Sunday, December 22, 2024

ಪೊಲೀಸ್ ಠಾಣೆ ಮುಂಭಾಗವೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪೆಟ್ರೋಲ್ ಸುರಿದುಕೊಂಡು ವ್ಯಕ್ತಿಯೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಯತ್ನಸಿದ ಘಟನೆ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿದೆ.

ಜಿಗಣಿ ಪೊಲೀಸ್ ಠಾಣೆ ಮುಂಭಾಗವೇ ಪೆಟ್ರೋಲ್ ಸುರಿದುಕೊಂಡು ರತೀಶ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯವನಾದ ರತೀಶ್​, ಗಂಡನ ವಿರುದ್ಧ ದೂರು ನೀಡಲು ಪತ್ನಿ ಕವಿತಾ ಜಿಗಣಿ ಠಾಣೆ ಬಳಿ ಆಗಮಿಸಿದ್ದಳು. ಈ ವೇಳೆ ಠಾಣೆ ಬಳಿ ಬಂದಿದ್ದ ಹೆಂಡತಿ ಜೊತೆ ರತೀಶ್​ ಇಬ್ಬರ ನಡುವೆ ವಾಗ್ವಾದ ತಾರಕ್ಕೇರಿ ಈ ಘಟನೆ ನಡೆದಿದೆ.

ಹತ್ತು ವರ್ಷದ ಹಿಂದೆ ಕೊಳ್ಳೆಗಾಲ ಮೂಲದ ಕವಿತಾ ಎಂಬ ಯುವತಿಯನ್ನು ರತೀಶ್​ ಪ್ರೀತಿಸಿ ವಿವಾಹವಾಗಿದ್ದ. ಮದುವೆ ಬಳಿಕ ಬನ್ನೇರುಘಟ್ಟದಲ್ಲಿ ಮಡದಿಯೊಂದಿಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದು, ಇತ್ತೀಚೆಗೆ ಸಂಸಾರದಲ್ಲಿ ವಿರಸ ಮೂಡಿತ್ತು. ಈ ಹಿನ್ನಲೆಯಲ್ಲಿ ಪತ್ನಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಬಂದಿದ್ದಳು. ಆಗ ರತೀಶ್​ ದೂರು ನೀಡದಂತೆ ಹೇಳಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ರತೇಶ್ ಪೊಲೀಸ್ ಠಾಣೆ ಮುಂಭಾಗವೇ ಪೆಟ್ರೋಲ್ ಸುರಿದುಕೊಂಡು ರತೀಶ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಬೆಂಕಿ ನಂದಿಸಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES