Monday, December 23, 2024

ಮದಗಜಗಳ ನಡುವೆ ಅಭಿವೃದ್ಧಿ ಸಮರ..!

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಎಂಟು ತಿಂಗಳಿದೆ.. ಆದರೆ, ಈ ಮಧ್ಯೆ ಬೊಂಬೆನಗರಿ ಚನ್ನಪಟ್ಟಣದಲ್ಲಿ ಚುನಾವಣಾ ಕಾವು ರಂಗೇರಿದೆ.. ಅದರಲ್ಲೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನಡುವೆ ಮಾತಿನ ಸಮರ ತಾರಕಕ್ಕೇರಿದೆ. ಅಂದಹಾಗೆ, ಚನ್ನಪಟ್ಟಣ
ಕ್ಷೇತ್ರಕ್ಕೆ ಸದ್ಯ ಕುಮಾರಸ್ವಾಮಿ ಶಾಸಕರಾಗಿದ್ದಾರೆ. ಈ ಹಿಂದೆ ಇದೇ ಕ್ಷೇತ್ರವನ್ನ ಸಿ.ಪಿ.ಯೋಗೇಶ್ವರ್ ಪ್ರತಿನಿಧಿಸುತ್ತಿದ್ದರು.. 2018ರಲ್ಲಿ ಕುಮಾರಸ್ವಾಮಿ ವಿರುದ್ದ ಯೋಗೇಶ್ವರ್ ಸೋತಿದ್ದರು. ಆದ್ರೀಗ ಕ್ಷೇತ್ರವನ್ನ ಮತ್ತೆ ಪಡೆಯಲೇಬೇಕು ಎಂದು ಶತಾಯ ಗತಾಯ ಪ್ರಯತ್ನಪಡ್ತಿದ್ದಾರೆ.

ಕ್ಷೇತ್ರದ ಅಭಿವೃದ್ದಿ ಬಗ್ಗೆ ಶಾಸಕ ಹೆಚ್​.ಡಿ.ಕುಮಾರಸ್ವಾಮಿ ಅವರನ್ನ ಕೆಣಕಿದ್ದಾರೆ. ಚನ್ನಪಟ್ಟಣಕ್ಕೆ ಬರುವಾಗ ಚಿನ್ನದಪಟ್ಟಣ ಮಾಡುತ್ತೇನೆ ಎಂದು ಬಂದರು. ಆದರೆ ಅಭಿವೃದ್ದಿ ಕಾರ್ಯ ಮಾಡಲಿಲ್ಲ. ಕುಮಾರಸ್ವಾಮಿ ಅವರದ್ದು ಏನಿದ್ದರು ಒಪ್ಪಂದದ ರಾಜಕಾರಣ. ಜೆಡಿಎಸ್ ನೈಪತ್ಯಕ್ಕೆ ಸರಿಯುತ್ತಿದೆ. ಆ ಕ್ಷೇತ್ರಗಳನ್ನ ಬಿಜೆಪಿ ಆವರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ರೆ. ಯೋಗೇಶ್ವರ್​ಗೆ ತಿರುಗೇಟು ನೀಡಿದ ಹೆಚ್​ಡಿಕೆ, ಚನ್ನಪಟ್ಟಣ ಕ್ಷೇತ್ರಕ್ಕೆ ಇಂತಹದ್ದೇ ಕೆಲಸ ಮಾಡುತ್ತೇನೆ ಎಂದು ಹೇಳಿಲ್ಲ. ಸಿಎಂ ಆದ ಮೇಲೆ ಏನು ಕೆಲಸ ಮಾಡಬೇಕೋ ಅದನ್ನ ಮಾಡಿದ್ದೇನೆ.. 25 ವರ್ಷಗಳಲ್ಲಿ ಆಗದ ಕೆಲಸವನ್ನ ಮೂರು ವರ್ಷಗಳಲ್ಲಿ ಮಾಡಿದ್ದೇನೆ. ತಲೆ ಕೆಟ್ಟವರಿಗೆ ಯಾಕೆ ತಿರುಗೇಟು ನೀಡಲಿ ಎಂದು ಮಾತಲ್ಲೇ ತಿವಿದರು.

ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವು ತಿಂಗಳುಗಳು ಬಾಕಿ ಇರುವಾಗಲೇ ಬೊಂಬೆನಗರಿ ಚನ್ನಪಟ್ಟಣದಲ್ಲಿ ಚುನಾವಣೆ ಕಾವು ರಂಗೇರುತ್ತಿದೆ. ನಾಯಕರುಗಳ ಮಾತಿನ ಸಮರವೂ ಕಾವೇರಿದೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರವೀಣ್ ಮೆಳೇಹಳ್ಳಿ, ಪವರ್ ಟಿವಿ, ರಾಮನಗರ

RELATED ARTICLES

Related Articles

TRENDING ARTICLES