Monday, December 23, 2024

ಸತ್ವ ಪರೀಕ್ಷೆಗೆ ಸೊಪ್ಪು ಕಟ್ಟಿ ಬಂದ ಕೋಮಲ್​ ಕಮಾಲ್​​

ಕೆಂಪೇಗೌಡ-2 ಸಿನಿಮಾ ಕೋಮಲ್ ಕರಿಯರ್​ಗೆ ಪ್ಲಸ್ ಆಗುತ್ತೆ ಅನ್ನೋ ನಿರೀಕ್ಷೆ ಹುಸಿ ಆಯ್ತು. ಆದ್ರೆ ಈ ಬಾರಿ ಕಂಬ್ಯಾಕ್ ಮಾಡ್ಲೇಬೇಕು ಅಂತ ನಟ ಕೋಮಲ್ 2020ಯಲ್ಲಿ ನಡೆದ ಕರಾಳ ದಿನಗಳನ್ನ ಸಿನಿಮಾ ಮೂಲಕ ದೊಡ್ಡ ಪರದೆ ಮೇಲೆ ಮೂಡಿಸ್ತಿದ್ದಾರೆ. ಹೌದು. 2020 ಅಂದಾಕ್ಷಣ ನೆನಪಾಗೋದೇ ಕೊರೋನಾ ಕಾಲ. ಲಾಕ್​ಡೌನ್​ನ ಕ್ಲಿಷ್ಟ ದಿನಗಳು.

ಸದ್ಯ ಕೊರೋನಾ ಕಾಲದಲ್ಲಿ ಯುವಕನೊಬ್ಬನ ಜೀವನದಲ್ಲಿ ನಡೆದ ಕಥೆಯನ್ನೇ ಸಿನಿಮಾ ಆಗಿಸೋ ಅಂತಹ ಮಹಾನ್ ಕಾರ್ಯಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಕೆಎಲ್ ರಾಜಶೇಖರ್. ಡಾ ಟಿಆರ್ ಚಂದ್ರಶೇಖರ್ ನಿರ್ಮಾಣದ ಈ ಸಿನಿಮಾ ಪಕ್ಕಾ ಕಾಮಿಡಿ ಎಂಟರ್​ಟೈನರ್ ಆಗಿದ್ದು, ಸದ್ಯ ಟೀಸರ್​ನಿಂದ ಸಖತ್ ಕಿಕ್ ಕೊಡ್ತಿದೆ. ಕೋಮಲ್ ಜೊತೆ ಧನ್ಯಾ ಬಾಲಕೃಷ್ಣ, ತಬಲಾ ನಾಣಿ, ಹರೀಶ್ ರಾಜ್, ಸಂಪತ್, ಬ್ಯಾಂಕ್ ಜನಾರ್ಧನ್, ಟೆನ್ನಿಸ್ ಕೃಷ್ಣ, ತನಿಷಾ, ವೈಷ್ಣವಿ, ಅಪೂರ್ವ ಹೀಗೆ ದೊಡ್ಡ ತಾರಾಗಣವಿದೆ.

RELATED ARTICLES

Related Articles

TRENDING ARTICLES