ಬೆಂಗಳೂರು: ಜಿ ಕೆಟಗೇರಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಇನ್ನೂಳಿದ ಮೂವರು ಬಿಡಿಎ ಕಮೀಷನರ್ ರಾಜೇಶ್ ಗೌಡ ಅವರ ಒತ್ತಡ ಹಾಕಿ ಅಕ್ರಮ ಸೈಟ್ ಪಡೆದ ವಿಚಾರವಾಗಿ ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಮಾತನಾಡಿದ್ದಾರೆ.
ಬಿಡಿಎ ಕಮಿಷನರ್ ರಾಜೇಶ್ ಗೌಡ ಗೆ ಸುಪ್ರೀಂ ತರಾಟೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹೇಳಿರೋದು ಗಂಭೀರವಾಗಿ ನಾವು ತೆಗೆದುಕೊಂಡಿದ್ದೇವೆ, ಇದು ಕೇವಲ ಅರಗ ಜ್ಞಾನೇಂದ್ರ ಅವರಿಗೆ ಮಾತ್ರ ಅಲ್ಲ, ಸಾಮಾನ್ಯರಿಗೂ ನೀಡುವಾಗ ಈ ರೀತಿಯಾಗಿದೆ. ನಮ್ಮ ಬಿಡಿಎ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ
ಬಿಡಿಎ ಅಧಿಕಾರಿಗಳು ತಪ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಗುರುತಿಸಿ ಹೇಳಿದೆ. ನಾನು ಈಗಾಗಲೇ ಅರಗ ಜ್ಞಾನೇಂದ್ರ ಅವರ ಜತೆಗೆ ಮಾತನಾಡಿದ್ದೇನೆ. ಅವರಿಗೆ ಕೊಟ್ಟಿರುವ ನಿವೇಶನವನ್ನು ವಾಪಾಸ್ ಪಡೆಯುತ್ತೇವೆ. ಅವರ ನಿವೇಶನದ ಕೆಟಗರಿ ತಕ್ಕಂತೆ ಅವರಿಗೆ ನಿವೇಶನ ಕೊಡ್ತೇವೆ ಎಂದರು.
ಇನ್ನು ರಾಜೇಶ್ ಗೌಡ ಅವರನ್ನು ಕಮಿಷನರ್ ಸ್ಥಾನದಿಂದ ವರ್ಗ ಮಾಡಿ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಈ ಬಗ್ಗೆ ನಾನು ಸಿಎಂ ಬೊಮ್ಮಾಯಿ ಜೊತೆ ಮಾತನಾಡಿ ಕ್ರಮ ತೆಗೆದು ಕೊಳ್ಳುತ್ತೇವೆ ಎಂದು ಬಿಡಿಎ ಅಧ್ಯಕ್ಷ ತಿಳಿಸಿದರು.