Thursday, January 23, 2025

ನಟ ಚಂದನ್ ಕುಮಾರ್​ ಬಿರಿಯಾನಿ ಸೆಂಟರ್’ನಲ್ಲಿ ತಡರಾತ್ರಿ ಕಳವು..!

ಬೆಂಗಳೂರು: ಪ್ರೇಮಬರಹ ಚಿತ್ರದ ಹಾಗೂ ಲಕ್ಷ್ಮೀ ಬಾರಮ್ಮ ಧಾರವಾಹಿ ಖ್ಯಾತಿಯ ನಟ ಚಂದನ್ ಅವರ ಬಿರಿಯಾನಿ ಸೆಂಟರ್ ನಲ್ಲಿ ಕಳವು ಆಗಿದ್ದು, ಈ ಬಗ್ಗೆ ಚಂದನ್​ ಎಫ್​ಐಆರ್​ ದಾಖಲಿಸಿದ್ದಾರೆ.

ಕಳೆದ ರಾತ್ರಿ ಬಿರಿಯಾನಿ ಸೆಂಟರ್ ನ ಶೆಟರ್ ಮುರಿದು ಸಮಾರು 50 ಸಾವಿರ ನಗದು ಕಳ್ಳರು ದೋಚಿದ್ದಾರೆ. ನಟ ಚಂದನ್ ಬಿರಿಯಾನಿ ಸೆಂಟರ್​ನಲ್ಲಿ ಮಾತ್ರವಲ್ಲದೇ ಬೇರೆಯವರ ಅಂಗಡಿಯಲ್ಲೂ ಕಳವು ಮಾಡಲಾಗಿದೆ. ಈ ಬಗ್ಗೆ ಚಂದನ್​ ಕೊಡಿಗೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ನಟ ಚಂದನ್​ ಕುಮಾರ್​ ಅವರು ಕೆಳೆದು ತಿಂಗಳ ಹಿಂದೆ ಬಿರಿಯಾನಿ ಸೆಂಟರ್​ ಓಪನ್ ಮಾಡಿದ್ದರು. ನಟ ಶಿವರಾಜ್​ಕುಮಾರ್​ ಹಾಗೂ ನಟಿ ಶ್ರುತಿ ಉದ್ಘಾಟನೆ ಮಾಡಿ ಶುಭಕೋರಿದ್ದರು.

RELATED ARTICLES

Related Articles

TRENDING ARTICLES