Monday, December 23, 2024

ತಮ್ಮನಿಗೆ ಹೆಗಲು ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು: ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಕಿರಿಯ ಸಹೋದರ ರಾಮೇಗೌಡ ಅವರ ಅಂತ್ಯಕ್ರಿಯೆ ಹಾಲುಮತದ ಸಂಪ್ರದಾಯದಂತೆ ಇಂದು ನೆರೆವೇರಿತು.

ಸಿದ್ದರಾಮಯ್ಯ ತಮ್ಮ ರಾಮೇಗೌಡ ಅವರ ಅಂತ್ಯಕ್ರಿಯೆಯು ಹಾಲುಮತದ ಸಂಪ್ರದಾಯದಂತೆ ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ನಡೆಯಿತು. ಶವಯಾತ್ರೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ಯತೀಂದ್ರ ಸಿದ್ದರಾಮಯ್ಯ‌ ಹೆಗಲು ಕೊಟ್ಟರು.

ಮೈಸೂರಿನ ಸಿದ್ದರಾಮಯ್ಯನಹುಂಡಿ ಗ್ರಾಮದ ನಿವಾಸಿಯಾಗಿದ್ದ ಸಿದ್ದರಾಮಯ್ಯ ಅವರ ಸಹೋದರ ರಾಮೇಗೌಡರಿಗೆ 67 ವರ್ಷ ವಯಸ್ಸು ಆಗಿತ್ತು. ಮೂಲ ಕೃಷಿಕರಾಗಿದ್ದ ಅವರು ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ನಿನ್ನೆ ತಡ ರಾತ್ರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದರು.

RELATED ARTICLES

Related Articles

TRENDING ARTICLES