Wednesday, January 22, 2025

ಹೈ ವೋಲ್ಟೇಜ್​ ವಿಕ್ರಂ ವೇದ.. ಹೃತಿಕ್ – ಸೈಫ್ ಮುಖಾಮುಖಿ

ಬಾಲಿವುಡ್​ನ​​​​ ಗ್ರೀಕ್​ಗಾಡ್​​ ಹೃತಿಕ್​​​ ಹಾಗೂ ಫಿಟ್​ ಅಂಡ್​ ಫೈನ್​ ಸೈಫ್​ ಅಲಿ ಖಾನ್​ ಕಾಂಬಿನೇಷನ್​​​​​​​​ನ ವಿಕ್ರಂ ವೇದ ಟೀಸರ್​​ ಯೂಟ್ಯೂಬ್​ನಲ್ಲಿ ಸದ್ದು ಮಾಡ್ತಿದೆ. ಸ್ಯಾಂಪಲ್ ಝಲಕ್​ ನೋಡಿದ ಪ್ರೇಕ್ಷಕರಿಗೆ ರೋಮಾಂಚನವಾಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ಸೈಫ್​​- ಹೃತಿಕ್​ ಜಂಟಿ ಕಾಳಗ ಕಂಡು ಥ್ರಿಲ್​ ಆಗಿದ್ದಾರೆ ಸಿನಿರಸಿಕರು. ಯೆಸ್​​​.. ವಿಕ್ರಂ-​ ವೇದ ಸಿನಿಮಾದ ಹೈ ವೋಲ್ಟೇಜ್ ಆ್ಯಕ್ಷನ್ ಧಮಾಕ ಸ್ಟೋರಿ ನೀವೇ ಓದಿ.

  • ರಿಲೀಸ್​ ಆದ ಕೆಲವೇ ಕ್ಷಣಗಳಲ್ಲಿ ಯೂಟ್ಯೂಬ್​ನಲ್ಲಿ​ ಸೆನ್ಸೇಷನ್

ಬಾಲಿವುಡ್​ ಸದ್ಯ ಹತಾಶೆಯಲ್ಲಿದೆ. ಇಡೀ ಭಾರತೀಯ ಚಿತ್ರರಂಗ ಸಂಚಲನ ಮೂಡಿಸುವ ಸಿನಿಮಾಗಳು ಬಾಲಿವುಡ್​ ತೆಕ್ಕೆಯಿಂದ ಸದ್ಯ ಬರ್ತಿಲ್ಲ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಬಾಯ್ಕಾಟ್​ ಪೆಡಂಭೂತ ಬಿಟ್ಟು ಬಿಡದಂತೆ ಬಾಲಿವುಡ್​​​​​​​ನ ಕಾಡ್ತಿದೆ. ಈ ಸಮಸ್ಯೆಗಳ ನಡುವೆ ವಿಕ್ರಂ ವೇದ ಟೀಸರ್​ ಸದ್ದು ಮಾಡ್ತಿದೆ. ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಲಕ್ಷಗಟ್ಟಲೇ ವೀವ್ಸ್​ ಕಂಡು ಮುನ್ನುಗ್ತಿದೆ.

ವಿಕ್ರಂ ವೇದ ಸಿನಿಮಾದಲ್ಲಿ ಹೃತಿಕ್​ ಹಾಗೂ ಸೈಫ್​ ಮುಖಾಮುಖಿಯಾಗ್ತಿದ್ದಾರೆ. ಇಬ್ಬರೂ ನೆಗಟಿವ್​ ಶೇಡ್​ನಲ್ಲಿ ಮಿಂಚ್ತಾ ಇದ್ದು, ರಣ ರೋಚಕ ಕಾಳಗ ನಡೆಯಲಿದೆ. ಈ ಹಿಂದೆ ತಮಿಳಿನಲ್ಲಿ ರಿಲೀಸ್​​ ಆಗಿದ್ದ ವಿಕ್ರಮ್​ ವೇದ ಟೈಟಲ್​ನಲ್ಲಿ ಹಿಂದಿಯಲ್ಲೂ ರಿಲೀಸ್ ಆಗ್ತಿದೆ. ಈ ಚಿತ್ರಕ್ಕೂ ಪುಷ್ಕರ್​ ಗಾಯಿತ್ರಿ ಆ್ಯಕ್ಷನ್ ಕಟ್​ ಹೇಳಿದ್ದು ವಿಶೇಷವಾಗಿದೆ. ಬಾಲಿವುಡ್​ನಲ್ಲಿ ಸಖತ್​ ಹೈಪ್​ ಕ್ರಿಯೇಟ್​ ಮಾಡಿರೋ ಸ್ಟಾರ್​ ನಟರಿಗೆ ಈ ಸಿನಿಮಾ ಸವಾಲಿನ ಪ್ರಶ್ನೆಯಾಗಿದೆ.

  • ಮನರಂಜನೆಯ ಜತೆಗೆ ಫ್ಯಾನ್ಸ್​​ಗೆ ಕಾದಿದೆ ಬಿಗ್​ ಸರ್​ಪ್ರೈಸ್..!
  • ಭರ್ಜರಿ ಕಾದಾಟದಲ್ಲಿ ವಿಲನ್​ ಯಾರು, ಹೀರೋ ಯಾರು..?

ಈ ಟೀಸರ್​ ಒಟ್ಟು ಒಂದು ನಿಮಿಷ 47 ಸೆಕೆಂಡುಗಳ ಕಾಲ ಇದ್ದು, ಪಕ್ಕಾ ಆ್ಯಕ್ಷನ್​ ಫ್ಲೇವರ್​​ನಲ್ಲಿ ಮೂಡಿ ಬಂದಿದೆ. ಪೊಲೀಸ್​ ರೋಲ್​ನಲ್ಲಿ ಸೈಫ್​​ ಅಬ್ಬರಿಸಿದ್ರೆ, ಗ್ಯಾಂಗ್​ಸ್ಟರ್​ ರೋಲ್​ನಲ್ಲಿ ಗ್ರೀಕ್​ ಗಾಡ್​ ಹೃತಿಕ್​​ ಘರ್ಜಿಸಿದ್ದಾರೆ. ಟೀಸರ್ ಆರಂಭದಲ್ಲಿ ಇದು ಕೇವಲ ಮನರಂಜನೆಯಲ್ಲ. ನಿಮಗೆಲ್ಲಾ ಅಚ್ಚರಿ ಕಾದಿದೆ ಎಂಬ ಡೈಲಾಗ್​ ಸಖತ್​ ಕ್ಯೂರಿಯಾಸಿಟಿ ಮೂಡಿಸುತ್ತದೆ. ಕೆಟ್ಟವರ ಕಾದಾಟದಲ್ಲಿ ಗೆಲ್ಲೋರು ಯಾರು ಅನ್ನೋ ಕುತೂಹಲ ಮನೆ ಮಾಡಿದೆ.

ಪಕ್ಕಾ ಆ್ಯಕ್ಷನ್ ಡ್ರಾಮಾ ಸಿನಿಮಾ ಇದಾಗಿದ್ದು, ಸೆಪ್ಟೆಂಬರ್​ 30ಕ್ಕೆ ತೆರೆಗೆ ಬರೋಕೆ ಸಜ್ಜಾಗಿದೆ. ಹೈ ವೋಲ್ಟೇಜ್​ ಆ್ಯಕ್ಷನ್ ಸೀಕ್ವೆನ್ಸ್​​ಗಳ ಮೂಲಕ ಚಿತ್ರರಸಿಕರಿಗೆ ಭರ್ಜರಿ ಮನರಂಜನೆಯ ರಸದೌತಣ ಕಾದಿದೆ. ತಮಿಳಿನ ವಿಜಯ್​ ಸೇತುಪತಿ, ಮಾದವನ್​ ಅಭಿನಯವನ್ನು ಬೀಟ್​ ಮಾಡೋಕೆ ಘಟಾನುಘಟಿಗಳು ಸಜ್ಜಾಗಿದ್ದಾರೆ. ಜತೆಗೆ ಕರೀನಾ ಕಪೂರ್​ , ಸಬಾ ಆಜಾದ್​​, ವಿಕ್ಕಿ ಕೌಶಾಲ್​​ ಕೂಡ ಟೀಸರ್​ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸೂಪರ್​ ಕಾಪ್​​ ಸೈಫ್​ ಅಲಿ ಖಾನ್​ ಹಾಗೂ ಭೂಗತ ಪಾತಕಿ ಹೃತಿಕ್​ ರೋಷನ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಇದು. ಪುಷ್ಕರ್​ ಮತ್ತು ಗಾಯಿತ್ರಿ ನಿರ್ದೇಶನದಲ್ಲಿ ಮ್ಯಾಜಿಕ್​ ಮಾಡಲಿದೆ ವಿಕ್ರಂ ವೇದ ಸಿನಿಮಾ. ಭೂಷಣ್​ ಹಾಗೂ ಶಶಿಕಾಂತ್​ ನಿರ್ಮಾಣದಲ್ಲಿ ರಿಚ್​ ಆಗಿ ಮೂಡಿ ಬರ್ತಿದೆ. ಡೆಡ್ಲಿ ಕಾಂಬೋ ಸಿನಿ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುತ್ತಾ ಕಾದು ನೋಡ್ಬೇಕಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES