Monday, May 20, 2024

ಶ್ರೀಲಂಕಾ ವಿರುದ್ದ ಆಫ್ಘಾನ್​​​ಗೆ 8 ವಿಕೆಟ್​​ಗಳ ಭರ್ಜರಿ ಜಯ

ಸಂಪ್ರಾದಾಯಿಕ ಎದುರಾಳಿಗಳೆಂದೇ ಬಿಂಬಿಸಲ್ಪಟ್ಟಿರುವ ಭಾರತ ಹಾಗೂ ಪಾಕ್​ ನಡುವೆ ಏಷ್ಯಾ ಕಪ್​​ ಮಹಾಕದನಕ್ಕೆ ಕೌಂಟ್​​ಡೌನ್​​​​ ಶುರುವಾಗಿದೆ. ಮರುಳುಗಾಡಿನ ದುಬೈ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಭಾರತದ ಮೊದಲ ಪಂದ್ಯ ಪಾಕ್​​​ ವಿರುದ್ದ ನಡೆಯಲಿದೆ. ಆದರೆ ಕಳೆದ ಟಿ20 ವಿಶ್ವಕಪ್​ ನಲ್ಲಿ ಪಾಕಿಸ್ತಾನ ತಂಡವು ಭಾರತದ ವಿರುದ್ಧ ಗೆದ್ದಿತ್ತು. ಹೀಗಾಗಿ ಈ ಪಂದ್ಯದವು ಮತ್ತಷ್ಟು ಮಹತ್ವ ಪಡೆದುಕೊಂಡಿದ್ದು, ಭಾರತ ತನ್ನ ಸೇಡನ್ನು ತಿರಿಸಿಕೊಳ್ಳಲು ರೆಡಿಯಾಗಿದೆ. ಇತ್ತ ಈ ಪಂದ್ಯಕ್ಕೆ ಉಭಯ ದೇಶದ ಅಭಿಮಾನಗಳು ಕಾತುರದಿಂದ ಕಾಯುತ್ತಿದ್ದರೆ.

ಇನ್ನು ರನ್ ಮಷೀನ್ ಎನಿಸಿಕೊಂಡಿದ್ದ ಟೀಂ ಇಡಿಯಾದ ಮಾಜಿ ನಾಯಕ ವಿರಾಟ್​​​ ಕೊಹ್ಲಿ ಪಾಲಿಗೆ ಕಮ್​​​​​ ಬ್ಯಾಕ್​​​ ಸರಣಿ ಇದಾಗಿದೆ, 6 ವಾರಗಳ ವಿಶ್ರಾಂತಿಯ ಬಳಿಕ ವಿರಾಟ್ ಕೊಹ್ಲಿ, ಮೈದಾನಕ್ಕಿಳಿಯಲು ಸಜ್ಜಾಗಿದ್ದು, ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಫಾರ್ಮ್‌ಗೆ ಮರಳುತ್ತಾರಾ ಎನ್ನುವ ಕುತೂಹಲ ಇದೀಗ ಜೋರಾಗಿದೆ.

15ನೇ ಆವೃತ್ತಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಆಫ್ಘಾನ್​​​ ತಂಡ ಶ್ರೀಲಂಕಾ ವಿರುದ್ದ 8 ವಿಕೆಟ್​​ಗಳ ಭರ್ಜರಿ ಜಯಗಳಿಸುವ ಮೂಲಕ ಆಫ್ಘಾನಿಸ್ತಾನ ತನ್ನ ಖಾತೆಯನ್ನು ತೆರೆದಿದೆ, ಇತ್ತ ಏಷ್ಯಾಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧವೈರಿಗಳಾದ ಭಾರತ ಮತ್ತು ಪಾಕ್​​​​ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟೂರ್ನಿಯ ಮೊದಲ ಗೆಲುವಿಗಾಗಿ ಸೆಣಸಾಡಲಿವೆ.

RELATED ARTICLES

Related Articles

TRENDING ARTICLES