Monday, December 23, 2024

ಹಸುಗಳ ಮೇಲೆ ಆಸಿಡ್ ಎರಚಿ ದುಷ್ಕೃತ್ಯ ಎಸಗಿದ ಕಿರಾತಕರು.!

ಆನೇಕಲ್: ತಮಿಳುನಾಡಿನಲ್ಲಿ ಎಮ್ಮೆ ಹಾಗೂ ಹಸುಗಳ ಮೇಲೆ ಆಸಿಡ್ ಎರಚಿ ಕಿರಾತಕರು ಅಮಾನುಷ ಕೃತ್ಯ ಎಸಗಿದ ಘಟನೆ ನಡೆದಿದೆ.

ತಮಿಳುನಾಡಿನ ಕೊಯಂಬತ್ತೂರಿನ ಮೆಟ್ಟುಪಾಳ್ಯಂ ನಲ್ಲಿ ಈ ಅಮಾನುಷ ಕೃತ್ಯವನ್ನ ಕಿಡಿಗೇಡಿಗಳು ಮಾಡಿದ್ದು, ರಾಜಕುಮಾರ್ ಎಂಬುವವರಿಗೆ ಸೇರಿದ ಮೂಕ ಪ್ರಾಣಿಗಳಾದ ಎಮ್ಮೆ ಹಾಗೂ ಹಸುಗಳು ಮೇಲೆ ಆಸಿಡ್ ಎರಚಿದ್ದಾರೆ.

ಸುಮಾರು ಎಪ್ಪತ್ತಕ್ಕೂ ಹೆಚ್ಚು ಎಮ್ಮೆ ಹಾಗೂ ಹಸುಗಳಿಗೆ ಗಂಭೀರ ಗಾಯಗೊಂಡಿದ್ದು, ಬೆನ್ನು, ತಲೆ, ಕಾಲು ಹಾಗೂ ದೇಹದ ಹಲವು ಭಾಗಗಳಿಗೆ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ.

ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ರೈತ ರಾಜಕುಮಾರ್, ಸ್ಥಳಕ್ಕೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಹಾಗೂ ಪೋಲೀಸರ ಭೇಟಿ ನೀಡಿ, ಆ್ಯಸಿಡ್ ದಾಳಿಗೆ ಒಳಗಾಗಿರುವ ಜಾನುವಾರುಗಳಿಗೆ ಹೆಚ್ಚಿನ ಚಿಕಿತ್ಸೆಗೆ ಮುಂದಾಗಿದ್ದಾರೆ.

ಈ ಕುರಿತು ಮೆಟ್ಟುಪಾಳ್ಯಂ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮಾನುಷ ಕೃತ್ಯ ಎಸಗಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES