Wednesday, January 22, 2025

KGF ಚಾಚಾ​ಗೆ ಕ್ಯಾನ್ಸರ್.. ಮರುಗಿದ ಸ್ಯಾಂಡಲ್​ವುಡ್

ಕೆಜಿಎಫ್ ಸಿನಿಮಾದಲ್ಲಿ ಒಂದೊಂದು ಪಾತ್ರ ಕೂಡ ನೋಡುಗರ ಮನದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. ಚಾಚಾ ಪಾತ್ರದಿಂದ ಪ್ರೇಕ್ಷಕರ ದಿಲ್ ದೋಚಿದ ಹರೀಶ್ ರೈ, ಇದೀಗ ಕ್ಯಾನ್ಸರ್ ಕುಲುಮೆಯಲ್ಲಿ ಬೇಯುತ್ತಿದ್ದಾರೆ. ವಿಷ್ಯ ಹೊರಬೀಳ್ತಿದ್ದಂತೆ, ಇಡೀ ಚಿತ್ರರಂಗ ಅವ್ರ ನೆರವಿಗೆ ಧಾವಿಸಿದೆ. ಸ್ಟಾರ್​ಗಳೆಲ್ಲಾ ಕರೆ ಮಾಡಿ, ಧೈರ್ಯ ತುಂಬುತ್ತಿದ್ದಾರೆ.

  • ಥೈರಾಯ್ಡ್​ನಿಂದ ಬಳಲುತ್ತಿದ್ದ ಹರೀಶ್ ರೈಗೆ ಶಸ್ತ್ರ ಚಿಕಿತ್ಸೆ..!
  • ಶ್ವಾಸಕೋಶಕ್ಕೆ ಸೋಂಕು.. 4ನೇ ಸ್ಟೇಜ್.. 3 ವರ್ಷ ಟೈಂ
  • ತಿಂಗಳಿಗೆ ಮೂರೂವರೆ ಲಕ್ಷ ರೂ ಮಾತ್ರೆ.. 10 ತಿಂಗಳು

ಕೆಜಿಎಫ್​ನ ಅಧೀರ ಸಂಜಯ್ ದತ್ ಕ್ಯಾನ್ಸರ್​ನಿಂದ ಕ್ಯೂರ್ ಆಗಿ ಕೆಜಿಎಫ್ ಅಡ್ಡಾಗೆ ಕಾಲಿಟ್ಟಿದ್ರು. ಆದ್ರೀಗ ಹರೀಶ್ ರೈ ಅನ್ನೋ ಚಿತ್ರರಂಗದ ಹಿರಿಜೀವ ಗಂಟಲಲ್ಲಿ ಗಡ್ಡೆಯನ್ನ ಇಟ್ಟುಕೊಂಡೇ ಕೆಜಿಎಫ್ ಶೂಟಿಂಗ್ ಮಾಡಿದ್ರು ಅನ್ನೋದು ತಡವಾಗಿ ಬೆಳಕಿಗೆ ಬಂದಿದೆ. ಹೌದು.. ರಾಕಿಭಾಯ್ ಅಚ್ಚುಮೆಚ್ಚಿನ ಚಾಚಾ ಪಾತ್ರದಲ್ಲಿ ಹರೀಶ್ ರೈ, ಸಿನಿಮಾದ ತೂಕ ಹೆಚ್ಚಿಸಿದ್ರು. ಇದೀಗ ಅದೇ ಚಾಚಾ ಪಾತ್ರದಾರಿ ಹರೀಶ್ ರೈ ಕ್ಯಾನ್ಸರ್​ ಕುಲುಮೆಯಲ್ಲಿ ಬೇಯುತ್ತಿರೋದು ನಿಜಕ್ಕೂ ಶಾಕಿಂಗ್ ನ್ಯೂಸ್.

ಓಂ ಸಿನಿಮಾದ ಡಾನ್ ಪಾತ್ರದಿಂದ ಲೈಮ್​ಲೈಟ್​ಗೆ ಬಂದಂತಹ ಹರೀಶ್ ರೈ, ಅದಾದ ಬಳಿಕ ಕನ್ನಡ ಚಿತ್ರರಂಗದ ನೂರಾರು ಸಿನಿಮಾಗಳಲ್ಲಿ ಖಳನಾಯಕನಾಗಿ, ಪೋಷಕ ಪಾತ್ರದಾರಿಯಾಗಿ ಬಣ್ಣ ಹಚ್ಚಿದ್ರು. ಅವ್ರದ್ದೇ ಆದ ಯುನಿಕ್ ಸ್ಟೈಲ್​ನಿಂದ ನೋಡುಗರ ಮನಸ್ಸು ಗೆದ್ದಿದ್ರು. ಅದ್ರಲ್ಲೂ ಕೆಜಿಎಫ್ ಸಿನಿಮಾದ ಚಾಚಾ ಪಾತ್ರ ಅವ್ರ ಕರಿಯರ್​ನ ಮಹತ್ವದ ಪಾತ್ರವಾಗಿ ಹೊರಹೊಮ್ಮಿತ್ತು.

