಗೋದೆ ಇಲ್ಲ ಡೈಲಾಗ್​​ಗೆ ಸಿಕ್ಕ ರೆಸ್ಪಾನ್ಸ್​ ಅಲ್ಲು ಅರ್ಜುನ್​​ಗೆ ದೊಡ್ಡ ಬೇಡಿಕೆ ಸೃಷ್ಠಿ ಮಾಡಿದೆ. ಪ್ಯಾನ್​ ಇಂಡಿಯಾ ಸ್ಟಾರ್​ ಗ್ಲೋಬಲ್​ ಸ್ಟಾರ್​ ಆಗಿ ಮಿಂಚ್ತಿದ್ದಾರೆ. ಇದೀಗ ಸ್ಟೈಲೀಶ್​ ಐಕಾನ್​​ ರೆಕ್ಕೆ ಬಿಚ್ಚಿ ಹಾಲಿವುಡ್​​ಗೆ ಜಿಗಿಯಲಿದ್ದಾರೆ ಅನ್ನೋ ಸುದ್ದಿ ಬೆಂಕಿ ಬಿರುಗಾಳಿಯಂತೆ ಹರಿದಾಡ್ತಿದೆ.

ಯೆಸ್​​.. ಚಿತ್ತೂರು ಸ್ವಾಗ್​ನಲ್ಲಿ ಚಿತ್ರಪ್ರೇಮಿಗಳ ಹೃದಯ ಗೆದ್ದ ಸಿನಿಮಾ ಪುಷ್ಪ. ಪ್ರತಿ ಸಿನಿಮಾಗಳಲ್ಲಿ ಅಲ್ಲು ಅವರದ್ದು ಡಿಫರೆಂಟ್​ ಮ್ಯಾನರಿಸಂ. ಹೇರ್​ ಸ್ಟೈಲ್​​​, ಬಾಡಿ ಲಾಂಗ್ವೇಜ್​​ ಎಲ್ಲವೂ ಪ್ರೇಕ್ಷಕರ ದಿಲ್​ ದೋಚಿಬಿಡುತ್ತೆ. ನಟನಾ ವಿಚಾರದಲ್ಲಿ ಅಲ್ಲು ಅವ್ರ ಡೆಡಿಕೇಷನ್​ ಎಲ್ರು ಮೆಚ್ಚಲೇಬೇಕು. ದೊಡ್ಡ ಸ್ಟಾರ್​ಡಂ ಇದ್ರೂ, ಪ್ರತಿ ಸಿನಿಮಾಗೂ ಸಿಕ್ಕಾಪಟ್ಟೆ ತಯಾರಿ ನಡೆಸಿ ಅಭಿಮಾನಿಗಳಿಗೆ ಮಸ್ತ್​ ಮನರಂಜನೆ ನೀಡುತ್ತಾರೆ.

ಅಲ್ಲು ಆ್ಯಕ್ಟಿಂಗ್​​ಗೆ ಬಾಲಿವುಡ್​​​, ಹಾಲಿವುಡ್​ನಲ್ಲೂ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಅವ್ರ ಸಿನಿಮಾಗಳ ಡೈಲಾಗ್​ಗೆ ಇಂಟರ್​​ನ್ಯಾಷನಲ್​ ಲೆವೆಲ್​ನಲ್ಲಿ ರೆಸ್ಪಾನ್ಸ್​ ಸಿಗುತ್ತೆ. ವಿಶ್ವದ ಸ್ಟಾರ್​ ಕಲಾವಿದರು, ಸ್ಪೋರ್ಟ್ಸ್​​ಮನ್​​ಗಳು ಅವ್ರ ಹಾಡುಗಳನ್ನು ಇಮ್ಮಿಟೇಟ್​ ಮಾಡ್ತಾರೆ. ಇದೀಗ ಹಾಲಿವುಡ್​​​​​​​​ನಲ್ಲಿ ಸೂಪರ್​ ಹೀರೋ ರೋಲ್​ನಲ್ಲಿ ಅಲ್ಲು ಅಭಿನಯಿಸಲಿದ್ದಾರಂತೆ. ಅಲ್ಲುಗೆ ಹಾಲಿವುಡ್​ನಿಂದ ಬಂಪರ್​ ಆಫರ್​ ಬಂದಿದೆ ಅನ್ನೋ ಗಾಸಿಪ್​ ಎಲ್ಲ ಕಡೆ ಹರಿದಾಡ್ತಿದೆ.

ಇತ್ತೀಚೆಗೆ ನ್ಯೂಯಾರ್ಕ್​ ಪ್ರವಾಸದಲ್ಲಿದ್ದ ಅಲ್ಲು ಅರ್ಜುನ್​ಗೆ ಗ್ರ್ಯಾಂಡ್​ ವೆಲ್ಕಮ್​ ಸಿಕ್ಕಿದೆ. ಪ್ರಶಸ್ತಿ ಸ್ವೀಕರಿಸಲು ತೆರಳಿದ್ದ ಅಲ್ಲು ಅವ್ರನ್ನು ಸ್ಟಾರ್​ ನಿರ್ಮಾಪಕರು ಬೇಟಿ ಆಗಿದ್ದಾರಂತೆ. ಪುಷ್ಪನನ್ನು ಭೇಟಿ ಮಾಡಿ ಹಾಲಿವುಡ್​ ಸಿನಿಮಾದಲ್ಲಿ ನಟಿಸುವಂತೆ ಬುಲಾವ್​ ನೀಡಿದ್ದಾರೆ ಎನ್ನಲಾಗ್ತಿದೆ. ನ್ಯೂಯಾರ್ಕ್​​​​ಗೆ ಪತ್ನಿ ಜತೆ ತೆರಳಿದ್ದ ಅಲ್ಲು ಅರ್ಜುನ್​ ಅಲ್ಲಿನ ಮೇಯರ್​ ಎರಿಕ್​ ಆಡಮ್ಸ್​ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದರು. ಅಲ್ಲು ಕ್ರೇಜ್​ ನೋಡಿ ಹಾಲಿವುಡ್​ನಿಂದ ಬಂದಿರೋ ಆಫರ್​ ನಿಜವಾದ್ರೆ ಫ್ಯಾನ್ಸ್​ ಹಬ್ಬ ಮಾಡಲಿದ್ದಾರೆ. ಎನಿವೇ. ಆಲ್​ ದಿ ಬೆಸ್ಟ್​ ಪುಷ್ಪರಾಜ್​.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES