Sunday, December 22, 2024

ಮುರುಘಾ ಮಠದ ಶ್ರೀಗಳ ಮೇಲೆ ಲೈಂಗಿಕ ಆರೋಪ: ಕುಮಾರಸ್ವಾಮಿ ಕಳವಳ

ರಾಮನಗರ: ಮುರುಘಾ ಮಠದ ಶರಣರ ಲೈಂಗಿಕ ದೌರ್ಜನ್ಯ ಆರೋಪ ಅಡಿ ಮಕ್ಕಳ ಪರ ಮೈಸೂರಿನಲ್ಲಿ ಪ್ರಕರಣ ದಾಖಲಾದ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಚನ್ನಪಟ್ಟಣದಲ್ಲಿ ಮಾತನಾಡಿದ, ಇದು ನನಗೆ ಆಶ್ಚರ್ಯ ತಂದ ವಿಚಾರವಲ್ಲ. ಇದರ ಬಗ್ಗೆ ಕಳೆದ ಐದಾರು ತಿಂಗಳ ಹಿಂದೆ ಹಲವಾರು ಜನರು ಚರ್ಚೆಗಳು ನಡೆಸುತ್ತಿದ್ದರು. ಈ ವಿಚಾರವನ್ನ ಪ್ರಾರಂಭಿಕ ಹಂತದಲ್ಲೆ ಮುಂಜಾಗ್ರತೆ ವಹಿಸಬೇಕಿತ್ತು. ಸಾರ್ವಜನಿಕವಾಗಿ ಬರುವುದರಿಂದ ಧಾರ್ಮಿಕ ಕ್ಷೇತ್ರದ ಮೇಲೆ ಬೇರೆ ಪರಿಣಾಮ ಬೀರಬಾರದು ಎಂದು ಕಳವಳ ವ್ಯಕ್ತಪಡಿಸಿದರು.

ಈಗಾಗಲೇ ಒಂದು ಬಾರಿ ಹೊಸನಗರದ ಸ್ವಾಮೀಜಿಗೆ ಮೇಲೆ ಇಂತಹ ಲೈಂಗಿಕ ಕಿರುಕುಳ ಆರೋಪದ ಘಟನೆ ನಡೆದಿತ್ತು. ಇವತ್ತು ಇವರ ಮೇಲೆ ಪ್ರಾರಂಭವಾಗಿದೆ. ನಮ್ಮ ನಮ್ಮ ಭಾವನೆಗಳಿಗೆ ಧಕ್ಕೆಯಾಗಬಾರದು. ಇಂತಹ ವಿಚಾರದಲ್ಲಿ ಕಾನೂನು ಬಾಹಿರವಾಗಿ ಮಾಡಿದ್ದರೆ ಸರ್ಕಾರ ಒಂದು ತೀರ್ಮಾನಕ್ಕೆ ಬರಬೇಕು ಎಂದು ಹೆಚ್​ಡಿಕೆ ಹೇಳಿದರು.

RELATED ARTICLES

Related Articles

TRENDING ARTICLES