Monday, December 23, 2024

ಪರಸ್ತರ ಕೈ ಕುಲುಕಿ ನಗೆ ಬೀರಿದ ವಿರಾಟ್ ಕೊಹ್ಲಿ-ಬಾಬರ್ ಅಜಮ್

ನವದೆಹಲಿ: ಮೈದಾನದಲ್ಲಿ ಅಭ್ಯಾಸ ನಡೆಸಿ ಹೋಗುವಾಗ ಪಾಕಿಸ್ಥಾನದ ಕ್ರಿಕೆಟಿಗ ಬಾಬರ್ ಅಜಮ್ ಹಾಗೂ ವಿರಾಟ್ ಕೊಹ್ಲಿ ಅವರು ಭೇಟಿಯಾಗಿ ಪರಸ್ಪರ ಶೇಕ್ ಹ್ಯಾಂಡ್ ಮಾಡಿದ್ದಾರೆ.

ದುಬೈನ ಮೈದಾನದಲ್ಲಿ ಅಗಸ್ಟ್​ 28 ರಂದು ಪಾಕಿಸ್ಥಾನ ವಿರುದ್ಧದ ಭಾರತ ತಂಡ ಪಂದ್ಯ ಆಡಲಿದೆ. ಈ ಪಂದ್ಯ ಬಹಳ ಮಹತ್ವ ಹಿನ್ನಲೆಯಲ್ಲಿ ಪಂದ್ಯ ಇನ್ನು ಮೂರು ದಿನಗಳ ಇರುವಾಗಲೇ ಭಾರತ ಹಾಗೂ ಪಾಕಿಸ್ಥಾನ ತಂಡದ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ.

ಹೀಗೆ ಅಭ್ಯಾಸ ನಂತರ ಇಬ್ಬರು ಶ್ರೇಷ್ಠ ಆಟಗಾರರು ಶೇಕ್​ಹ್ಯಾಂಡ್ ಮಾಡಿದ ಪೋಟೋವನ್ನ ಬಿಸಿಸಿಐ ಮೊದಲ ದಿನದ ಪ್ರ್ಯಾಕ್ಟೀಸ್ ಸೆಷನ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ ಹಾಗೂ ನಾಯಕ ಬಾಬರ್‌ಗೆ ದೊಡ್ಡ ನಗುವಿನೊಂದಿಗೆ ಕೈ ಕುಲುಕಿದರು. ಈ ಪೊಟೋದಲ್ಲಿ ಮರಳಿ ಪಾಕಿಸ್ತಾನದ ನಾಯಕ ಅಜಮ್ ಅವರು ಮರಳಿ ನಗು ಬೀರುತ್ತಿರುವುದು ಕಾಣಬಹುದು.

ಪಾಕಿಸ್ತಾನದ ಬ್ಯಾಟಿಂಗ್ ಕೋಚ್ ಆಗಿರುವ ಮೊಹಮ್ಮದ್ ಯೂಸುಫ್ ಕೂಡ ಕೊಹ್ಲಿಯೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ದೀರ್ಘಕಾಲದ ಸ್ನೇಹಿತರಂತೆ ಪರಸ್ಪರ ಶುಭಾಶಯ ಕೋರುತ್ತಿರುವ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ಕಾಳ್ಗಿಚ್ಚಿನಂತೆ ವೈರಲ್ ಆಗಿವೆ.

RELATED ARTICLES

Related Articles

TRENDING ARTICLES