Monday, December 23, 2024

ರಾಕಿ ಸೂಟ್​ನಲ್ಲಿ ರಣ್​ವೀರ್.. ಸ್ವ್ಯಾಗ್ ಮೆಚ್ಚಿದ ಶಾಹಿದ್..!

ಸಲಾಂ ರಾಕಿಭಾಯ್ ಅನ್ನೋದು ಜಸ್ಟ್ ಕೆಜಿಎಫ್ ಚಿತ್ರದ ಸಾಂಗ್ ಮಾತ್ರವಲ್ಲ. ಸಿನಿಮಾದ ಗತ್ತಿಗೆ, ರಾಕಿಭಾಯ್ ಗಮ್ಮತ್ತಿಗೆ ಇಡೀ ಭಾರತೀಯ ಸಿನಿದುನಿಯಾನೇ ಸಲಾಂ ರಾಕಿಭಾಯ್ ಅಂತಿದೆ. ಅದ್ರಲ್ಲೂ ಬಾಲಿವುಡ್ ಸೂಪರ್ ಸ್ಟಾರ್ಸ್​ ಎಲ್ಲಾ ಮುಚ್ಚು ಮರೆಯಿಲ್ಲದೆ ಯಶ್ ಸ್ವ್ಯಾಗ್​ಗೆ ಕ್ಲೀನ್ ಬೋಲ್ಡ್ ಆಗಿ, ಹಾಡಿ ಹೊಗಳ್ತಿದ್ದಾರೆ. ಸದ್ಯ ಯಶ್​ರನ್ನ ಗುಣಗಾನ ಮಾಡಿದ್ಯಾರು..? ಏನಂತ ಅನ್ನೋದ್ರ ಸ್ಪೆಷಲ್ ಸ್ಟೋರಿ ನೀವೇ ಓದಿ.

  • ಸಲಾಂ ರಾಕಿಭಾಯ್ ಎಂದ ಬಾಲಿವುಡ್ ಸೂಪರ್ ಸ್ಟಾರ್
  • ಬಿಟೌನ್ ಮಂದಿಯನ್ನ ಕಾಡ್ತಿರೋ ನಮ್ಮ ಹೆಮ್ಮೆಯ ಕನ್ನಡಿಗ
  • ಟ್ರೆಂಡ್ ಸೆಟ್ಟರ್ ಈಗ ಪ್ಯಾನ್ ಇಂಡಿಯಾದ ಕನ್ನಡ ಬ್ರ್ಯಾಂಡ್

ಕಠೋರವಾದ ತಪಸ್ಸು ಮಾಡಿದ್ರೆ ನಿರೀಕ್ಷಿತ ವರ ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಯಶ್ ಅವ್ರ ಯಶಸ್ಸಿಗಿಂತ ಬೇರೆ ನಿದರ್ಶನ ಬೇಕಿಲ್ಲ. ಇವ್ರ ನುಡಿಯಂತೆ ನಡೆಯೂ ಒಂದೇ ಆಗಿತ್ತು. ಕಂಡ ಕನಸನ್ನ ಬೇತಾಳನಂತೆ ಬೆನ್ನು ಹತ್ತಿದ ಸಾಲಿಡ್ ಸೋಲ್ಜರ್ ರಾಕಿಭಾಯ್. ಇಟ್ಟ ಗುರಿಯತ್ತ ದಿಟ್ಟ ಹೆಜ್ಜೆ ಇಟ್ಟ ಸಿನಿಸಂತ. ಹಾಗಾಗಿಯೇ ಇಂದು ಚರಿತ್ರೆಯ ಪುಟಗಳಲ್ಲಿ ಯಶ್ ಅನ್ನೋ ಅಧ್ಯಾಯ ರಾರಾಜಿಸ್ತಿದೆ. ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದು ಹೋಗಲಿದೆ.

ಯೆಸ್.. ಕೆಜಿಎಫ್ ಸಿನಿಮಾಗಾಗಿ ರಾಕಿಂಗ್ ಸ್ಟಾರ್ ಯಶ್ ಮಾಡಿದ ಮಾಸ್ಟರ್​ಪ್ಲಾನ್, ಅದ್ರ ಎಕ್ಸಿಕ್ಯೂಷನ್, ಹಾರ್ಡ್​ ವರ್ಕ್​, ಡೆಡಿಕೇಷನ್ ನಿಜಕ್ಕೂ ವರ್ಣನಾತೀತ. ಯಶ್ ಕನಸುಗಳಿಗೆ ರೆಕ್ಕೆ ಕಟ್ಟುವಲ್ಲಿ ಮಾನ್​ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು ಬೆಂಬಲ ಸಾಕಷ್ಟಿದೆ. ಇಂದು ಕೆಜಿಎಫ್ ಸಿನಿಮಾದಿಂದ ಇಡೀ ವಿಶ್ವವೇ ಕನ್ನಡದತ್ತ ತಿರುಗಿ ನೋಡಲು ಕಾರಣ ಈ ಮೂರು ಮಾಸ್ಟರ್​ಮೈಂಡ್ಸ್ ಅಂದ್ರೆ ತಪ್ಪಾಗಲ್ಲ.

ಕೆಜಿಎಫ್ ಚಿತ್ರದ ಪ್ಯಾನ್ ಇಂಡಿಯಾ ಕನಸು ಯಶ್ ಅವ್ರದ್ದು, ಪ್ರೊಮೋಷನ್ಸ್ ಪ್ಲಾನ್ ಕೂಡ ರಾಕಿಭಾಯ್​ದೇ. ಮಾಸ್ ಪಲ್ಸ್​ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿ, ಒಂದೇ ಏಟಿಗೆ ಎಲ್ಲಾ ಸೂಪರ್ ಸ್ಟಾರ್ಸ್​ ಅಭಿಮಾನಿಗಳನ್ನ ತಮ್ಮ ಫಾಲೋವರ್ಸ್​ ಆಗುವಂತೆ ಮಾಡಿದ ಸ್ವ್ಯಾಗ್ ಸಹ ಮಾಸ್ಟರ್​ಪೀಸ್ ಯಶ್​ರದ್ದೇ ಅನ್ನೋದು ವಿಶೇಷ.

ಯುನಿಕ್ ಸ್ಟೈಲು, ಮ್ಯಾನರಿಸಂನಿಂದ ಕನ್ನಡಿಗರ ಗತ್ತನ್ನ ಇಡೀ ಇಂಡಿಯಾಗೆ ಗೊತ್ತು ಮಾಡಿದ್ರು ರಾಜಾಹುಲಿ. ಸಾವಿರಾರು ಕೋಟಿ ಬ್ಯುಸಿನೆಸ್ ಮಾಡಬಹುದು ಅನ್ನೋದಕ್ಕೆ ನಾಂದಿ ಹಾಡಿದ್ರು. ಮಾಡಿದ್ರೆ ಯಶ್ ಅವ್ರ ರೀತಿ ಸಿನಿಮಾ ಮಾಡ್ಬೇಕು ಅಂತ ಬಾಲಿವುಡ್ ಮಂದಿ ಕೈ ಕೈ ಹಿಚುಕಿಕೊಳ್ಳೋ ಹಾಗೆ ಮಾಡಿದ್ರು ನಮ್ಮ ಹೆಮ್ಮೆಯ ಕನ್ನಡಿಗ. ಇನ್ನು ಇವ್ರ ಹವಾಗೆ ಅಲ್ಲಿನ ಮೇಕರ್ಸ್​ ಅಷ್ಟೇ ಅಲ್ಲ, ಸೂಪರ್ ಸ್ಟಾರ್ಸ್​ ಕೂಡ ಕ್ಲೀನ್ ಬೋಲ್ಡ್ ಆದ್ರು.

ರಣ್​ವೀರ್ ಸಿಂಗ್ ನಮ್ಮ ರಾಕಿಭಾಯ್ ಯಶ್ ಅವ್ರ ರೀತಿ ಸೂಟ್ ಹಾಕಿ, ಫೋಟೋ ಶೂಟ್ ಮಾಡಿಸಿದ್ರೆ, ಕೆಜಿಎಫ್ ಚಿತ್ರದಿಂದ ಆಮೀರ್ ಖಾನ್ ಅಕ್ಷರಶಃ ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್​ಗೆ ಹೆದರಿದ್ರು. ಇದೀಗ ಕಾಫಿ ವಿತ್ ಕರಣ್ ಶೋನಲ್ಲಿ ಶಾಹಿದ್ ಕಪೂರ್ ನಮ್ಮ ರಾಕಿಭಾಯ್​ನ ಗುಣಗಾನ ಮಾಡಿದ್ದಾರೆ. ಇದು ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.

ಫೇಮಸ್ ಬಾಲಿವುಡ್ ಟಾಕ್ ಶೋ ಕಾಫಿ ವಿತ್ ಕರಣ್​ಗೆ ತೆರಳಿದ್ದ ಕೈರಾ ಹಾಗೂ ಶಾಹಿದ್ ಕಪೂರ್​ರನ್ನ ನಿಮ್ಮ ಪ್ರಕಾರ ಬಾಲಿವುಡ್​ನ ನಂಬರ್ ಒನ್ ಆ್ಯಕ್ಟರ್ ಯಾರು ಎಂದು ಕೇಳಿದಾಗ, ಶಾಹಿದ್ ಸೆಕೆಂಡ್ ಥಾಟ್ ಇಲ್ಲದೆ ರಾಕಿಭಾಯ್ ಅಂದಿದ್ದಾರೆ. ಇದು ಯಶ್ ಅವ್ರ ಫ್ಯಾನ್ಸ್​ಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ. ಸಾಕಷ್ಟು ಮಂದಿ ಬಿಟೌನ್ ಸೂಪರ್ ಸ್ಟಾರ್ಸ್​ ನಮ್ಮ ಯಶ್ ಅವ್ರ ಕೆಜಿಎಫ್ ಸಿನಿಮಾಗೆ ಹಾಗೂ ಅವ್ರ ಬೆಳವಣಿಗೆಗೆ ಫಿದಾ ಆಗಿದ್ದಾರೆ. ಅವ್ರ ಟ್ರೆಂಡ್​ನ ಫಾಲೋ ಮಾಡಲು ಹೊರಟಿದ್ದಾರೆ.  ಇದು ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗ ಖುಷಿ ಪಡೋ ವಿಚಾರ.

ಕನ್ನಡದ ಕೀರ್ತಿ ಪತಾಕೆಯನ್ನ ನ್ಯಾಷನಲ್ ಸ್ಟಾರ್ ಯಶ್ ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯೋ ಅಂತಹ ಪ್ಲಾನ್ಸ್ ಮಾಡಿದ್ದು, ಅವ್ರ ಆ ದಂಡಯಾತ್ರೆ ನಿರಂತರವಾಗಿ ಸಾಗಲಿ ಅಂತ ಹಾರೈಸೋಣ. ಜೊತೆಗೆ ನಾವೂ ಒಮ್ಮೆ ಸಲಾಂ ರಾಕಿಭಾಯ್ ಅಂತ ಪ್ರಶಂಸಿಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES