Wednesday, January 22, 2025

ಅಪ್ಪು ಸ್ಮರಣಾರ್ಥ ಬೆಂಗಳೂರಲ್ಲಿ ಈ ಬಾರಿ ಸೈಮಾ..!

ಸೌತ್​ ಸಿನಿಮಾಗಳಿಗೆ ನೀಡುವ ಸೈಮಾ ಫಿಲ್ಮ್​ ಫೇರ್​ ಅವಾರ್ಡ್​ಗೆ ಕ್ಷಣಗಣನೆ ಶುರುವಾಗಿದೆ. ಮೊದಲ ಬಾರಿಗೆ ಸಿಲಿಕಾನ್​ ಸಿಟಿ ಈ ಅದ್ಧೂರಿ ಸಮಾರಂಭಕ್ಕೆ ಸಾಕ್ಷಿಯಾಗ್ತಿದೆ. ನಾಮಿನೇಷನ್​ ಲಿಸ್ಟ್​​ನಲ್ಲಿ ಹಿಟ್​ ಸಿನಿಮಾಗಳು ರೇಸ್​​ನಲ್ಲಿವೆ. ಈ ಬಾರಿಯ ಪ್ರಶಸ್ತಿಯನ್ನು ಬಾಚಿಕೊಳ್ಳೋಕೆ ಸ್ಟಾರ್​ ಕಲಾವಿದರು ತುದಿಗಾಲಲ್ಲಿ ನಿಂತಿದ್ದಾರೆ. 2022ರ ಸೈಮಾ ಸಿನಿ ಹಬ್ಬದ ಸ್ಪೆಷಾಲಿಟಿಗಳೇನು ಗೊತ್ತಾ..? ಈ ಸ್ಟೋರಿ ಓದಿ.

  • ನಾಮಿನೇಷನ್​ ರೇಸ್​​​​ನಲ್ಲಿ  ಅಪ್ಪು, ಗಣಿ, ರಚ್ಚು ಮಿಂಚು

ಈ ಬಾರಿಯ ಸೈಮಾ ಫಿಲ್ಮ್​ ಫೇರ್ ಅವಾರ್ಡ್​​ ಸಿಲಿಕಾನ್​ ಸಿಟಿಯಲ್ಲಿ ನಡೀತಿದೆ. ಮೊದಲ ಬಾರಿಗೆ ಉದ್ಯಾನ ನಗರಿಗೆ ಸೌತ್​ ಸಿನಿದುನಿಯಾದ ಸ್ಟಾರ್ ಕಲಾವಿದರು ಬಂದಿಳಿಯಲಿದ್ದಾರೆ. ಹಿಟ್​ ಸಿನಿಮಾಗಳ ಪೈಪೋಟಿಯಲ್ಲಿ ವಿಜಯಲಕ್ಷ್ಮಿ ಯಾರಾ ಪಾಲಾಗಲಿದ್ದಾಳೆ ಅನ್ನೋ ಕುತೂಹಲ ಮನೆ ಮಾಡಿದೆ. ಇನ್ನೂ ವಿಶೇಷ ಅಂದ್ರೆ, ಈ ಬಾರಿಯ ಸೈಮಾ ಅವಾರ್ಡ್​​ ಅಪ್ಪು ಸವಿನೆನಪಿನಲ್ಲಿ ನಡೆಯಲಿದೆ. ದೇವತಾ ಮನುಷ್ಯ ಪುನೀತ್​ ರಾಜ್​ಕುಮಾರ್​ಗೆ ಗೌರವ ಸಲ್ಲಿಸುವ ಮೂಲಕ ಸೈಮಾ ಸಿನಿಹಬ್ಬ ನಡೆಯಲಿದೆ.

ಕನ್ನಡದ ಸಿನಿಮಾಗಳು ಪ್ಯಾನ್​ ಇಂಡಿಯಾ ಲೆವೆಲ್​​ನಲ್ಲಿ ಘರ್ಜಿಸ್ತಾ ಇರೋ ಕಾರಣ, ಸಿಲಿಕಾನ್​ ಸಿಟಿಯನ್ನು ಸೆಲೆಕ್ಟ್​ ಮಾಡಲಾಗಿದೆ. ಸೆಪ್ಟೆಂಬರ್​ 10 ಹಾಗೂ 11 ರಂದು ಅರಮನೆ ಮೈದಾನದಲ್ಲಿ ಎರಡು ದಿನಗಳ ಅದ್ಧೂರಿ ಸಿನಿ  ಮಹೋತ್ಸವ ನಡೆಯಲಿದೆ. ಈ ಸಮಾರಂಭದಲ್ಲಿ ನಾಲ್ಕು ರಾಜ್ಯಗಳ ತಾರೆಯರು, ತಂತ್ರಜ್ನರು, ಭಾಗವಹಿಸಿಲಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳು ಪೈಪೋಟಿಗಿಳಿಯಲಿವೆ

  • ಕನ್ನಡದ ಟಾಪ್​ ನಟಿಯರಲ್ಲಿ ರಶ್ಮಿಕಾ ನಾಮಿನೇಷನ್​..!
  • ಸೂಪರ್​ ಸ್ಟಾರ್​​ ಕಲಾವಿದರ ಕಲರ್​ಫುಲ್​ ಕಾರಂಜಿ

ಕಲಾವಿದರಿಗೆ ಕೊಡುವ ಪ್ರತಿಷ್ಠಿತ ಪ್ರಶಸ್ತಿಗಳ ಸಾಲಿನಲ್ಲಿ ಸೈಮಾ ಅವಾರ್ಡ್​ ಕೂಡ ಒಂದು. ಸೌತ್​ ಇಂಡಿಯನ್​​ ಇಂಟರ್​ನ್ಯಾಷನಲ್​ ಅವಾರ್ಡ್​ ಅ್ನನು ಚಿಕ್ಕದಾಗಿ ಸೈಮಾ ಅವಾರ್ಡ್​ ಎನ್ನಲಾಗುತ್ತೆ. ಜನಮೆಚ್ಚಿದ ಸಿನಿಮಾಗಳಲ್ಲಿ ಬೆಸ್ಟ್​ ಆ್ಯಕ್ಟರ್​​, ಬೆಸ್ಟ್​ ಮೂವಿ ಲಿಸ್ಟ್​ ಮಾಡಿ ಸೆಲೆಕ್ಟ್​ ಮಾಡಲಾಗುತ್ತೆ. ಯುವರತ್ನ ಚಿತ್ರದ ನಟನೆಗಾಗಿ ಪುನೀತ್​ ರಾಜ್​ಕುಮಾರ್​ ಹೆಸ್ರು ನಾಮಿನೇಟ್​​​ ಆಗಿದ್ದು, ಹಿಟ್​ ಲಿಸ್ಟ್​​ನಲ್ಲಿದೆ. ಸೈಮಾ ರೇಸ್​ನಲ್ಲಿ ಸಖತ್​ ಚಿತ್ರಕ್ಕಾಗಿ ಗಣೇಶ್​, ಬಡವ ರಾಸ್ಕಲ್​ ಚಿತ್ರಕ್ಕಾಗಿ ಡಾಲಿ ಧನಂಜಯ ಕೂಡ ನಾಮಿನೇಟ್ ಆಗಿದ್ದಾರೆ.

ಒಟ್ಟು ಆರು ಮಂದಿ ಕನ್ನಡದ ನಟರು ನಾಮಿನೇಟ್​ ಆಗಿದ್ದು, ಸೆಂಚುರಿ ಸ್ಟಾರ್​ ಶಿವಣ್ಣ, ರಿಷಬ್​ ಶೆಟ್ಟಿ ಕೂಡ ನಾಮಿನೇಟ್​ ಆಗಿದ್ದಾರೆ. ಸೈಮಾ ಪ್ರಶಸ್ತಿಯನ್ನು ಬಾಚಿಕೊಳ್ಳಲು ನಟಿಯರು ಕೂಡ ಪೈಪೋಟಿ ನಡೆಸಿದ್ದಾರೆ. ಪೊಗರು ಚಿತ್ರಕ್ಕಾಗಿ ರಶ್ಮಿಕಾ, ಲವ್​ ಯು ರಚ್ಚು ಚಿತ್ರದಿಂದ ರಚಿತಾ ರಾಮ್​​, ಮದಗಜ ಚಿತ್ರಕ್ಕಾಗಿ ಆಶಿಕಾ, ಬಡವ ರಾಸ್ಕಲ್​ ಚಿತ್ರದಿಂದ ಅಮೃತಾ ಅಯ್ಯಂಗಾರ್​​, ಸಖತ್​ ಚಿತ್ರದಿಂದ ನಿಶ್ವಿಕಾ ನಾಯ್ಡು ನಾಮಿನೇಟ್​ ರೇಸ್​​ನಲ್ಲಿದ್ದಾರೆ.

ಇದು 10 ನೇ ಆವೃತ್ತಿಯ ಸಮಾರಂಭವಾಗಿದ್ದು, ಕಳೆದ ಬಾರಿಗಿಂತ ರಂಗೇರಲಿದೆ. ಸೌತ್​ ಸಿನಿಮಾಗಳ ನಡುವಿನ ಈ ಹೋರಾಟದಲ್ಲಿ ಪ್ರಶಸ್ತಿ ಯಾರ ಪಾಲಾಗಲಿದೆ ಅನ್ನೋ ಕುತೂಹಲ ಎಲ್ಲರಿಗೂ ಇದೆ. ಹಾಡು, ಕುಣಿತ, ತಮಾಷೆ, ತಲೆಹರಟೆಯ ನಿರೂಪಣೆಯ ನಡುವೆ ಮಸ್ತ್​ ಮನರಂಜನೆಯ ನಡುವೆ ಸೈಮಾ ಸಮಾರಂಭ ನಡೆಯಲಿದೆ. ಈ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ದಿನಗಣನೆ ಶುರುವಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES