ಬೆಂಗಳೂರು : ಕೋಳಿ ಮೊಟ್ಟೆಯನ್ನ ತಿನ್ನುವ ಹಕ್ಕಿದೆಯೇ ಹೊರತು ಎಸೆಯುವ ಹಕ್ಕಿಲ್ಲ ಎಂದು ನಾಟಿಕೋಳಿ ಹಿಡಿದು, ಮೊಟ್ಟೆ ಎಸೆತದ ವಿರುದ್ಧ ವಾಟಾಳ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮೆಜೆಸ್ಟಿಕ್ನಲ್ಲಿಂದು ನಾಟಿ ಕೋಳಿಗಳ ಪ್ರತಿಭಟನೆ ನಡೆದಿದ್ದು, ಕೋಳಿ ಮೊಟ್ಟೆಯನ್ನ ತಿನ್ನುವ ಹಕ್ಕಿದೆಯೇ ಹೊರತು ಎಸೆಯುವ ಹಕ್ಕಿಲ್ಲ. ಮೊಟ್ಟೆ ಹೊಡೆಯುವ ಸಂಸ್ಕೃತಿ ಒಳ್ಳೆಯದಲ್ಲ. ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸಿದಿದ್ದು ಸರಿಯಿಲ್ಲ. ವಿಪಕ್ಷ ನಾಯಕರಿಗೆ ಮುಖ್ಯಮಂತ್ರಿಯಷ್ಟೆ ಅವರಿಗೆ ಜವಾಬ್ದಾರಿ ಇದೆ, ವಿಪಕ್ಷದವರನ್ನೂ ಗೌರವಿಸಬೇಕು. ಸಿಎಂ ಬೊಮ್ಮಾಯಿ ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕು. ರಸ್ತೆ ರಸ್ತೆಯಲ್ಲಿ ಮೊಟ್ಟೆ ಹೊಡೆದರೆ ರಾಜ್ಯಾದ್ಯಂತ ಅಶಾಂತಿ ಸೃಷ್ಟಿಯಾಗುತ್ತದೆ ಎಂದರು.
ಇನ್ನು, ಗಣೇಶೋತ್ಸವದಂದು ಸಾವರ್ಕರ್ ಉತ್ಸವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಶಾಂತಿ ಕದಡುವ ಕೆಲಸ ಆಗ್ತಾಯಿದೆ, ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕು. ಗಾಂಧಿ ಒಬ್ಬರೇ ಈ ದೇಶಕ್ಕೆ ಮಹಾತ್ಮ. ಕನ್ನಡ ಪರ ಸಂಘಟನೆಗಳು ಈ ವಾರದಲ್ಲಿ ಸಭೆ ಮಾಡುತ್ತೇವೆ. ಈ ರಾಜ್ಯ ಕನ್ನಡಿಗರದ್ದು, ಕನ್ನಡಕ್ಕೆ ಅಪಮಾನ ಆದ್ರೆ ನಾವು ಸುಮ್ಮನೆ ಕೂರೂದಿಲ್ಲ. ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡಿದ್ದು, ಮಹಾತ್ಮ ಗಾಂಧಿ ಬಿಟ್ಟು ಬೇರೆ ಯಾರನ್ನು ನಾವು ಒಪ್ಪುವುದಿಲ್ಲ. ಸಾವರ್ಕರ್ ಫೋಟೋ ಮೆರವಣಿಗೆಯನ್ನ ನಾವು ಖಂಡಿಸುತ್ತೇವೆ ಎಂದರು.