Thursday, December 26, 2024

ತಮಿಳುನಾಡಿನಿಂದ ಕಾರವಾರಕ್ಕೆ ಬಂದಿದ್ದ ಪ್ರೇಮಿಗಳು ಪೊಲೀಸರ ಬಲೆಗೆ

ಕಾರವಾರ: ತಮಿಳುನಾಡಿನಿಂದ ಕಾರವಾರಕ್ಕೆ ಬಂದು ನೆಲೆಸಿದ್ದ ಪ್ರೇಮಿಗಳನ್ನ ಕಾರವಾರ ಪೊಲೀಸರು ತಮಿಳುನಾಡಿನ ಪೊಲೀಸರಿಗೆ ಒಪ್ಪಿಸಿದ್ದಾರೆ.

ತನ್ನ ಬಾಲ್ಯದ ಗೆಳತಿ ಅಯಿಸಾಳಿಗೆ(24) ಮದುವೆಯಾಗಿ ಎರಡು ಮಕ್ಕಳಿದ್ದರು, ಮೈದಿನ್ (27) ಹಾಗೂ ಅಯಿಸಾಳ ನಡುವೆ ಪ್ರೇಮಾಂಕೂರವಾಗಿತ್ತು. ಮೈದುನ್ ಮೆಕಾನಿಕಲ್ ಇಂಜಿನಿಯರ್ ಪದವೀಧರವಾಗಿದ್ದು, ಆರು ತಿಂಗಳಿನಿಂದ ತಮಿಳುನಾಡು ತೊರೆದು ಕಾರವಾರ ತಾಲೂಕಿನ ಸೋನಾರವಾಡದಲ್ಲಿದ್ದ ಬಂದು ಈ ಪ್ರೇಮಿಗಳು ವಾಸಿಸುತ್ತಿದ್ದರು.

ಈ ಪ್ರೇಮಿಗಳು ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಗಣೇಶ್‌ ನಗರದ ನಿವಾಸಿಗಳಾಗಿದ್ದು, ಯುವತಿ ಈಗ ಮೂರು ತಿಂಗಳು ಗರ್ಭಿಣಿಯಾಗಿದ್ದಾಳೆ. ತನಗೆ ಇಷ್ಟವಿಲ್ಲದೆ ಮತ್ತೊಬ್ಬನ ಜತೆಗೆ ಆಯಿಸಾ ಮದುವೆಯಾಗಿದ್ದಳು. ತನ್ನ ಪ್ರೇಮಿಯೊಂದಿಗೆ ತಮಿಳುನಾಡಿನಿಂದ ಕಾರವಾರಕ್ಕೆ ಓಡಿ ಬಂದು ಇಲ್ಲೆ ನೆಲೆಸಿದ್ದರು.

ಯುವಕ ಬೀರ್ ಮೈದುನ್ ಮೆಕಾನಿಕಲ್ ಇಂಜಿನಿಯರ್ ಪದವೀಧರನಾಗಿದ್ದು, ಕಾರವಾರದಲ್ಲಿ ಗಾರೆ ಕೆಲಸ ಮಾಡಿ ತನ್ನ ಪ್ರೇಮಿಯೊಂದಿಗೆ ಜೀವನ ನಡೆಸುತ್ತಿದ್ದ, ಪ್ರೇಮಿಗಳನ್ನ ಪತ್ತೆ ಮಾಡಿ ತಮಿಳಿನಾಡಿನ ಪೊಲೀಸರಿಗೆ ಮತ್ತು ಯುವತಿ ಮಾವನಿಗೆ ಕಾರವಾರ ಪೊಲೀಸರು ಒಪ್ಪಿಸಿದ್ದಾರೆ.

RELATED ARTICLES

Related Articles

TRENDING ARTICLES