Sunday, May 19, 2024

ಎಲ್ಲೆಲ್ಲೂ ಗಣೇಶ ಹಬ್ಬದ ಸಂಭ್ರಮ ಜೋರು

ಬೆಂಗಳೂರು : ಎಲ್ಲಾ ಕಡೆ ಗಣೇಶನ ಹಬ್ಬದ ಸಂಭ್ರಮ ಜೋರಾಗಿದೆ.ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಗಣಪತಿ ಮಹಾಮಂಡಳಿಯ ಮುಖಂಡರನ್ನು ಕರೆಸಿ ಟೌನ್ ಹಾಲ್‌ನಲ್ಲಿ ಶಾಂತಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ ಸಮುದಾಯದ ಮುಖಂಡರು ಭಾಗಿಯಾಗಿದ್ದು, ಸರ್ಕಾರದ ನಿಯಮಾವಳಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸರ್ಕಾರದ ಗೈಡ್ ಲೈನ್ಸ್‌ ಪಾಲಿಸುವುದರ ಜೊತೆಗೆ ಶಾಂತಿಯುತವಾಗಿ ಗಣೇಶೋತ್ಸವ ಆಚರಣೆ ಮಾಡ್ಡೇಕು ಅಂತ ಸ್ಥಳೀಯ ಮುಖಂಡರಿಗೆ ತಿಳಿಸಿದ್ದಾರೆ.

ಈ ಬಾರಿ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಕೂರಿಸ್ಬೇಕಾದ್ರೇ ನೀವು ಆರು ಇಲಾಖೆಗಳಲ್ಲಿ ಅನುಮತಿ ಪಡೆಯಬೇಕಾಗುತ್ತದೆ. ಸ್ಥಳೀಯ ಪೊಲೀಸ್ ಠಾಣೆ, ಬಿಬಿಎಂಪಿ, ಕಂದಾಯ ಇಲಾಖೆ, ಬೆಸ್ಕಾಂ, ಅಗ್ನಿಶಾಮಕ ದಳ ಜೊತೆಗೆ ಸಂಚಾರಿ ಪೊಲೀಸರ ಅನುಮತಿ ಕೂಡ ಪಡೆಯಬೇಕಾಗುತ್ತೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡ್ಬೇಕು ಅಂದ್ರೆ ಕಡ್ಡಾಯವಾಗಿ ಪೊಲೀಸ್ ಇಲಾಖೆ ಅನುಮತಿ ಇರ್ಲೇಬೇಕಾಗಿರುತ್ತೆ. ನೀವು ಅರ್ಜಿ ಕೊಟ್ಟ ನಂತರ ಆಯೋಜಕರ ಪೂರ್ವ ಪರಿಶೀಲನೆ ಮಾಡಿ ಅವರ ಮೇಲೆ ಯಾವುದೇ ರೀತಿ ಕೇಸ್ ಇಲ್ಲದಿದ್ದಲ್ಲಿ ಮಾತ್ರ ಅನುಮತಿ ನೀಡಲಾಗುತ್ತದೆ. ಇನ್ನು ಗಣೇಶೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಲ್ಲಿ ಅದಕ್ಕೆಲ್ಲಾ ಸಂಪೂರ್ಣ ಜವಾಬ್ದಾರಿ ಆಯೋಜಕರು ಹೊರಬೇಕಾಗಿರುತ್ತೆ.

ಇನ್ನು ಸಭೆಯಲ್ಲಿ ಬೆಸ್ಕಾಂ ಡೆಪ್ಯೂಟಿ ಡೈರೆಕ್ಟರ್ ನಾಗರಾಜ್ ಮಾತನಾಡಿ ಹೈ ಟೆನ್ಶನ್ ಇರೋ ಕಡೆ ವಿದ್ಯುತ್ ಸಂಪರ್ಕ ನೀಡುವುದಿಲ್ಲ. ಒಂದು ವೇಳೆ ನಿಮಗೆ ಗಣೇಶೋತ್ಸವ ಕಾರ್ಯಕ್ರಮಕ್ಕೆ ವಿದ್ಯುತ್ ಸಂಪರ್ಕ ಬೇಕಾದಲ್ಲಿ ಕೆಲವು ನಿಬಂಧನೆಗಳನ್ನ ಅನುಸರಿಸಿ ಅನುಮತಿ ಮೇರೆಗೆ ನೀವು ವಿದ್ಯುತ್ ಸಂಪರ್ಕ ಪಡೆಯಬಹುದು ಎಂದು ತಿಳಿಸಿದ್ದಾರೆ.

ಇನ್ನು ಈ ಆರು ಇಲಾಖೆಗಳಿಂದಾನೂ ಅನುಮತಿ ಪಡೆಯದೇ ಮುಂಜಾಗ್ರತೆಯು ಇಲ್ಲದೆ ನೀವೇನಾದ್ರು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ರೇ ನಿಮ್ಮ ಮೇಲೆ ಕೇಸ್ ಬೀಳೋದು ಪಕ್ಕಾ. ಇತ್ತ ಶಾಂತಿ ಸಭೆ ನಡೆಸ್ತಿದ್ದ ಅಧಿಕಾರಿಗನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡು ಇಷ್ಟೆಲ್ಲಾ ರೂಲ್ಸ್ ಮಾಡ್ತಿರಲ್ಲ ಹೈ ಟೆನ್ಶನ್ ವೈರ್ ಗಳು ಕೈಗೆ ಎಟುಕುವಂತೆ ನೇತಾಡ್ತಿರ್ತಾವೆ. ಮೊದ್ಲು ಅವುಗಳನ್ನು ಬೆಸ್ಕಾಂ ಸರಿಪಡಿಸ್ಬೇಕು. ಆರ್ಗ್ಯಾನಿಕ್ ಗಣೇಶ ಮೂರ್ತಿಯನ್ನು ಬಳ್ಸಿ ಅನ್ನೋ ನೀವು ಬೇರೆ ಗಣೇಶ ಮೂರ್ತಿಗಳನ್ನು ತಯಾರಿ ಮಾಡೋಕ್ಕೆ ಯಾಕ್ ಅವಕಾಶ ಕೊಟ್ಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆಯಾಗಿ ಈ ಬಾರಿ ಗಣೇಶ ಮೂರ್ತಿಯನ್ನು ನೀವು ಸಾರ್ವಜನಿಕ ಸ್ಥಳದಲ್ಲಿ ಕೂರಿಸ್ಬೇಕಾದ್ರೂ ಇಲಾಖೆಗಳ ಅನುಮತಿ ಪಡೆದು ನಿಯಮಗಳನ್ನು ಪಾಲಿಸ್ಲೇಬೇಕಾಗಿದೆ.

ಅಶ್ವಥ್ ಎಸ್‌.ಎನ್.ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES

Related Articles

TRENDING ARTICLES