Wednesday, January 22, 2025

ಕುಮಾರಸ್ವಾಮಿ’ಯನ್ನ ಭೇಟಿಯಾದ ಡಿಕೆ ಶಿವಕುಮಾರ್​ ಭಾವ ಶರತ್​ ಚಂದ್ರ.!

ರಾಮನಗರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರ ಭಾವ ಕೆಪಿಸಿಸಿ ಸದಸ್ಯ ಶರತ್ ಚಂದ್ರ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಗ್ರಾಮದ ಖಾಸಗಿ ರೆಸಾರ್ಟ್ ನಲ್ಲಿ ಕುಮಾರಸ್ವಾಮಿ ಅವರನ್ನ ಶರತ್ ಚಂದ್ರ ಭೇಟಿಯಾಗಿದ್ದಾರೆ. ಕಾರ್ಯಕ್ರಮದ ನಿಮಿತ್ತ ಬಂದಿದ್ದ ಹೆಚ್ಡಿಕೆಯನ್ನ ಭೇಟಿ ಶರತ್ ಭೇಟಿಯಾಗಿರುವುದು ರಾಮನಗರ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇತ್ತೀಚೆಗೆ ಡಿ.ಕೆ ಸಹೋದರರ ವಿರುದ್ಧ ಶರತ್ ಚಂದ್ರ ಅವರು ಅಸಮಧಾನ ಹೊರಹಾಕಿದ್ದರು. ಚನ್ನಪಟ್ಟಣ ವಿಧಾನಸಭಾ ಟಿಕೇಟ್ ಕೈತಪ್ಪುವ ಹಿನ್ನೆಲೆ ಶರತ್​ ತಮ್ಮ ಭಾಮೈದರ ವಿರುದ್ಧ ತೊಡೆ ತಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನು ಕೆಲ ದಿನಗಳಲ್ಲಿ ನನ್ನ ಮುಂದಿನ ನಿರ್ಧಾರ ತಿಳಿಸುವುದಾಗಿ ಆಗ ಶರತ್ ಚಂದ್ರ ಹೇಳಿದ್ದರು. ಜಿಲ್ಲೆಯ ಜೆಡಿಎಸ್ ಮುಖಂಡರ ಒತ್ತಾಯದ ಮೇರೆಗೆ ಇಂದು ಹೆಚ್.ಡಿಕೆಯನ್ನ ಭೇಟಿಯಾಗಿ ಹಲವು ಮಾತುಕತೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES