ಉತ್ತರ ಪ್ರದೇಶ:ಉತ್ತರ ಪ್ರದೇಶದ ನೋಯ್ಡಾ ಸೂಪರ್‌ಟೆಕ್‌ನ ಅಕ್ರಮ ಎರಡು ಗೋಪುರ ಕಟ್ಟಡವನ್ನ ಇಂದು ಮಧ್ಯಾಹ್ನ ಬಿಗಿ ಪೊಲೀಸ್ ಭದ್ರತೆಯೊಂದಿಗೆ ನೆಲಸಮಗೊಳಿಸಲಾಯಿತು.
ಈ ಕಟ್ಟಡವನ್ನು 2009 ರಲ್ಲಿ ನೋಯ್ಡಾದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿತ್ತು. ಇಂದು ಸುಮಾರು 15 ಸೆಕೆಂಡ್ನಲ್ಲಿ ಕಟ್ಟಡ ನೆಲಸಮ ಮಾಡಲಾಯಿತು. 12-15 ನಿಮಿಷಗಳ ಕಾಲ ಧೂಳು ಈ ಸ್ಥಳದಲ್ಲಿ ಆವರಿಸುತ್ತದೆ ಎಂದು ನೋಯ್ಡಾ ಪ್ರಾಧಿಕಾರ ಹೇಳಿದೆ.
ಅಕ್ರಮವಾಗಿ ನಿರ್ಮಾಣ ಮಾಡಿದ್ದ ಸುಪ್ರೀಂ ನಿರ್ದೇಶನದಂತೆ ಕಟ್ಟಡಗಳನ್ನು ಕೆಡವಲು ನೋಯ್ಡಾ ಪ್ರಾಧಿಕಾರ ಹೇಳಿತ್ತು. ಈ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ 2.30ಕ್ಕೆ ನೋಯ್ಡಾ ಅವಳಿ ಗೋಪುರ ಕಟ್ಟಡ ಧ್ವಂಸ ಕಾರ್ಯ ನಡೆಯಿತು. ಗೋಪುರಗಳು 100 ಮೀಟರ್‌ಗಿಂತ ಹೆಚ್ಚು ಎತ್ತರವಾಗಿವೆ. 40 ಅಂತಸ್ತುಗಳ ಈ ಬೃಹತ್ ಕಟ್ಟಡ ಇದಾಗಿದ್ದು, ಕಟ್ಟಡದ ರಂಧ್ರಗಳಲ್ಲಿ 3700 ಕೆ.ಜಿ ತೂಕದ ಸ್ಪೋಟಕ ಇಟ್ಟು ಸ್ಪೋಟಿಸಲಾಯಿತು.