ವಿಜಯನಗರ: ಉತ್ತಾಖಂಡದ ಮಸ್ಸೂರಿಯಲ್ಲಿ ಭಾವಿ ಐಎಎಸ್ಗಳಿಗೆ ಜಿಲ್ಲೆಯ ಹೂವಿನಗಡಗಲಿ ತಾಲೂಕಿನ ದೇವಗೊಂಡನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಂದಿಹಳ್ಳಿ ಮಹೇಂದ್ರ ಪಾಠ ಮಾಡಲಿದ್ದಾರೆ.
ಆಗಸ್ಟ್ 29 ಕ್ಕೆ ಉತ್ತರಾಖಂಡಕ್ಕೆ ತೆರಳಲಿರೋ ಮಹೇಂದ್ರ, ಕೇಂದ್ರ ಸರ್ಕಾರ ಪ್ರಮುಖ ಯೋಜನೆಗಳ ಅನುಷ್ಠಾನ ಕುರಿತು ತರಬೇತಿಯಲ್ಲಿ ಭಾಗಿಯಾಗಿ, ಆ.30 ರಂದು ನಡೆಯಲಿರೋ ತರಬೇತಿ ಶಿಬಿರದಲ್ಲಿ 500 ಭಾವಿ ಐಎಎಸ್’ ಅಧಿಕಾರಿಗಳಿಗೆ ತರಬೇತಿ ನೀಡಲಿದ್ದಾರೆ.
ತನ್ನ ಗ್ರಾ.ಪಂ ವ್ಯಾಪ್ತಿಯ ಗುಜನೂರು ನರೇಗಾ ಅಡಿ ಕೆರೆ ನಿರ್ಮಾಣ ಮಾಡಿದ್ದರು. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಯೋಜನೆ ಅಡಿ ಕ್ಯಾಚ್ ದಿ ರೇನ್, ಜಲಶಕ್ತಿ ಅಭಿಯಾನ, ಅಮೃತ ಸರೋವರ ಕೆರೆ ನಿರ್ಮಾಣ, ಸರ್ಕಾರಿ ಶಾಲೆ, ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರಕ್ಕಾಗಿ ಕೈತೋಟ ನಿರ್ಮಾಣ ಮಾಡಿದ್ದರು.
ಅಲ್ಲದೇ, ಹಳ್ಳಿ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಜಲ ಜೀವನ್ ಮಿಷನ್ ಹಳ್ಳಿಗಳಲ್ಲೂ ಡಿಜಿಟಲ್ ಗ್ರಂಥಾಲಯ, ಮಾದರಿ ಶಾಲೆ ಬಗ್ಗೆ ತರಬೇತಿ ಮಹೇಂದ್ರ ನೀಡಲಿದ್ದಾರೆ.