Wednesday, January 22, 2025

ಬೆಂಗಳೂರು ರಸ್ತೆ ಗುಂಡಿಗೆ ಮತ್ತೊಂದು ಜೀವ ಬಲಿ

ಬೆಂಗಳೂರು : ಕಾಲೇಜಿಗೆ ತನ್ನ ಮಗಳನ್ನು ಬಿಟ್ಟು ವಾಪಾಸ್ ಆಗುತ್ತಿದ್ದ ವೇಳೆ ರಸ್ತೆ ಗುಂಡಿಯಿಂದಾಗಿ ಬೈಕ್ ಸ್ಕಿಡ್ ಆಗಿ ಮತ್ತೊಂದು ಜೀವ ಬಲಿ ಬಲಿಯಾದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಹೇರೋಹಳ್ಳಿ ಮುಖ್ಯ ರಸ್ತೆಯ ಗುಂಡಿಯಿಂದ ಸುಪ್ರೀತ್ (44) ಎಂಬ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಆಗಸ್ಟ್ 18ಕ್ಕೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ರಸ್ತೆ ಗುಂಡಿಯಿಂದಾಗಿ ಬೈಕ್ ಸ್ಕಿಡ್ ಆಗಿ ಸುಪ್ರೀತ್ ನೆಲಕ್ಕೆ ಬಿದ್ದಿದ್ದಿದ್ದಾರೆ.

ಇನ್ನು, ಆಗಸ್ಟ್ 18ರಂದು ಬಿದ್ದು ಗಂಭೀರಗಾಯಗೊಂಡಿದ್ದ ಸುಪ್ರೀತ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಕಾರಿಯಾಗದೆ ಆಗಸ್ಟ್ 22ರ ಮುಂಜಾನೆ ಮೃತರಾಗಿದ್ದಾರೆ. ಸುಪ್ರೀತ್ ರಸ್ತೆ ಗುಂಡಿಯಿಂದಾಗಿ ಮಗಚಿ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

RELATED ARTICLES

Related Articles

TRENDING ARTICLES