Monday, December 23, 2024

ಕೆಂಪಯ್ಯ ಯಾರು ಅನ್ನುವುದೇ ಗೊತ್ತಿಲ್ಲ: ಸಚಿವ ಉಮೇಶ್ ಕತ್ತಿ

ಗದಗ: ಕೆಂಪಯ್ಯ ಯಾರು ಅನ್ನುವುದೇ ಗೊತ್ತಿಲ್ಲ. ಯಾರೋ ಅವರನ್ನ ಅಧ್ಯಕ್ಷ ಎನ್ನುತ್ತಾರೆ ಅದು ಮಾತ್ರ ಗೊತ್ತು ಎಂದು ಅರಣ್ಯ ಮತ್ತು‌ ಆಹಾರ ಖಾತೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

ಜಿಲ್ಲೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಹಳ ಮಂದಿ ಅಸೋಸಿಯೇಷನ್ ಅಧ್ಯಕ್ಷರು ಇದ್ದಾರೆ. ಅದ್ರಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕೆಂಪಯ್ಯ ಒಬ್ಬರು. ಕೆಂಪಯ್ಯ ಅವರು ಸಿದ್ದರಾಮಯ್ಯ ಅವರನ್ನ ಭೇಟಿಯಾಗಿದ್ದಾರೆ ಅನ್ನೋ ಮಾಹಿತಿ ಇದೆ. 40 ಪರ್ಸೆಂಟೇಜ್ ಭ್ರಷ್ಟಾಚಾರ ನಡೆದಿದ್ರೆ ರಾಜ್ಯದ ಜನ ವಿರೋಧ ಪಕ್ಷದ ನಾಯಕ, ಸಿಎಂ ರನ್ನ ತಿರುಗಾಡಲು ಬೀಡುತ್ತಿರಲಿಲ್ಲ ಎಂದು ಹೇಳಿದರು.

ಸುಳ್ಳು ಹೇಳಿಕೆ ಕೊಡೋದನ್ನ ಬಂದ್ ಮಾಡಿ. ಮಾಜಿ ಮುಖ್ಯಮಂತ್ರಿಗಳಾಗಿ ನಿಮ್ಮ ಇತಿಮಿತಿಯಲ್ಲಿ ಏನಾಗಿದೆ ಅಂತಾ ಚರ್ಚೆ ಮಾಡೋಣ. ಆದ್ರೆ 40 ರಿಂದ 50 ಪ್ರತಿಶತ ಕಮಿಷನ್ ಹೇಳಿಕೆ ನೀಡೋದು ಸರಿಯಲ್ಲ. ಭ್ರಷ್ಟಾಚಾರ ನಡೆದಿದ್ರೆ ಕೆಂಪಯ್ಯ, ಸಿದ್ದರಾಮಯ್ಯ ಕಂಪ್ಲೆಂಟ್ ಕೊಡ್ಲಿ ಎಂದು ತಿಳಿಸಿದರು.

ಲೋಕಾಯುಕ್ತ, ಸಿಬಿಐ, ಈಡಿ ಎಂಬ ತನಿಖಾ ಸಂಸ್ಥೆ ಇವೆ. ಅವುಗಳಿಗೆ ಹೋಗಿ ದೂರು ನೀಡಿ, ಕುಮಾರಸ್ವಾಮಿಯಾದಿಯಾಗಿ ಯಾರೇ ಆರೋಪ ಮಾಡಿದ್ರೂ ಕಂಪ್ಲೆಂಟ್ ಕೊಡಬೇಕು. ಮಂತ್ರಿ, ಸರ್ಕಾರ, ನನ್ನ ವಿರುದ್ಧ ಆರೋಪ ಇದ್ರೂ ಕಂಪ್ಲೆಂಟ್ ಕೊಡಿ ಎಂದರು.

ಸಿಎ‌ಂ ಆಗುವ ಯೋಗ್ಯತೆ ನನಗೂ ಇದೆ. ಪ್ರತ್ಯೇಕ ಉತ್ತರ ಕರ್ನಾಟಕ ಧ್ವನಿ ಎತ್ತಬೇಕು. ಮಹದಾಯಿ, ಕೃಷ್ಣ, ಆಲಮಟ್ಟಿ ಅಭಿವೃದ್ಧಿಗೆ ದ್ರೋಹ ಮಾಡಿದ್ರೆ ರಾಜೀನಾಮೆಗೆ ಸಿದ್ದ ಎಂದು ಕತ್ತಿ ಹೇಳಿದರು.

RELATED ARTICLES

Related Articles

TRENDING ARTICLES