Wednesday, January 22, 2025

ಕಿಚ್ಚನ​​​ ಬಿಲ್ಲ ರಂಗ ಭಾಷ ಲೇಟ್​​.. ರಾಕ್ಷಸುಡು ಸ್ಟಾರ್ಟ್​​

ವಿಕ್ರಾಂತ್ ರೋಣ ಚಿತ್ರದ ನಂತ್ರ ಅಭಿನಯ ಚಕ್ರವರ್ತಿ ಅಸಲಿಗೆ ಯಾವ ಅವತಾರದಲ್ಲಿ ಕಾಣಿಸ್ತಾರೆ ಅನ್ನೋ ಕುತೂಹಲ ಎಲ್ರಿಗೂ ಇದೆ. ಕಬ್ಜ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಇರೋ ಕಿಚ್ಚ ಬಾಸ್​ ಟಾಲಿವುಡ್​​ಗೆ ಹಾರಲಿದ್ದಾರೆ. ಪ್ಯಾನ್​ ಇಂಡಿಯಾ ಐಕಾನ್​​ ಪರಭಾಷೆಗೆ ಎಂಟ್ರಿ ಕೊಡ್ತಾ ಇರೋದ್ಯಾಕೆ..? ಯಾವ ಸಿನಿಮಾ ಅಂತಾ ಕನ್ಫ್ಯೂಸ್​ ಆಗ್ತಿದ್ದೀರಾ..? ಈ ಸ್ಟೋರಿ ಓದಿ.

  • ರಾಕ್ಷಸುಡು ಚಿತ್ರದಲ್ಲಿ ಕಿಚ್ಚನ ಅಸಲಿ ಮುಖವಾಡ ಏನು..?

ಗುಮ್ಮನ ನಯಾ ಮುಖವಾಡ ಕಂಡು ಥ್ರಿಲ್​ ಆಗಿದ್ದ ಫ್ಯಾನ್ಸ್​ ಕಿಚ್ಚನ ನೆಕ್ಸ್ಟ್​​ ಪ್ರಾಜೆಕ್ಟ್​ ಎದ್ರು ನೋಡ್ತಿದ್ದಾರೆ. ವಿಕ್ರಾಂತ್​ ರೋಣ, ರಿಲೀಸ್​ಗೂ ಮುನ್ನ ಬೇಜಾನ್​ ಹೈಪ್​​ ಕ್ರಿಯೇಟ್​ ಮಾಡಿತ್ತು. ಊಹಿಸಿದಷ್ಟು ಬಾಕ್ಸ್ ಆಫೀಸ್​ ಕಲೆಕ್ಷನ್​​​​ ದೋಚದಿದ್ರೂ, 250 ಕೋಟಿಗೂ ಅಧಿಕ ಗಳಿಕೆ ಮಾಡಿತು. ಇದೀಗ, ಕಬ್ಜ ಚಿತ್ರಕ್ಕಾಗಿ ಕ್ಲೀನ್​ ಶೇವ್​​​ ಮಾಡಿಕೊಂಡಿರೋ ಹೆಬ್ಬುಲಿ ಮುದ್ದು ಮುದ್ದಾಗಿ ಕಾಣ್ತಿದ್ದಾರೆ. ಈ ನಡುವೆ ಅಭಿನಯ ಚಕ್ರವರ್ತಿ ಟಾಲಿವುಡ್​​ಗೆ ಹಾರೋ ಸುದ್ದಿ ಬೆಂಕಿ ಬಿರುಗಾಳಿಯಂತೆ ಹರಿದಾಡ್ತಿದೆ.

ಕಿಚ್ಚ ಸುದೀಪ್​ ಅಪ್ಡೇಟ್​​ಗಾಗಿ ಕಾತರದಿಂದ ಕಾಯೋ ಫ್ಯಾನ್ಸ್​ಗೆ ಗುಡ್​ ನ್ಯೂಸ್​ ಕಾದಿದೆ. ಸ್ಯಾಂಡಲ್​ವುಡ್​​ ಹೆಬ್ಬುಲಿ ಟಾಲಿವುಡ್​​​ಗೆ ಕಡೆ ಪಯಣ ಬೆಳಸಿದ್ದಾರೆ. ಅನೂಪ್​ ಭಂಡಾರಿ ನಿರ್ದೇಶನದ ಬಿಲ್ಲ ರಂಗ ಭಾಷ ಚಿತ್ರ ಸ್ಕ್ರಿಪ್ಟ್​ ತಯಾರಿಯಲ್ಲಿದೆ. ಈ ನಡುವೆ ವಿಕ್ರಾಂತ್​ ರೋಣ, ಟಾಲಿವುಡ್​​ನ ರಾಕ್ಷಸುಡು ಸೀಕ್ವೆಲ್​​ ಚಿತ್ರದಲ್ಲಿ ನಟಿಸ್ತಿದ್ದಾರಂತೆ. ಕಿಚ್ಚಬಾಸ್​ ಬರ್ತ್​ಡೇ ಸಮೀಪಿಸ್ತಾ ಇರೋದ್ರಿಂದ ಅಭಿಮಾನಿಗಳಿಗೆ ಸರ್ಪ್ರೈಸ್​​​​ ಸುದ್ದಿ ಕಾದಿದೆ. ಬಿಲ್ಲ ರಂಗ ಭಾಷ ಸಿನಿಮಾಗೆ ಡಾಟ್​ ಇಟ್ಟು ರಾಕ್ಸಸುಡು ಸಿನಿಮಾದಲ್ಲಿ ಬ್ಯುಸಿ ಆಗಲಿದ್ದಾರೆ ಕಿಚ್ಚ ಸುದೀಪ್​​​.

  • ಸೀರಿಯಲ್​​ ಕಿಲ್ಲರ್​ ಕಥೆಯಲ್ಲಿ ಕಿಚ್ಚ ಲೀಡ್​ ರೋಲ್​
  • ವಿಜಯ್​ ಸೇತುಪತಿ ಜತೆ ಕೈ ಮಿಲಾಯಿಸೋ ರೋಣ

ತಮಿಳಿನ ರಾಕ್ಸಸನ್​​ ಸಿನಿಮಾ ನಿಮಗೆಲ್ಲಾ ನೆನಪಿರಬಹುದು. ಶಾಲೆ ಅಪ್ರಾಪ್ತ ಮಕ್ಕಳನ್ನು ವಿಕೃತವಾಗಿ ಕೊಲೆ ಮಾಡುತ್ತಿದ್ದ ಸೈಕೋ ಕಿಲ್ಲರ್ ಕಥೆ ಇದು. ಈ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ ಸೂಪರ್​​ ಹಿಟ್​​ ದಾಖಲೆ ಬರೆದು ತೆಲುಗು, ಮಲಯಾಳಂ ಭಾಷೆಗೂ ಡಬ್​ ಆಗಿತ್ತು. ತೆಲುಗು ಭಾಷೆಯಲ್ಲಿ ರಾಕ್ಸಸುಡು ಟೈಟಲ್​ನಲ್ಲಿ ಅಬ್ಬರಿಸಿ ಈಗ ಪಾರ್ಟ್​ 2 ಅವತಾರದಲ್ಲಿ ಬರ್ತಿದೆ. ಈ ಕಥೆಯಲ್ಲಿ ಕಿಚ್ಚ ಬಾಸ್​ ಲೀಡ್​ ರೋಲ್​ನಲ್ಲಿ ಅಭಿನಯಿಸ್ತಿದ್ದಾರೆ.

ಅನೂಪ್​ ಭಂಡಾರಿ ಕರಾಮತ್ತಿನಲ್ಲಿ ಕಮಾಲ್​ ಮಾಡಿದ ಸಿನಿಮಾ ವಿಕ್ರಾಂತ್ ರೋಣ. ಈ ಸಿನಿಮಾ ನಂತ್ರ ಬಿಲ್ಲ ರಂಗ ಭಾಷ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಲಿರುವ ಅನೂಪ್​ ಕೊಂಚ ರಿಲ್ಯಾಕ್ಸ್​ ಕೊಟ್ಟಿದ್ದಾರೆ. ಅಂತೂ ಕಬ್ಜ ಸಿನಿಮಾ ಬಹುಕೋಟಿ ವಚ್ಚದಲ್ಲಿ ಆರ್​​ ಚಂದ್ರು ನಿರ್ದೇಶನದಲ್ಲಿ ಅದ್ದೂರಿಯಾಗಿ ತಯಾರಾಗ್ತಿದೆ. ಉಪ್ಪಿ, ಕಿಚ್ಚ ಕಾಂಬೋದಲ್ಲಿ ಪ್ರೇಕ್ಷಕರ ಕ್ಯೂರಿಯಾಸಿಟಿ ಕೆರಳಿಸಿರುವ ಕಬ್ಜ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಕೂಡ ಇದೆ. ಇದೆಲ್ಲದ್ರ ನಡುವೆ ಸದ್ದು ಮಾಡ್ತಿದೆ ಕಿಚ್ಚ ರಾಕ್ಸಸುಡು ಸಿನಿಮಾ. ಈ ಚಿತ್ರದಲ್ಲಿ ಕಿಚ್ಚನಿಗೆ ಕೈ ಮಿಲಾಯಿಸಲಿದ್ದಾರೆ ತಮಿಳಿನ  ವಿಜಯ್​ ಸೇತುಪತಿ.

ವಿಕ್ರಮ್​ ಚಿತ್ರದಲ್ಲಿ ನೆಗಟಿವ್​​ ಶೇಡ್​​ನಲ್ಲಿ ಚಿತ್ರರಸಿಕರ ಹೃದಯ ಗೆದ್ದಿರುವ ವಿಜಯ್​ ಸೇತುಪತಿ ಕಿಚ್ಚನಿಗೆ ಎದುರಾಳಿಯಾಗಲಿದ್ದಾರೆ. ಸದ್ಯ, ಅನೂಪ್​ ಭಂಡಾರಿಯ ನೆಕ್ಸ್ಟ್​​​​ ಸಿನಿಮಾ ಪ್ರೀ ಪ್ರೊಡಕ್ಷನ್​ ಹಂತದಲ್ಲಿದೆ. ಈ ನಡುವೆ ಸ್ಯಾಂಡಲ್​ವುಡ್​ ಗೂಳಿ ಟಾಲಿವುಡ್​​ನಲ್ಲಿ ಬ್ಯುಸಿ ಆಗಲಿದ್ದಾರೆ ಎನ್ನಲಾಗ್ತಿದೆ. ಒಟ್ಟಾರೆ ಕಿಚ್ಚ ಸುದೀಪ್​ ಬರ್ತ್​ ಡೇಗೆ ಹಲವು ಹೊಸ ಸಿನಿಮಾಗಳು ಅನೌನ್ಸ್​ ಆಗೋ ಸಾಧ್ಯತೆ ಇದೆ. ಅಂತೂ ಪ್ಯಾನ್​ ಇಂಡಿಯಾ ಸ್ಟೈಲೀಶ್​ ಐಕಾನ್​ ಆಗಿರೋ ಕಿಚ್ಚನ ನಡೆ ಏನು ಅನ್ನೋದು ಸದ್ಯದಲ್ಲೆ ಗೊತ್ತಾಗಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES