Wednesday, January 22, 2025

ಮಹಿಳೆ ಮೇಲೆ ಹೆಡೆಎತ್ತಿ ಕುಳಿತ ಬುಸ್-ಬುಸ್​ ನಾಗ.!

ಕಲಬುರಗಿ: ತಮ್ಮ ಜಮೀನಿನಲ್ಲಿ ಮಲಗಿದ್ದ ಮಹಿಳೆ ಮೇಲೆ ಹೆಡೆಎತ್ತಿ ನಾಗರಹಾವು ಕುಳಿತು ಕೊಂಡ ಘಟನೆ ಜಿಲ್ಲೆಯ ಮಲ್ಲಾಬಾದ್ ಗ್ರಾಮದಲ್ಲಿ ವಿಚಿತ್ರ ಹಾಗೂ ಪವಾಡ ರೀತಿಯಲ್ಲಿ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದ ಭಾಗಮ್ಮ ಬಡದಾಳ್ ಎಂಬುವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ತಮ್ಮ ಜಮೀನಿನಲ್ಲಿ ಭಾಗಮ್ಮ ಮಲಗಿದ್ದಾಗ ಮೈ ಮೇಲೆ ಹೆಡೆಎತ್ತಿ ನಾಗರಹಾವು ಕುಳಿತುಕೊಂಡಿದೆ.

ಈ ವೇಳೆ ಮಹಿಳೆ ಕಾಪಾಡು ಶ್ರೀಶೈಲ ಮಲ್ಲಯ್ಯ ಅಂತಾ ಭಾಗಮ್ಮ ಪ್ರಾರ್ಥಿಸಿದ್ದಾಳೆ. ಕೆಲಹೊತ್ತು ಭಾಗಮ್ಮನ ಮೇಲೆ ಹಾವು ಹತ್ತಿ ಕುಳಿತು ನಂತರ ಸ್ಥಳದಿಂದ ನಾಗರಹಾವು ಕಾಲ್ಕಿತ್ತದ್ದಾಳೆ. ಮಹಿಳೆ ಮೇಲೆ ನಾಗರಹಾವು ಹೆಡೆಎತ್ತಿ ಕುಳಿತ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

RELATED ARTICLES

Related Articles

TRENDING ARTICLES