Wednesday, January 22, 2025

ನಾಲಿಗೆ ಕಟ್ ಮಾಡುವುದಾಗಿ ಕೆ.ಎಸ್ ಈಶ್ವರಪ್ಪ ನಿವಾಸಕ್ಕೆ ಬೆದರಿಕೆ ಪತ್ರ.!

ಶಿವಮೊಗ್ಗ: ಅನಾಮಧೇಯ ವ್ಯಕ್ತಿಯಿಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಶಿವಮೊಗ್ಗದ ಜಯಶ್ರೀ ನಿವಾಸಕ್ಕೆ ಬೆದರಿಕೆ ಪತ್ರ ಇಂದು ಬಂದಿದೆ.

ಪೋಸ್ಟ್ ನಿಂದ ಲಕೋಟೆ ಮೂಲಕ ಈಶ್ವರಪ್ಪ ಅವರ ನಿವಾಸಕ್ಕೆ ಬಂದಿದ್ದು, ಮುಸ್ಲಿಂ ಗುಂಡಾಗಳು ಎಂದು ಹೇಳಿದ್ದಕ್ಕೆ ಪ್ರತೀಕಾರಕ್ಕೆ ಕೆ.ಎಸ್ ಈಶ್ವರಪ್ಪ ಅವರ ನಾಲಿಗೆ ಕಟ್ ಮಾಡುವುದಾಗಿ ಅನಾಮಧೇಯ ವ್ಯಕ್ತಿ ಈ ಪತ್ರದಲ್ಲಿ ಬರೆದಿದ್ದಾನೆ.

ಟಿಪ್ಪು ಸುಲ್ತಾನ್ ಬಗ್ಗೆ ಕೆ.ಎಸ್ ಈಶ್ವರಪ್ಪ ಮಾತನಾಡಿದ್ದಕ್ಕೆ ಈ ಬೆದರಿಕೆ ಹಾಕಲಾಗಿದ್ದು, ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನ ಕಾಲೇಜಿಗೆ ಮುಸ್ಲಿಂರಿಂದ ಸಿಮೆಂಟ್ ಹಾಗೂ ಇಟ್ಟಿಗೆ ಬೇಕು. ಆದರೆ, ಮುಸ್ಲಿಂರು ಬೇಡವೇ ಎಂದು ಪತ್ರದಲ್ಲಿ ಉಲ್ಲೇಖಸಲಾಗಿದೆ. ಅಲ್ಲದೇ ಈಶ್ವರಪ್ಪ ವಿರುದ್ಧ ಏಕವಚನದಲ್ಲಿ ಅನಾಮಧೇಯ ವ್ಯಕ್ತಿ ನಿಂದಿಸಿದ್ದಾರೆ.

ಕೆ.ಎಸ್ ಈಶ್ವರಪ್ಪ ಅವರ ಶಿವಮೊಗ್ಗ ನಿವಾಸಕ್ಕೆ ಬೆದರಿಕೆ ಪತ್ರ ಬಂದ ಹಿನ್ನಲೆಯಲ್ಲಿ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗೆ ಈಶ್ವರಪ್ಪ ಸಹಾಯಕ ಸಂತೋಷ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES