ಸಂಪ್ರಾದಾಯಿಕ ಎದುರಾಳಿಗಳೆಂದೇ ಬಿಂಬಿಸಲ್ಪಟ್ಟಿರುವ ಭಾರತ ಹಾಗೂ ಪಾಕ್ ನಡುವೆ ಏಷ್ಯಾ ಕಪ್ ಮಹಾಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಮರುಳುಗಾಡಿನ ದುಬೈ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಭಾರತದ ಮೊದಲ ಪಂದ್ಯ ಪಾಕ್ ವಿರುದ್ದ ನಡೆಯಲಿದೆ. ಆದರೆ ಕಳೆದ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡವು ಭಾರತದ ವಿರುದ್ಧ ಗೆದ್ದಿತ್ತು. ಹೀಗಾಗಿ ಈ ಪಂದ್ಯದವು ಮತ್ತಷ್ಟು ಮಹತ್ವ ಪಡೆದುಕೊಂಡಿದ್ದು, ಭಾರತ ತನ್ನ ಸೇಡನ್ನು ತಿರಿಸಿಕೊಳ್ಳಲು ರೆಡಿಯಾಗಿದೆ. ಇತ್ತ ಈ ಪಂದ್ಯಕ್ಕೆ ಉಭಯ ದೇಶದ ಅಭಿಮಾನಗಳು ಕಾತುರದಿಂದ ಕಾಯುತ್ತಿದ್ದರೆ.
ಇನ್ನು ರನ್ ಮಷೀನ್ ಎನಿಸಿಕೊಂಡಿದ್ದ ಟೀಂ ಇಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಕಮ್ ಬ್ಯಾಕ್ ಸರಣಿ ಇದಾಗಿದೆ, 6 ವಾರಗಳ ವಿಶ್ರಾಂತಿಯ ಬಳಿಕ ವಿರಾಟ್ ಕೊಹ್ಲಿ, ಮೈದಾನಕ್ಕಿಳಿಯಲು ಸಜ್ಜಾಗಿದ್ದು, ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಫಾರ್ಮ್‌ಗೆ ಮರಳುತ್ತಾರಾ ಎನ್ನುವ ಕುತೂಹಲ ಇದೀಗ ಜೋರಾಗಿದೆ.
15ನೇ ಆವೃತ್ತಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಆಫ್ಘಾನ್ ತಂಡ ಶ್ರೀಲಂಕಾ ವಿರುದ್ದ 8 ವಿಕೆಟ್ಗಳ ಭರ್ಜರಿ ಜಯಗಳಿಸುವ ಮೂಲಕ ಆಫ್ಘಾನಿಸ್ತಾನ ತನ್ನ ಖಾತೆಯನ್ನು ತೆರೆದಿದೆ, ಇತ್ತ ಏಷ್ಯಾಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧವೈರಿಗಳಾದ ಭಾರತ ಮತ್ತು ಪಾಕ್ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟೂರ್ನಿಯ ಮೊದಲ ಗೆಲುವಿಗಾಗಿ ಸೆಣಸಾಡಲಿವೆ.