ಥೈರಾಯ್ಡ್​ನಿಂದ ಬಳಲುತ್ತಿದ್ದ ಅವ್ರು ಗಂಟಲಲ್ಲಿ ಗಡ್ಡೆ ಆಗಿದ್ರೂ, ಒಂದಷ್ಟು ಆರ್ಥಿಕವಾಗಿ ಸದೃಢರಾದ ಬಳಿಕ ಆಪರೇಷನ್ ಮಾಡಿಸಿಕೊಳ್ಳೋದಾಗಿ ಎಡವಟ್ಟು ಮಾಡಿಕೊಂಡಿದ್ದರು. ಇದೀಗ ಕೆಜಿಎಫ್ ಬಳಿಕ ಶಸ್ತ್ರ ಚಿಕಿತ್ಸೆ ನಡೆದಿದ್ದು, ಶ್ವಾಸಕೋಶಕ್ಕೆ ಸೋಂಕು ತಗುಲಿದೆ. ಅದೀಗ ಮಾರಣಾಂತಿಕ ಕ್ಯಾನ್ಸರ್​ಗೆ ತಿರುಗಿದ್ದು, ನಾಲ್ಕನೇ ಹಂತ ತಲುಪಿದೆಯಂತೆ.

ವೈದ್ಯರು ಇನ್ನೂ ನಾಲ್ಕು ವರ್ಷ ಚಿಂತಿಸೋ ಅವಶ್ಯಕತೆಯಿಲ್ಲ ಅಂತ ಭರವಸೆ ನೀಡಿದ್ದು, ಚಿಕಿತ್ಸೆಗಾಗಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಹರೀಶ್ ರೈ. ತಿಂಗಳಿಗೆ ಮೂರೂವರೆಯಿಂದ ನಾಲ್ಕು ಲಕ್ಷ ರೂಪಾಯಿಯಷ್ಟು ಮಾತ್ರೆಯನ್ನ ಸೇವಿಸುತ್ತಿರೋ ಹರೀಶ್ ರೈ ಅವ್ರು, ಅದನ್ನ ಬರೋಬ್ಬರಿ ಹತ್ತು ತಿಂಗಳ ಮಟ್ಟಿಗೆ ತೆಗೆದುಕೊಳ್ಳಬೇಕಂತೆ. ಒಂದ್ಕಡೆ ಮಾನಸಿಕ ಒತ್ತಡ, ಮತ್ತೊಂದ್ಕಡೆ ಆರ್ಥಿಕ ದುರ್ಬಲತೆ. ಇವೆರಡರ ಮಧ್ಯೆ ಅಕ್ಷರಶಃ ಕುಗ್ಗಿ ಹೋಗಿದ್ದಾರೆ ಎಲ್ಲರ ಅಚ್ಚು ಮೆಚ್ಚಿನ ಚಾಚಾ.

ಚಿತ್ರರಂಗದಿಂದ ಸಾಕಷ್ಟು ಮಂದಿ ಕಲಾವಿದರು, ತಂತ್ರಜ್ಞರು ಹಾಗೂ ಕರುನಾಡಿನ ಜನತೆ ಅವ್ರಿಗೆ ಆರ್ಥಿಕ ನೆರವು ನೀಡಲು ಮುಂದಾಗ್ತಿದ್ದಾರೆ. ಇದು ನಿಜಕ್ಕೂ ಮೆಚ್ಚಬೇಕಾದ ವಿಷಯವೇ ಸರಿ. ಆದ್ರೆ ಅವ್ರಿಗೆ ಹಣಕಾಸಿನ ಸಹಾಯದ ಜೊತೆ ನೈತಿಕ ಬೆಂಬಲ ನೀಡಿ, ಧೈರ್ಯ ತುಂಬುವಂತಹ ಮನಸ್ಸುಗಳು ಬೇಕಿದೆ. ಕೆಜಿಎಫ್​ನ ರಾಕಿಭಾಯ್, ವಿಜಯ್ ಕಿರಗಂದೂರು ಹಾಗೂ ಪ್ರಶಾಂತ್ ನೀಲ್ ಸದ್ಯ ಅವರ ಕಷ್ಟಕ್ಕೆ ಸ್ಪಂದಿಸುತ್ತಿದ್ದು, ಎಲ್ಲರ ಚಾಚಾ ಚಿತ್ರರಂಗದ ಆಸ್ತಿಯಾಗಿ ಉಳಿದುಕೊಳ್ಳಬೇಕು. ಅವ್ರು ಕ್ಯಾನ್ಸರ್​ನ ಗೆದ್ದು ಬರಬೇಕು ಅನ್ನೋದು ಎಲ್ಲರ ಪ್ರಾರ್ಥನೆ ಆಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES