Monday, December 23, 2024

ಗುತ್ತಿಗೆದಾರ ಕೆಂಪಣ್ಣ ಆರೋಪಕ್ಕೆ ಮುಗಿಬಿದ್ದ ಸಚಿವರು

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40% ಆರೋಪ ಮಾಡಿದ್ದರು. ಈ ಬಗ್ಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ಮಾತನಾಡಿ, ಗುತ್ತಿಗೆದಾರ ಕೆಂಪಣ್ಣನಿಗೆ ತಲೆ ಸರಿಯಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೆಂಪಣ್ಣ ಅವರು ಮೊದಲು ಮೆಂಟಲ್ ಆಸ್ಪತ್ರೆಗೆ ಹೋಗಲಿ. ಸುಮ್ನೆ ಸುಮ್ನೆ ಏನೇನೋ ಆರೋಪ ಮಾಡ್ತಿದ್ದಾರೆ. ಕೆಂಪಣ್ಣ 10 ಲಕ್ಷ ಕಾಮಗಾರಿ ಕೂಡ ಮಾಡಿಲ್ಲ. ಅವ್ರನ್ನ ಅದೇಗೆ ಅಧ್ಯಕ್ಷರನ್ನ ಮಾಡ್ರಿದ್ರೋ ಗೊತ್ತಿಲ್ಲ. ಕಾಂಗ್ರೆಸ್ ಹೇಳಿದಂತೆ ಕೆಂಪಣ್ಣ ಅವರು ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.

ಇನ್ನು ಈ ವೇಳೆ ಮಾತನಾಡಿದ ಎಂಟಿಬಿ ನಾಗರಾಜ್, ರಾಜ್ಯ ಸರ್ಕಾರದಲ್ಲಿ ಯಾವುದೇ ಕಮಿಷನ್ ಇಲ್ಲ. ದಾಖಲೆ ಇದ್ರೆ ಕೊಡಲಿ ಎಂದರು.

ಮೊಬೈಲ್ ನಲ್ಲಿ ಪವರ್ ಸ್ಟಿಂಗ್ ಎಂಟಿಬಿ ನಾಗರಾಜ್ ಅವರು ವಿಕ್ಷೀಸಿ, ನಾನು ಹಣ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಹಣ ಸಂಪಾದಿಸಿ ಮನೆಯಲ್ಲಿಟ್ಟು ಬಂದಿದ್ದೇನೆ. ನನ್ನ ಮೇಲಿನ ಆರೋಪ ಸಾಬೀತು ಮಾಡಲಿ ನೋಡೋಣ. ಆರೋಪ ಸಾಭೀತಾದ್ರೆ ರಾಜೀನಾಮೆ ಕೊಟ್ಟು ಹೋಗ್ತೀನಿ ಎಂದು ತಿಳಿಸಿದರು.

ಈ ಬಗ್ಗೆ ಸಚಿವ ಗೋವಿಂದ್ ಕಾರಜೋಳ್ ಮಾತನಾಡಿ, ಕೆಂಪಣ್ಣ ಕೆಳಮಟ್ಟದಲ್ಲಿ ಆರೋಪ ಮಾಡ್ತಿದ್ದಾರೆ. ಈ ಬಗ್ಗೆ ನೇರವಾಗಿ ಬಂದು ದಾಖಲೆ ಕೊಡಲಿ. ಯಾರಿಗೆ ಕೈಯಲ್ಲಿ ನಾನು ಕಮಿಷನ್ ಕೇಳಿದೆ ಎಂದು ಬಹಿರಂಗಪಡಿಸಲಿ. ಜೊತೆಗೆ ಲೋಕಾಯುಕ್ತಾಗೆ ಕೊಡಲಿ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.

RELATED ARTICLES

Related Articles

TRENDING ARTICLES