Tuesday, December 24, 2024

ಲಾರಿ-ಕ್ರೂಸರ್​ ಮಧ್ಯೆ ಭೀಕರ ಅಪಘಾತ : 9 ಮಂದಿ ಸಾವು

ತುಮಕೂರು : ಲಾರಿ-ಕ್ರೂಸರ್​ ಮಧ್ಯೆ ಭೀಕರ ಅಪಘಾತ. 9 ಮಂದಿ ದುರ್ಮರಣವಾದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಳ್ಳಂಬಳ್ಳ ಬಳಿ ನಡೆದಿದೆ.

ಇನ್ನು, ಅಪಘಾತದಲ್ಲಿ ಮೃತಪಟ್ಟವರು ರಾಯಚೂರು ಮೂಲದವರಾಗಿದ್ದು, ಮಕ್ಕಳು, ಮಹಿಳೆಯರು ಸೇರಿ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ಕೂಲಿ ಕಾರ್ಮಿಕರ ಬಾಳಲ್ಲಿ ಇದೆಂಥಾ ಘೋರ ವಿಧಿಯಾಟ..?  ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕೂಲಿ ಕಾರ್ಮಿಕರು ಕ್ರೂಸರ್​ ವಾಹನದಲ್ಲಿ ಒಟ್ಟು 20 ಜನ ಇದ್ದರು.

ಲಾರಿ ಡಿಕ್ಕಿಯಾಗಿ ಕ್ರೂಸರ್​ನಲ್ಲಿದ್ದ 9 ಜನರ ದುರ್ಮರಣ ಹೊಂದಿದ್ದಾರೆ. 11 ಮಂದಿಗೆ ಗಂಭೀರ ಗಾಯಗೊಂಡವರನ್ನು , ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಾದ ಸ್ಧಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES