Thursday, December 26, 2024

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ‘ಹೈ’ ಬ್ರೇಕ್..!

ಬೆಂಗಳೂರು :  ತೀವ್ರ ವಿವಾದಕ್ಕೆ ಕಾರಣವಾಗಿರುವ ಚಾಮರಾಜಪೇಟೆ ಈದ್ಗಾ ಮೈದಾನದ ಮಾಲೀಕತ್ವ ವಿಚಾರಕ್ಕೆ ಸಂಬಂಧಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಆದೇಶಿಸಿದೆ. ಬಿಬಿಎಂಪಿ ಆದೇಶ ಪ್ರಶ್ನಿಸಿ ವಕ್ಫ್ ಮಂಡಳಿ ಸಲ್ಲಿಸಿರುವ ಅರ್ಜಿ ಕುರಿತು ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾ.ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಹೊರಡಿಸಿ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿದೆ. ವಕ್ಫ್‌ ಬೋರ್ಡ್ ಪರ ವಾದಿಸಿದ ಹಿರಿಯ ವಕೀಲರು, ವಕ್ಫ್‌ ಬೋರ್ಡ್‌ ಈಗಾಗಲೇ ಚಾಮರಾಜಪೇಟೆಯ ಈದ್ಗಾ ಮೈದಾನ ತನಗೆ ಸೇರಿದ್ದು ಎಂದು ಅಧಿಸೂಚನೆ ಹೊರಡಿಸಿದೆ. ಕಂದಾಯ ಇಲಾಖೆಗೆ ಸೇರಿದ್ದೆಂಬ ಬಿಬಿಎಂಪಿ ಆದೇಶ ಸರಿಯಲ್ಲ ಅಂತಾ ವಕ್ಫ್‌ ಬೋರ್ಡ್ ವಾದಕ್ಕೆ ಎಜಿ ಪ್ರಭುಲಿಂಗ್ ನಾವದಗಿ ಆಕ್ಷೇಪ ವ್ಯಕ್ತಪಡಿಸಿದರು. 1965 ರಲ್ಲೂ ಸರ್ಕಾರ ಸರ್ವೆ ನಡೆಸಿತ್ತು ಯಾರೂ ಆಕ್ಷೇಪಿಸಿರಲಿಲ್ಲ. 57 ವರ್ಷಗಳಿಂದಲೂ ಆಸ್ತಿ ಸರ್ಕಾರದ ಹೆಸರಿನಲ್ಲಿದೆ ಎಂದು ಸಮರ್ಥಿಸಿಕೊಂಡರು.ಇನ್ನೂ ,ಸಾಕಷ್ಟು ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಚಾಮರಾಜಪೇಟೆ ಈದ್ಗಾ ಮೈದಾನ ಮಾಲೀಕತ್ವ ವಿವಾದದ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ ನೀಡಿತು. ಅಲ್ಲದೆ, ಆಟದ ಮೈದಾನವಾಗಿ ಮಾತ್ರ ಬಳಸಬಹುದಾಗಿದೆ, ರಂಜಾನ್, ಬಕ್ರೀದ್ ವೇಳೆ ಮಾತ್ರ ಪ್ರಾರ್ಥನೆಗೆ ಬಳಸಬಹುದು ಎಂದು ಆದೇಶ ನೀಡಿ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿತು.

ಇನ್ನೂ ಹೈಕೋರ್ಟ್ ಅದೇಶವನ್ನೂ ಸ್ವಾಗತಿಸಿ ಮಾತನಾಡಿದ ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸಾ ಆದಿ ಈಗಾಗ್ಲೆ ಬಿಬಿಎಂಪಿ ಅಯುಕ್ತರೆ ಈ ಆಸ್ತಿ ನಮ್ಮದಲ್ಲ ಅಂತ ಹೇಳಿದ್ರು. ಆದ್ರೆ, ಬಿಬಿಎಂಪಿಯ ಜಂಟಿ ಆಯುಕ್ತ ಶ್ರೀನಿವಾಸರವರು ಯಾವುದೇ ಜ್ಞಾನವಿಲ್ಲದೆ, ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಅಂತ ಅದೇಶ ನೀಡಿದ್ರು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲು ಏರಿದ್ವಿ. ಈಗ ಹೈ ಕೋರ್ಟ್ ಯಥಾಸ್ಥಿತಿ ಕಾಯ್ದುಕೋಳ್ಳುವಂತೆ ಆದೇಶ ನೀಡಿದೆ. ಇದು ಸರ್ಕಾರಕ್ಕೆ ತಂದ ಜಯ, ಮುಂದಿನ ದಿನಗಳಲ್ಲಿ ಮೈದಾನದ ಖಾತಾಗೆ ಅರ್ಜಿ ಹಾಕ್ತೀವಿ ಅಂತ ತಿಳಿಸಿದ್ದಾರೆ.

ಒಟ್ನಲ್ಲಿ ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಕೂರಿಸ್ತೀವಿ, ಸಾವರ್ಕರ್ ಉತ್ಸವ ಮಾಡಿಯೇ ಬಿಡ್ತೀವಿ ಅಂತ ಹೇಳ್ತಿದ್ದ ಹಿಂದೂಪರ ಸಂಘಟನೆಗಳ ಮುಖಂಡರಿಗೆ ನ್ಯಾಯಾಲಯ ಶಾಕ್ ನೀಡಿದೆ.ಇನ್ನು ನಾವು ಗಣೇಶನ ಕೂರಿಸ್ತೀವಿ, ಇದು ಯಾರ ಅಪ್ಪನ ಸ್ವತ್ತು ಅಲ್ಲ ಅಂತ ಹೇಳ್ತಿದ್ದ ಬಿಜೆಪಿ ಮಂತ್ರಿ ಹಾಗೂ ಶಾಸಕರು ಈಗ ಗಪ್ ಚುಪ್ ಆಗುವಂತಾಗಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES