ಬೆಂಗಳೂರು: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಪ್ರತಿಷ್ಠಾಪನೆಗೆ ಕುರಿತು ಕಂದಾಯ, ಬಿಬಿಎಂಪಿ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಕೋರ್ಟ್ ಆದೇಶಗಳನ್ನ ಕೂಡ ಪರಿಶೀಲನೆ ಮಾಡಲಾಯ್ತು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಬಗ್ಗೆ ಎಜಿ ಜೊತೆ ಕೂಡ ಮಾತನಾಡಿದ್ದೇವೆ. ಪೊಲೀಸ್ ಇಲಾಖೆ ಬಂದೋಬಸ್ತ್ ಬಗ್ಗೆ ಅವರು ಕೂಡ ಅಭಿಪ್ರಾಯ ವ್ಯಕ್ತಮಾಡಿದ್ದಾರೆ. ಐದು ಅರ್ಜಿಗಳನ್ನ ಪರಿಶೀಲನೆ ಮಾಡಿದ್ದೇವೆ. ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಪ್ರತಿಷ್ಠಾಪನೆಗೆ 2 ಅರ್ಜಿಗಳು ಮಾತ್ರ ಲೋಕಲ್ ನವರು ಅರ್ಜಿ ಕೊಟ್ಟಿದ್ದಾರೆ. ಇನ್ನುಳಿದವರು 2 ದಿನದಲ್ಲಿ ಅರ್ಜಿ ಕೊಡೋಕೆ ಅವಕಾಶ ಕೊಡುತ್ತೇವೆ. ಮುಸ್ಲಿಂ ಸಂಘಟನೆಗಳು ಈ ಮೈದಾನಕ್ಕೋಸ್ಕರ ಫೈಟ್ ಮಾಡ್ತಿದ್ದಾರೋ ಅವರು ಸುಪ್ರೀಂಕೋರ್ಟ್ ಗೆ ಸೋಮವಾರ ಅಪೀಲ್ ಹೋಗ್ತಾರೆ ಎನ್ನೋ ಮಾಹಿತಿ ಇದೆ. ಹೀಗಾಗಿ ಸಾರ್ವಜನಿಕರಿಗೆ ಹೇಳ್ತಿದ್ದೇನೆ ಅರ್ಜಿ ಹಾಕೋರು ಹಾಕಬಹುದು. ನಾನು ಕಂದಾಯ ಸಚಿವನಾಗಿ ಆಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
ಸಿಎಂ ಜೊತೆ ಸುಮಾರು 2 ಗಂಟೆಗಳ ಕಾಲ ಇದರ ಬಗ್ಗೆ ಚರ್ಚೆ ನಡೆಸಿದ್ದೇನೆ. ಇವತ್ತು ಸಭೆ ನಡೆಸುವಂತೆ ಸೂಚಿಸಿದ್ರು, ಅದರಂತೆ ಸಭೆ ಮಾಡಿದ್ದೇವೆ. ಸಭೆಯಲ್ಲಿ ಗಣೇಶೋತ್ಸವ ಮಾಡೋದಾದರೇ ಹೇಗೆ ಮಾಡಬೇಕು. ಮುಂಜಾಗ್ರತಾ ಕ್ರಮಗಳೇನು ತೆಗೆದುಕೊಳ್ಳಬೇಕು. ಎಲ್ಲಿ ಕೂರಿಸಬೇಕು, ಸಂಭ್ರಮಾಚರಣೆ ಬಗ್ಗೆ ಜೊತೆಗೆ ಮೆರವಣಿಗೆ ಎಲ್ಲಿಂದ ಸಾಗಬೇಕು ಪ್ರತಿಯೊಂದರ ಬಗ್ಗೆ ಇವತ್ತು ಚರ್ಚೆ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.
ಆಗಸ್ಟ್ 15ಕ್ಕೆ ಕಂದಾಯ ಇಲಾಖೆಯಿಂದ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಿದ್ದೇವೆ. ಅದೇ ರೀತಿ ಜೊತೆಗೆ ಚಾಣಕ್ಯ ತಂತ್ರದ ಮೇಲೆ ಮಾಡಬೇಕು ಅಂತಾ ಅಶೋಕ್ ಹೇಳಿದರು.