Monday, December 23, 2024

ಅಮ್ಮನ ಬರ್ತ್ ಡೇಗೆ ಅಭಿಷೇಕ್ ನ್ಯೂ ಮೂವಿ ಲಾಂಚ್

ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ತಮ್ಮ ತಾಯಿ ಸುಮಲತಾ ಬರ್ತ್ ಡೇಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಐತಿಹಾಸಿಕ ಕಥಾನಕಕ್ಕೆ ಕೈ ಹಾಕಿರೋ ಅಭಿ, ವಾರಿಯರ್ ಆಗಿ ಯುದ್ಧ ಭೂಮಿಯಲ್ಲಿ ನೆತ್ತರು ಹರಿಸಲಿದ್ದಾರೆ. ಅದ್ರ ಫಸ್ಟ್ ಲುಕ್ ಪೋಸ್ಟರ್ ಜೊತೆ ಪ್ರೊಡಕ್ಷನ್ ಹೌಸ್ ಕೂಡ ರಿವೀಲ್ ಆಗಿದೆ.

  • ಅಪ್ಪನ ಸಮಾಧಿ ಬಳಿ ಅಮ್ಮನ ಬರ್ತ್ ಡೇ ಕೇಕ್ ಕಟಿಂಗ್
  • ಯುದ್ಧಭೂಮಿಯಲ್ಲಿ ನೆತ್ತರು ಹರಿಸಲಿರೋ ವಾರಿಯರ್ ​​​

ಅಮರ್ ಸಿನಿಮಾದ ಬಳಿಕ ಅಭಿಷೇಕ್ ಅಂಬರೀಶ್ ತಮ್ಮ ಎರಡನೇ ಸಿನಿಮಾ ಬ್ಯಾಡ್ ಮ್ಯಾನರ್ಸ್​ನಲ್ಲಿ ಬ್ಯುಸಿ ಆಗಿದ್ದಾರೆ. ಸುಕ್ಕಾ ಸೂರಿಯ ಬ್ಯಾಡ್ ಮ್ಯಾನರ್ಸ್​ ಶೂಟಿಂಗ್ ಬಹುತೇಕ ಮುಗಿದಿದ್ದು, ಮೂರನೇ ಪ್ರಾಜೆಕ್ಟ್ ಕಾಳಿ ಅನೌನ್ಸ್ ಆಗಿದೆ. ಇದೀಗ ಕಾಳಿಗೂ ಮುನ್ನ AA-4 ಅನ್ನೋ ನಾಲ್ಕನೇ ವೆಂಚರ್ ಸಖತ್ ಸದ್ದು ಮಾಡ್ತಿದೆ. ಅಂಬರೀಶಗ ಬರ್ತ್ ಡೇಗೆ ಎಎ4 ಅನೌನ್ಸ್ ಆಗಿತ್ತು, ಇಂದು ಸುಮಲತಾ ಅಂಬರೀಶ್ ಬರ್ತ್ ಡೇಗೆ ಚಿತ್ರದ ಫಸ್ಟ್ ಲುಕ್ ಹಾಗೂ ಪ್ರೊಡಕ್ಷನ್ ಹೌಸ್ ರಿವೀಲ್ ಆಗಿದೆ.

ಅಂಬಿ ಸಮಾಧಿ ಬಳಿ ಸುಮಲತಾ ಅವ್ರ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಅಭಿಷೇಕ್ ಅಂಬರೀಶ್, ತಮ್ಮ ನಾಲ್ಕನೇ ಸಿನಿಮಾದ ನಿರ್ಮಾಪಕರು ಧೀರ ರಾಕ್​ಲೈನ್ ವೆಂಕಟೇಶ್ ಅನ್ನೋದನ್ನ ಬಹಿರಂಗಪಡಿಸಿದ್ರು. ಇದೇ ಮೊದಲ ಬಾರಿ ಐತಿಹಾಸಿಕ ಸಿನಿಮಾಗೆ ಕೈಹಾಕಿರೋ ಅಭಿ, ತಂದೆಯ ಆತ್ಮೀಯ ಗೆಳೆಯ ರಾಕ್​ಲೈನ್ ವೆಂಕಟೇಶ್​ರ ಪ್ರೊಡಕ್ಷನ್​ನಲ್ಲಿ ಕೆಲಸ ಮಾಡಲಿದ್ದಾರೆ.

ಇನ್ನು ಅಯೋಗ್ಯ ಮಹೇಶ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಅಭಿಷೇಕ್​ರನ್ನ ಯುದ್ಧಭೂಮಿಯಲ್ಲಿ ನಿಲ್ಲಿಸಿ, ವಾರ್ ಮಾಡ್ತಿರೋ ಭಯಾನಕ ಹಾಗೂ ಭೀಭತ್ಸವಾದ ಲುಕ್​ಗಳಲ್ಲಿ ತೋರಿಸಿದ್ದಾರೆ. ಸದ್ಯ ಫಸ್ಟ್ ಲುಕ್ ನೋಡಿಯೋ ದಂಗಾಗಿರೋ ಸಿನಿರಸಿಕರಿಗೆ, ಈ ಸಿನಿಮಾದಿಂದ ಮತ್ತಷ್ಟು ಕಿಕ್ ಕೊಡಲಿದ್ದಾರಂತೆ.

ಒಟ್ಟಾರೆ ಅಭಿಷೇಕ್​ಗೆ​ ಕರಿಯರ್​ನ ಆರಂಭದ ದಿನಗಳಲ್ಲೇ ಇಂತಹ ಪ್ರಯೋಗಾತ್ಮಕ ಪಾತ್ರ ಸಿಕ್ಕಿರೋದು ಅವ್ರ ಸಿನಿಮೋತ್ಸಾಹದ ಕೈಗನ್ನಡಿ ಅನಿಸಿದೆ. ಈ ಸಿನಿಮಾ ಚರಿತ್ರೆ ಸೃಷ್ಟಿಸೋ ಲಕ್ಷಣ ತೋರಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳು ಬಹಿರಂಗವಾಗಲಿವೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವ

RELATED ARTICLES

Related Articles

TRENDING ARTICLES