Wednesday, January 22, 2025

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ, ನಾಳೆ ತೀರ್ಮಾನ ಸಿಎಂ ಬೊಮ್ಮಾಯಿ

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಆಚರಣೆಗೆ ರಾಜ್ಯ ಸರ್ಕಾರ ವಿವೇಚನೆಗೆ ಬಿಟ್ಟಿದ್ದು ಎಂದು ಹೈಕೋರ್ಟ್ ಇಂದು ತಿರ್ಪು ನೀಡಿದ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ.

ಕೋರ್ಟ್ ತೀರ್ಪು ಬಂದಿರುವುದನ್ನ ಗಮನಿಸಿದ್ದೇನೆ. ಈ ಬಗ್ಗೆ ನಾಳೆ ಸಭೆ ಮಾಡುತ್ತೇವೆ. ಕಂದಾಯ ಸಚಿವರು ಹಾಗೂ ಅಧಿಕಾರಗಳ ಜತೆ ಸಭೆ ಮಾಡಿ ಕಾನೂನು ಸುವ್ಯವಸ್ಥೆ ನೋಡಿಕೊಂಡು ಗಣೇಶ ಆಚರಣೆ ಬಗ್ಗೆ ತೀರ್ಮಾನ ಮಾಡ್ತೇವೆ. ಬಹುಜನರ ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇದೆ ವೇಳೆ ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ, ಯಾರು ಹಬ್ಬ ಆಚರಣೆ ಮಾಡಬೇಕು ಎಂಬ ಬಗ್ಗೆ ನಾಳೆ ತೀರ್ಮಾನ ಮಾಡ್ತೇವೆ. ಕೋರ್ಟ್ ತೀರ್ಪು ಸಂತೋಷ ತಂದಿದೆ. ಇದು ಬಹುಧರ್ಮಿಯರ ದೇಶ, ಅರ್ಜಿ ಪರಿಶೀಲನೆ ಮಾಡಬಹುದು ಎಂದು ಕೋರ್ಟ್ ಹೇಳಿದೆ. ಕಂದಾಯ ಇಲಾಖೆಗೆ ಅವಕಾಶ ನೀಡಿದೆ. ಪೂರ್ತಿ ಮಾಹಿತಿ ಓದಿದ ಬಳಿಕ ಸರ್ಕಾರ ನಿರ್ಧಾರ ಪ್ರಕಟ ಮಾಡಲಿದೆ.

ಅದಕ್ಕೂ ಮುನ್ನ ಸಿಎಂ ಜೊತೆ ಮತ್ತು ಪ್ರಬುಲಿಂಗ ನಾವಡಿಗೆ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಈ ಜಾಗ ಕಂದಾಯ ಇಲಾಖೆಗೆ ಸೇರಿದ್ದು ಎನ್ನೋದು ಸ್ಪಷ್ಟ ಆಗಿದೆ. ಮುಂಬರುವ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಮಾಡ್ತೇವೆ.

ಹೈಕೋರ್ಟ್​ ತೀರ್ಪು ಒಳ್ಳೆಯ ತೀರ್ಪು. ನೆನ್ನೆ ಸ್ವಲ್ಪ ಬೇಸರ ಆಗಿತ್ತು. ಕಂದಾಯ ಭೂಮಿ ಅಲ್ಲ ಎಂದಿದ್ದಕ್ಕೆ ಬೇಸರ ಆಗಿತ್ತು. ಕಂದಾಯ ಇಲಾಖೆಗೆ ಈ ಜಾಗ ಸೇರಿದ್ದು ಎಂದು ತಿಳಿದು ಖುಷಿ ಆಗಿದೆ ಎಂದು ಆರ್ ಅಶೋಕ್ ಹೇಳಿದರು.

RELATED ARTICLES

Related Articles

TRENDING ARTICLES