ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಇಂದು ಒಂದೇ ದಿನ ಮೂರು ಬಾರಿ ಕಂಪಿಸಿದ ಭೂಮಿದ ಘಟನೆ ನಡೆದಿದೆ.
ಇಂದು ನಸುಕಿನ ಜಾವ ಹಾಗೂ ಬೆಳಿಗ್ಗೆ ಭೂಕಂಪನವಾಗಿತ್ತು. ಇದೀಗಾ ಮಧ್ಯಾಹ್ನ 2.34 ಕ್ಕೆ ಮತ್ತೇ ಭೂಕಂಪನ ಈ ಪ್ರದೇಶಗಲ್ಲಿ ಆಗಿದೆ. ಸುಮಾರು ಭೂಕಂಪನ ರಿಕ್ಟರ್ ಮಾಪನದಲ್ಲಿ 2.6 ತೀವ್ರತೆ ದಾಖಲು ಆಗಿದ್ದು, ಭೂಕಂಪನದ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.
ಇಂದು ಬೆಳಗಿನ ಜಾವ 2.21 ಕ್ಕೆ 2.4 ತೀವ್ರತೆಯಲ್ಲಿ ಹಾಗೂ ಬೆಳಿಗ್ಗೆ 6.58 ಕ್ಕೆ 3.9 ತೀವ್ರತೆಯಲ್ಲಿ ಕಂಪನವಾಗಿತ್ತು. ಇಂದು ಮಧ್ಯಾಹ್ನ 2.34 ಕ್ಕೆ 2.6 ತೀವ್ರತೆಯಲ್ಲಿ ಮತ್ತೇ ಭೂಕಂಪನವಾಗಿದೆ. ಹೀಗಾಗಿ ಇಲ್ಲಿನ ಗ್ರಾಮಸ್ಥರು ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ.
ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ, ಭೂ ಚಲನೆ ವೇಳೆ ನಡೆಯು ಪ್ರಕ್ರಿಯೆಯಾಗಿದೆ ಯಾರೂ ಆತಂಕಗೊಳ್ಳದೇ ಸೂಕ್ತ ಮುಂಜಾಗೃತಾ ತೆಗೆದುಕೊಳ್ಳಲು ಸೂಚನೆ ನೀಡಲಾಗಿತ್ತು. ಈಗಾಗುತ್ತಿರುವ ಭೂಕಂಪನದಿಂದ ಯಾವುದೇ ಅಪಾಯವಿಲ್ಲಾ ಯಾರೂ ಭಯಗೊಳ್ಳಬಾರದು ಎಂದು ಜಿಲ್ಲಾಧಿಕಾರಿ ಡಾ ವಿಜಯಮಹಾಂತೇಶ ದಾನಮ್ಮನವರ ಅವರು ನಿನ್ನೆ ಜನರಲ್ಲಿ ಮನವಿ ಮಾಡಿದ್ದರು.