Sunday, December 22, 2024

ಧರೆಯೇ ಹೊತ್ತಿ ಉರಿದರೂ ರಾಕಿಭಾಯ್​​ ನಂ. 1​​..!

ಬೆಂಕಿ ಜತೆಗೆ ಪಳಗಿದ, ಹಠವ  ಹೊತ್ತು ತಿರುಗಿದ ಧೀರ ನ್ಯಾಷನಲ್​ ಸ್ಟಾರ್​ ರಾಕಿಭಾಯ್​​. ಕೆಜಿಎಫ್​ ಚಿತ್ರದ ಮೂಲಕ ಬ್ರಾಂಡ್​​ ಆಗಿರೋ ರಾಕಿಭಾಯ್​ ಹವಾ ಜೋರಾಗಿದೆ. ಇದೀಗ ಟಾಪ್​ ಮೋಸ್ಟ್  ನಟರ ಸಾಲಿನಲ್ಲೂ ಮಾಸ್ಟರ್​ ಪೀಸ್​ ಸದ್ದು ಮಾಡ್ತಿದ್ದಾರೆ. ಯೆಸ್​​.. ರಾಜಾಹುಲಿಯ ಘರ್ಜನೆ ಹೇಗಿದೆ ತಿಳಿಬೇಕಾ..? ಈ ಸ್ಟೋರಿ ಓದಿ.

ಇಂಡಿಯಾ ಟಾಪ್​​ 10 ನಟರ ಸಾಲಿನಲ್ಲಿ ಯಶ್​​​​

ಆಳೋಕೆ ಆಂತಾ ಬಂದ್ರೆ ರಾಕಿಭಾಯ್​ ಯಾವಾಗ್ಲೂ ಸುಲ್ತಾನ. ದಿಟ್ಟ ಹೆಜ್ಜೆ, ದೊಡ್ಡ ಕನಸು, ಬಿಡದ ಛಲದೊಂದಿಗೆ ಸ್ಯಾಂಡಲ್​​​ವುಡ್​ಗೆ ಎಂಟ್ರಿ ಕೊಟ್ಟ ನಟ ಯಶ್​. ಬಸ್​ ಡ್ರೈವರ್​ ಮಗನ ಯಶೋಗಾಥೆಯನ್ನು ಸೂರ್ಯ ಮುಳುಗದ ನಾಡು ಜಪಾನ್​​ ಕೂಡ ಕಣ್ಣರಳಿಸಿ ನೋಡಿದೆ. ತಮ್ಮದೇ ಜನಪ್ರಿಯ  ಪೇಪರ್​​ ಕಾಲಮ್​​ನಲ್ಲಿ ಸುದ್ದಿ ಮಾಡಿ ಪ್ರಕಟಿಸಿದೆ. ಇದೀಗ ಬಾರತೀಯ ಚಿತ್ರರಂಗದ ಶ್ರೇಷ್ಠ ಕಲಾವಿದರ ಸಾಲಿನಲ್ಲಿ ಯಶ್​ ಹೆಸ್ರು ರಾರಾಜಿಸ್ತಿದೆ.

ಬೊಂಬೈನ ಗಲ್ಲಿ ಗಲ್ಲಿಗಳಲ್ಲೂ ರಾಜಾಹುಲಿ ಆರ್ಭಟ ಜೋರಾಗಿದೆ. ಕೆಜಿಎಫ್​ ಸಿನಿಮಾ ನಂತ್ರ ಮಾಸ್ಟರ್​ ಪೀಸ್​ ಲೆವೆಲ್​​ ಚೇಂಜ್​ ಆಗಿದೆ. ಇದೀಗ ಪ್ರತಿ ಬಾರಿ ಆರ್ಮಾಕ್ಸ್​ ರಿಲೀಸ್​ ಮಾಡೋ ಟಾಪ್​​ ಮೋಸ್ಟ್​ ನಟರ ಸಾಲಿನಲ್ಲೂ ಯಶ್​ ಹೆಸ್ರು ಘರ್ಜಿಸುತ್ತಿದೆ. ಜುಲೈ ತಿಂಗಳಲ್ಲಿ ರಿಲೀಸ್​ ಮಾಡಿರೋ ಲಿಸ್ಟ್​​​ನಲ್ಲಿ ಟಾಪ್​​ 5 ಹೆಸರಲ್ಲಿ ಯಶ್​ಗೆ ಸ್ಥಾನ ಸಿಕ್ಕಿದೆ. ಮೋಸ್ಟ್​ ಪಾಪುಲರ್​ ಆ್ಯಕ್ಟರ್​​ ಲಿಸ್ಟ್​ನಲ್ಲಿ ಐದನೇ ಸ್ಥಾನದಲ್ಲಿ ರಾಕಿಭಾಯ್​​ ಮಿಂಚ್ತಿದ್ದಾರೆ.

  • ಬೀಸ್ಟ್​​ ಮಖಾಡೆ ಮಲಗಿದ್ರೂ ವಿಜಯ್​​ ಟಾಪ್​ ಒನ್..!​​
  • ಬಾಲಿವುಡ್​ ಸ್ಟಾರ್ಸ್​​​​ ಕಣ್ಮರೆ.. ಲಿಸ್ಟ್​​​ನಲ್ಲಿ ಅಕ್ಷಯ್​​​ ಒಬ್ಬರೇ

ಇತ್ತೀಚೆಗೆ ಬಾಲಿವುಡ್​ ಸಿನಿಮಾಗಳು ನೆಲಕಪ್ಪಳಿಸ್ತಾ ಇರೋದು ಎಲ್ರಿಗೂ ಗೊತ್ತಿದೆ. ಮಲ್ಟಿ ಸ್ಟಾರ್​ ಮೂವಿಗಳನ್ನು ಮಾಡೋಕೆ ಬಾಲಿವುಡ್​ ಹರಸಾಹಸ ಪಡ್ತಿದೆ. ಕಷ್ಟಪಟ್ಟು ಮಾಡಿದ ಸಿನಿಮಾಗಳು ನೆಲಕಚ್ಚುತ್ತಿವೆ. ಈ ನಡುವೆ ಸೌತ್​ ಇಂಡಸ್ಟ್ರಿಯ ಸ್ಟಾರ್ಸ್​ಗಳು ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. ಪ್ಯಾನ್​ ಇಂಡಿಯಾ ಸ್ಟಾರ್​ಗಳಾಗಿ ಆರ್ಭಟಿಸುತ್ತಿದ್ದಾರೆ. ಇದೀಗ ಆರ್ಮಾಕ್ಸ್​ ರಿಲೀಸ್​ ಮಾಡಿರೋ ಲಿಸ್ಟ್​ನಲ್ಲಿ ತಮಿಳಿನ ವಿಜಯ್​ ಮೊದಲ ಸ್ಥಾನದಲ್ಲಿದ್ದಾರೆ.

ನಟ  ವಿಜಯ್ ಸಿನಿಕರಿಯರ್​​​ನಲ್ಲಿ ಬೀಸ್ಟ್​ ಸಿನಿಮಾ ಸೋತ್ರೂ ಕೂಡ ಫ್ಯಾನ್ಸ್​​​ ಎದೆಯಲ್ಲಿ ಮೆಚ್ಚಿನ ನಟನಾಗಿದ್ದಾರೆ. ಪ್ರಭಾಸ್​ ಎರಡನೇ ಸ್ಥಾನ ಗಿಟ್ಟಿಸಿಕೊಂದಿದ್ದಾರೆ. ಜ್ಯೂ. ಎನ್​ಟಿಆರ್​​, ಅಲ್ಲು ಅರ್ಜುನ್​ ಕ್ರಮವಾಗಿ ಮೂರು , ನಾಲ್ಕನೇ ಸ್ಥಾನದಲ್ಲಿದ್ದರೆ, ಯಶ್​​ ಐದನೇ ಸ್ಥಾನದಲ್ಲಿ ಅಬ್ಬರಿಸ್ತಿದ್ದಾರೆ. ರಾಮ್​ ಚರಣ್​, ಅಕ್ಷಯ್​ ಕುಮಾರ್​, ಮಹೇಶ್​ ಬಾಬು, ಸೂರ್ಯ, ಅಜಿತ್​​ ಕುಮಾರ್​​​ ಟಾಪ್​ 10 ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿಪರ್ಯಾಸ ಅಂದ್ರೆ, ಬಾಲಿವುಡ್​​​ನಿಂದ ಅಕ್ಷಯ್​​ ಮಾತ್ರ ಏಳನೇ ಸ್ಥಾನದಲ್ಲಿದ್ದು ಬಾಲಿವುಡ್​​ನ​ ಪ್ರತಿನಿಧಿಸಿದ್ದಾರೆ.

ಬಾಯ್ಕಾಟ್​ ಬೆದರಿಕೆಯ ಹೆಸರಲ್ಲಿ ನಾರ್ಥ್​ ಸಿನಿಮಾಗಳು ಹೇಳ ಹೆಸರಿಲ್ಲದಂತೆ ಹೋಗುತ್ತಿವೆ. ಲಾಲ್​ಸಿಂಗ್​ ಚಡ್ಡಾ, ರಕ್ಷಾ ಬಂಧನ್​ ಸಿನಿಮಾಗಳು ಈ ಸುಳಿಯಲ್ಲಿ ಸಿಲುಕಿ ಬಾಕ್ಸ್​ ಆಫೀಸ್​ ಕಲೆಕ್ಷನ್​​ನಲ್ಲಿ ನೆಲಕಪ್ಪಳಿಸಿವೆ. ಈ ನಡುವೆ ಒಳ್ಳೆ ಕಥೆಗಳ ಮೂಲಕ ಸೌಥ್​ ಸಿನಿಮಾಗಳು ಜನರ ಹೃದಯ ಗೆದ್ದು ಹೆಮ್ಮೆಯಿಂದ ಬೀಗುತ್ತಿವೆ. ಪ್ರತಿ ಬಾರಿಯೂ ಆರ್ಮಾಕ್ಸ್​ ಬಿಡುಗಡೆ ಮಾಡೋ ಲಿಸ್ಟ್​​​ನಲ್ಲಿ ಯಶ್​​ ಸ್ಥಾನ ಭದ್ರವಾಗಿರೋದು ಕನ್ನಡಿಗರು ಹೆಮ್ಮೆ ಪಡೋ ವಿಚಾರವಾಗಿದೆ. ಎನಿವೇ, ಇಡೀ ವಿಶ್ವವೇ ಯಶ್​ ಮುಂದಿನ ಪ್ರಾಜೆಕ್ಟ್​ ಎದ್ರು ನೋಡ್ತಿದೆ. ರಾಕಿಭಾಯ್​ ಸದ್ಯದಲ್ಲೇ ಗುಡ್​ ನ್ಯೂಸ್​ ಕೊಡಲಿ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES