Sunday, December 22, 2024

ಬಿಡಿಎ ಕಮೀಷನರ್​ ಎಂ.ಬಿ ರಾಜೇಶ್ ಗೌಡ ಎತ್ತಂಗಡಿಗೆ ಸುಪ್ರೀಂ ಸೂಚನೆ.!

ನವದೆಹಲಿ: ಶಿವರಾಮ ಕಾರಂತ ಬಡಾವಣೆ ವಿವಾದ ಕುರಿತು ಬಿಡಿಎ ಕಮಿಷನರ್ ಎಂ.ಬಿ ರಾಜೇಶ್ ಗೌಡ ರನ್ನು ಕಮಿಷನರ್ ಹುದ್ದೆಯಿಂದ ಎತ್ತಂಗಡಿಗೆ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಸಚಿವ ಅರಗ ಜ್ಞಾನೇಂದ್ರ ಸೇರಿದಂತೆ ನಾಲ್ವರಿಗೆ ಜಿ ಕ್ಯಾಟಗರಿ ಬದಲಿ ನಿವೇಶನ ಬಿಡಿಎ ಕಮೀಷನರ್​ ಹಂಚಿಕೆ ಮಾಡಿದ್ದರು. ಕಮೀಷನರ್ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ಕಮಿಷನರ್ ವಿರುದ್ಧ ಸುಪ್ರೀಂ ಕೋರ್ಟ್​ ಸಮಾಧಾನ ವ್ಯಕ್ತಪಡಿಸಿ ಈ ಆದೇಶ ಹೊರಡಿಸಿದೆ.

ಸುಪ್ರೀಂ ಕೋರ್ಟ್ ಆದೇಶಗಳ ಬಗ್ಗೆ ಬಿಡಿಎ ಕಮೀಷನರ್​ಗೆ ಗೌರವವಿಲ್ಲ. ಇಂದಿನಿಂದ ಯಾವುದೇ ಮಹತ್ವದ ಆದೇಶಗಳಿಗೆ ಸಹಿ ಹಾಕಬಾರದು. ನ್ಯಾಯಮೂರ್ತಿ ಎ.ವಿ ಚಂದ್ರಶೇಖರ್‌ ಸಮಿತಿಯು ಸಲ್ಲಿಸಿದ್ದ 20ನೇ ಪ್ರಗತಿ ಆಧರಿಸಿ ಈ ಆದೇಶ ಹೊರಡಿಸಿದೆ.

ಬಿಡಿಎ ಪರ ವಕೀಲರು ಕಮೀಷನರ್ ನಿಂದ ತಪ್ಪಾಗಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ. ಹಗರಣದಲ್ಲಿ ಬಿಡಿಎ ಅಧಿಕಾರಿಗಳು ಭಾಗಿ ಹಿನ್ನೆಲೆ, ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿಗಳನ್ನು ವರ್ಗಾವಣೆ ಬಗ್ಗೆ ಪರಿಶೀಲನೆ
ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ಸಂಜಿವ್ ಖನ್ನಾ ದ್ವಿ ಸದಸ್ಯ ಪೀಠದಿಂದ ಆದೇಶ ಹೊರಲಬಿದ್ದಿದೆ.

RELATED ARTICLES

Related Articles

TRENDING ARTICLES