Monday, December 23, 2024

ಮುರುಘಾ ಶರಣರ ದೂರಿಗೆ ಪ್ರತಿಯಾಗಿ ಬಸವರಾಜನ್ ದಂಪತಿ​ ಮೇಲೆ FIR​ ದಾಖಲು.!

ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಮಠದ ಶರಣರ ಮೇಲಿನ ಕೇಸ್​​ಗೆ ಬಿಗ್‌ ಟ್ವಿಸ್ಟ್ ಸಿಕ್ಕಿದ್ದು, ಮುರುಘಾ ಶರಣರು, ವಾರ್ಡನ್‌ ಮೇಲಿನ ಮೈಸೂರಿನಲ್ಲಿ ದಾಖಲಾದ ಎಫ್​ಐಆರ್​ ನ 2 ನೇ ಆರೋಪಿ ರಶ್ಮಿ ಅವರು ಬಸವರಾಜನ್ ದಂಪತಿ ಮೇಲೆ ಪ್ರತಿ ದೂರು ದಾಖಲು ಮಾಡಿದ್ದಾರೆ.

ಬೃಹನ್ಮಠದ ಮಾಜಿ ಆಡಳಿತಾಧಿಕಾರಿಯಾಗಿರುವ ಹಾಗೂ ಮಾಜಿ ಶಾಸಕ ಎಸ್​.ಕೆ ಬಸವರಾಜನ್‌ ಹಾಗೂ ಅವರ ಪತ್ನಿ ಸೌಭಾಗ್ಯ ವಿರುದ್ಧ ಅತ್ಯಾಚಾರಕ್ಕೆ ಯತ್ನ ಪ್ರಕರಣವನ್ನು ರಶ್ಮಿ ದಾಖಲು ಮಾಡಿದ್ದಾರೆ.

ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಬಸವರಾಜನ್‌  ಹಾಗೂ ಅವರ ಪತ್ನಿ ವಿರುದ್ಧ ಐಪಿಸಿ 354(A), 504, 506, 363, 120(B) ಅಡಿಯಲ್ಲಿ ಮುರುಘಾ ಮಠದ ವಾರ್ಡನ್ ರಶ್ಮಿಯಿಂದ ಈ ದೂರು ದಾಖಲು ಮಾಡಿದ್ದಾರೆ.

ಚಿತ್ರದುರ್ಗದ ಮುರುಘಾ ಮಠದ ಶರಣರ ಮೇಲೆ ಹಾಗೂ ಮೈಸೂರಿನಲ್ಲಿ ದಾಖಲಾದ ಎಫ್​​ಐಆರ್ ನ ಎರಡನೇ ಆರೋಪಿಯಾಗಿರುವ ರಶ್ಮಿ ಅವರು ಬಸವರಾಜನ್ ದಂಪತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಅಡಿ ರಿ ಕೌಂಟರ್ ಕೇಸ್​ ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES