Monday, December 23, 2024

ಶಿವಮೊಗ್ಗದಲ್ಲಿ ಗಣೇಶೋತ್ಸವ, ಜಿಲ್ಲೆಯಿಂದ ಇಬ್ಬರು ರೌಡಿಗಳು ಗಡಿಪಾರು

ಶಿವಮೊಗ್ಗ: ಶಿವಮೊಗ್ಗದಲ್ಲಿ ಶಾಂತಿಯುತ ಗಣೇಶೋತ್ಸವ ಆಚರಣೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಅಶಾಂತಿ ಮೂಡಿಸುವವರ ಮೇಲೆ ಪೊಲೀಸರ ಕಣ್ಗಾವಲು ಇಡಲಾಗಿದ್ದು, ಈಗಾಗಲೇ ಇಬ್ಬರು ರೌಡಿಗಳನ್ನ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.

ಶಾಂತಿ ಗಣೇಶೋತ್ಸವ ಪ್ರತಿಷ್ಠಾಪನೆಗೆ ಇನ್ನೂ 9 ರೌಡಿಗಳ ಗಡಿಪಾರಿಗೆ ಪೊಲೀಸ್​ ಇಲಾಖೆ ಶಿಫಾರಸು ಮಾಡಿದ್ದು, ಗೂಂಡಾ ಕಾಯ್ದೆಯಡಿ ಟಿಪ್ಪು ನಗರದ ಜಮೀರ್ ಅಲಿಯಾಸ್​ ಬಚ್ಚಾ ಅಲಿಯಾಸ್​ ಬಚ್ಚನ್ ಬಿನ್ ಚಾಂದ್ ಫೀರ್(31) ಬಂಧಿತ.
ತನ್ನ 17ನೇ ವಯಸ್ಸಿನಿಂದಲೇ ರೌಡಿ ಮತ್ತು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಚ್ಚಾ.
ತನ್ನ ಸಹಚರರೊಂದಿಗೆ ಅಕ್ರಮ ಕೂಟ ಕಟ್ಟಿಕೊಂಡು, ಮಾರಕಾಸ್ತ್ರವನ್ನು ಹಿಡಿದುಕೊಂಡು, ಕೊಲೆ ಪ್ರಯತ್ನ, ದರೋಡೆ, ಸುಲಿಗೆ, ಮೋಸ ಮತ್ತು ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿಪಡಿಸುವುದು ಮುಂತಾದ ಅಪರಾಧ ಕೃತ್ಯಗಳಲ್ಲಿ ಭಾಗಿ ಆರೋಪ ಕೇಳಿಬಂದಿದೆ.

ಈತನ ವಿರುಧ್ದ ಶಿವಮೊಗ್ಗ ಜಿಲ್ಲೆ, ಬೆಂಗಳೂರು ನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 22 ಅಪರಾಧ ಪ್ರಕರಣಗಳು ದಾಖಲು. ಈತನ ವಿರುದ್ಧ ರೌಡಿಶೀಟ್​ ಮತ್ತು ಎಂಓಬಿ ಕಾರ್ಡ್ ಪೊಲೀಸರು ತೆರೆದಿದ್ದಾರೆ. ಈತನ ವಿರುದ್ಧ ಪ್ರಕರಣ ದಾಖಲಿಸಿ ಬಾಂಡ್ ಓವರ್ ಮಾಡಿದ್ದರೂ ಬಾಂಡ್ ನ ಷರತ್ತುಗಳನ್ನು ಉಲ್ಲಂಘಿಸಿ ಅಪರಾಧಿಕ ಕೃತ್ಯಗಳಲ್ಲಿ ಭಾಗಿ. ಈತನ ಅಪರಾಧ ಚಟುವಟಿಕೆ ತಡೆಗಟ್ಟಲು ಸಾದ್ಯವಾಗದೇ ಇರುವುದರಿಂದ ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡುವಂತೆ ಕೋರಿ ಎಸ್.ಪಿ. ಬಿ.ಎಂ. ಲಕ್ಷ್ಮೀಪ್ರಸಾದ್​ ಅವರು ಡಿಸಿಗೆ ಪ್ರಸ್ತಾವನೆ ಸಲ್ಲಿಸಿದ್ದರು, ಈಗ ಈ ಓರ್ವನ ಬಂಧನದ ಅವಧಿ ವಿಸ್ತರಣೆ ಮಾಡಲಾಗಿದೆ.

ಬಚ್ಚಾನನ್ನು ಕಲಬುರಗಿ ಕೇಂದ್ರ ಕಾರಾಗ್ರಹದಲ್ಲಿಡಲು ಆದೇಶಿಸಿದ್ದ ಡಿ.ಸಿ. ಡಾ.ಆರ್​. ಸೆಲ್ವಮಣಿ, ಇದೀಗ ಒಂದು ವರ್ಷದ ಅವಧಿಗೆ ಬಂಧನ ಅವಧಿ ಮುಂದುವರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಕಳೆದ 6 ತಿಂಗಳಲ್ಲಿ ಗೂಂಡಾ ಕಾಯ್ದೆಯಡಿ ಮೂವರ ಬಂಧನ ವಿಸ್ತರಣೆ ಮಾಡಲಾಗಿದ್ದು, ಸೂಳೆಬೈಲಿನ ಸಲೀಂ ಅಲಿಯಾಸ್​ ಚೋರ್ ಸಲೀಂ (36), ಕಡೇಕಲ್​ ಗ್ರಾಮದ ಅಬೀದ್​ ಖಾನ್​ ಅಲಿಯಾಸ್​ ಕಡೇಕಲ್​ ಅಬೀದ್​ ಇನ್ನಿಬ್ಬರರಿಬ್ಬರಾಗಿದ್ದಾರೆ.

RELATED ARTICLES

Related Articles

TRENDING ARTICLES