Saturday, January 25, 2025

ನೋಯ್ಡಾದ 40 ಅಂತಸ್ಥಿನ ಕಟ್ಟಡ ನೆಲಸಮಗೊಳಿಸಲು ಭರದಿಂದ ಸಿದ್ಧತೆ

ಉತ್ತರ ಪ್ರದೇಶ: ನೋಯ್ಡಾ ಸೂಪರ್‌ಟೆಕ್‌ನ ಅಕ್ರಮ ಅವಳಿ ಗೋಪುರ ಕಟ್ಟಡವನ್ನ ನೆಲಸಮಗೊಳಿಸಲು ಆಗಸ್ಟ್ 28 ರಂದು ನೋಯ್ಡಾ ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.

ಆಗಸ್ಟ್ 28ರ(ಭಾನುವಾರ) ಮಧ್ಯಾಹ್ನ 2.30ಕ್ಕೆ ನೋಯ್ಡಾ ಅವಳಿ ಗೋಪುರ ಕಟ್ಟಡ ಧ್ವಂಸ ಕಾರ್ಯ ನಡೆಯಲಿದೆ. ಗೋಪುರಗಳು 100 ಮೀಟರ್‌ಗಿಂತ ಹೆಚ್ಚು ಎತ್ತರವಾಗಿವೆ. 40 ಅಂತಸ್ತುಗಳ ಈ ಬೃಹತ್ ಕಟ್ಟಡಗಳನ್ನು ನೆಲಸಮ ಮಾಡಲು ಸುಪ್ರೀಂಕೋರ್ಟ್ ಆಗಸ್ಟ್ 28ರಂದು ದಿನಾಂಕ ನಿಗದಿ ಮಾಡಿದೆ.

ಈ ಕಟ್ಟಡವನ್ನು 2009 ರಲ್ಲಿ ನೋಯ್ಡಾದಲ್ಲಿ ನಿರ್ಮಾಣ ಮಾಡಲಾಗಿತ್ತು. ಅಗಸ್ಟ್​ 28ಕ್ಕೆ 15 ಸೆಕೆಂಡ್​ನಲ್ಲಿ ಕಟ್ಟಡ ನೆಲಸಮ ಆಗಲಿದೆ. 12-15 ನಿಮಿಷಗಳ ಕಾಲ ಧೂಳು ಸ್ಥಳದಲ್ಲಿ ಆವರಿಸುತ್ತದೆ. ಸುಪ್ರೀಂ ನಿರ್ದೇಶನದಂತೆ ಕಟ್ಟಡಗಳನ್ನು ಕೆಡವಲು ನೋಯ್ಡಾ ಪ್ರಾಧಿಕಾರ ಸಕಲ ಅಂತಿಮ ಸಿದ್ಧತೆಗಳನ್ನು ಮಾಡಲಾಗಿದೆ.

ನೋಯ್ಡಾ ಅಥಾರಿಟಿ ಸಿಇಒ ಮತ್ತು ನೋಯ್ಡಾ ಪೊಲೀಸ್ ಕಮಿಷನರ್ ಕೂಡ ಇಂದು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ನೆಲಸಮಗೊಳಿಸಲು ಇಂದು ಎಲ್ಲಾ ಮಹಡಿಗಳನ್ನು ಸ್ಫೋಟಕಗಳಿಂದ ಕೂಡಿದ ತಂತಿಯಿಂದ ಜೋಡಿಸಲಾಗಿದೆ ಎಂದು ಎಡಿಫೈಸ್ ಇಂಜಿನಿಯರಿಂಗ್‌ನ ಪ್ರಾಜೆಕ್ಟ್ ಮ್ಯಾನೇಜರ್ ಮಯೂರ್ ಮೆಹ್ತಾ ಎನ್​ಡಿಟಿವಿಗೆ ಹೇಳಿದ್ದಾರೆ.

RELATED ARTICLES

Related Articles

TRENDING ARTICLES