Wednesday, January 22, 2025

ರೂಲ್ ಮಾಡೋಕೆ ಪೂಜೆ ಮುಗಿಸಿದ ‘ಪುಷ್ಪ’ರಾಜ್..!

ರಾಕಿಭಾಯ್​ ಅಬ್ಬರದ ನಡುವೆ ಝೇಂಕರಿಸ್ತಾ ಇರೋ ಮತ್ತೊಂದು ಹೆಸ್ರು ಟಾಲಿವುಡ್​ ಸೂಪರ್​ ಸ್ಟಾರ್​ ಅಲ್ಲು ಅರ್ಜುನ್​. ಕೆಜಿಎಫ್​​ ನಂತ್ರ ವಿಶ್ವ ಮಟ್ಟದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಸಿನಿಮಾ ಪುಷ್ಪ. ಇದೀಗ ಪುಷ್ಪ ಸೀಕ್ವೆಲ್​​ ಬಗ್ಗೆ ಇಡೀ ಸಿನಿದುನಿಯಾ ಎದ್ರು ನೋಡ್ತಿದೆ. ಇದೀಗ ಪುಷ್ಪ 2 ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿದೆ.

  • ಇನ್ಮುಂದೆ ಪುಷ್ಪ ತಗ್ಗೋದೆ ಇಲ್ಲ.. ಸ್ಮಗ್ಲಿಂಗ್​ ಬೇಟೆ ಶುರು

ಇಡೀ ವಿಶ್ವವೇ ದಕ್ಷಿಣ ಭಾರತೀಯ ಸಿನಿಮಾಗಳ  ಕಡೆಗೆ ತಿರುಗಿ ನೋಡುವಂತೆ ಮಾಡಿದ್ದು ಆರ್​ಆರ್​ಆರ್​​, ಕೆಜಿಎಫ್​​​, ಪುಷ್ಪ ಸಿನಿಮಾಗಳು. ಇನ್ನು, ಪುಷ್ಪ ಹಾಗೂ ಕೆಜಿಎಫ್​ ಪೈಪೋಟಿಗೆ ಬಿದ್ದವರಂತೆ ಬಾಕ್ಸ್ ಆಫೀಸ್ ಕಲೆಕ್ಷನ್​​​ ಲೂಟಿ ಮಾಡಿದ್ವು. ಪುಷ್ಪನ ರಗಡ್​ ಲುಕ್​​​, ಖಡಕ್​ ಡೈಲಾಗ್​​​, ಚಂದನವನದ ಕಳ್ಳಸಾಗಣಿಕೆ ಕಂಡು ಅಲ್ಲು ಫ್ಯಾನ್ಸ್​ ಸಖತ್ ಥ್ರಿಲ್​ ಆಗಿದ್ರು. ಇದೀಗ ಪುಷ್ಪ ಸೀಕ್ವೆಲ್​ ಸಿನಿಮಾ ಸೆಟ್ಟೇರಿದೆ. ಅದ್ಧೂರಿ ಮುಹೂರ್ತದೊಂದಿಗೆ ಪುಷ್ಪ 2 ಚಿತ್ರಕ್ಕೆ ಚಾಲನೆ ನೀಡಲಾಗಿದೆ.

ತಗ್ಗೋದೆ ಇಲ್ಲಾ ಅಂತ ಚಿತ್ರಪ್ರೇಮಿಗಳ ಎದೆಯಲ್ಲಿ ರೋಮಾಂಚನವಾಗುವಂತೆ ಅಲ್ಲು ಅರ್ಜುನ್​ ಮಾಡಿದ್ರು. ತಮ್ಮ ವಿಭಿನ್ನ ಮ್ಯಾನರಿಸಂ, ಮಾತಿನ ಶೈಲಿ, ವಾಕಿಂಗ್​ ಸ್ಟೈಲ್​​ ಎಲ್ಲವೂ ಪಕ್ಕಾ ಲೋಕಲ್​ ಫೀಲ್​ ಕೊಟ್ಟಿತ್ತು. ಟಾಲಿವುಡ್​​ ಸೇರಿದಂತೆ ಬಾಲಿವುಡ್​​​ನಲ್ಲೂ ಅಬ್ಬರಿಸಿದ ಪುಷ್ಪ ಎಲ್ಲೂ ಕೂಡ ತಗ್ಗಲಿಲ್ಲ. ಎದುರಾಳಿ ಸಿನಿಮಾಗಳ ಅಬ್ಬರಕ್ಕೂ ಬಗ್ಗಲಿಲ್ಲ. ಜುಲೈನಲ್ಲೆ ಸೆಟ್ಟೇರಬೇಕಿದ್ದ ಪುಷ್ಪ ಕೊಂಚ ತಡವಾಗಿ ಮುಹೂರ್ತ ಮಾಡಿಕೊಂಡಿದೆ. ಹೈದರಾಬಾದ್​​ನಲ್ಲಿ ಪೂಜೆ ಕಾರ್ಯ ಮುಗಿಸಿದೆ.

  • ಪೂಜೆಗೆ ಪುಷ್ಪ, ಶ್ರೀವಲ್ಲಿ ಕಾಣೆ.. ಫ್ಯಾನ್ಸ್​ ಸಖತ್​​​ ಬೇಸರ
  • ಇಂಟರ್​​ನ್ಯಾಷನಲ್​​​ ಮಟ್ಟದಲ್ಲಿ ಪುಷ್ಪ ಸ್ಮಗ್ಲಿಂಗ್​​ ಭರಾಟೆ

ಹೈದರಾಬಾದ್​​ನಲ್ಲಿ ಪುಷ್ಪ 2 ಚಿತ್ರದ ಮುಹೂರ್ತ ಪೂಜೆ ಸಡಗರ ಸಂಭ್ರಮದಿಂದ ನಡೆಯಿತು. ಆದ್ರೆ ಫ್ಯಾನ್ಸ್​ ಮಾತ್ರ ಸ್ಯಾಡ್​ ಮೂಡ್​​ನಲ್ಲಿದ್ರು. ಈ ಸುಂದರ ಕ್ಷಣಗಳಿಗೆ ಶ್ರೀವಲ್ಲಿ ರಶ್ಮಿಕಾ, ಅಲ್ಲು ಅರ್ಜುನ್​​ ಇಬ್ಬರೂ ಗೈರಾಗಿದ್ದರು. ಸ್ಟೈಲೀಶ್​ ಐಕಾನ್​​ ಅನುಪಸ್ಥಿತಿಯಲ್ಲಿ ಅದ್ಧೂರಿ ಮುಹೂರ್ತ ನೆರವೇರಿತು. ಸಿನಿಮಾದ ಟೆಕ್ನಿಕಲ್​​ ವಿಂಗ್​​, ಹಾಗೂ ಡೈರೆಕ್ಷನ್​ ಟೀಮ್​ ಮಾತ್ರ ಪೂಜೆಯಲ್ಲಿ ಹಾಜರಿತ್ತು. ನಿರ್ದೇಶಕ ಸುಕುಮಾರ್​ ಸೇರಿ ಹಲವರ ಸಮ್ಮುಖದಲ್ಲಿ ಗ್ರ್ಯಾಂಡ್​ ಆಗಿ ನಡೆಯಿತು.

ಅತೀ ಶೀಘ್ರದಲ್ಲೇ ಪುಷ್ಪ 2 ಸಿನಿಮಾ ಗ್ರ್ಯಾಂಡ್​​ ಆಗಿ ಹಾಗೂ ಮೊದಲಿಗಿಂತ ರಿಚ್ ಆಗಿ ತೆರೆಗೆ ಬರಲಿದೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್​ ಕೂಡ ಶುರುವಾಗಲಿದೆ. ಆಂಧ್ರದ ಚಿತ್ತೂರಿನ ಸ್ವಾಗ್​​ನಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿಬರಲಿದ್ದು, ಇಂಟರ್​ನ್ಯಾಷನಲ್​ ಲೆವೆಲ್​ನಲ್ಲಿ ಪುಷ್ಫನ ಕಳ್ಳಸಾಗಣಿಕೆ ಇರಲಿದೆ. ಎದುರಾಳಿ ವೈರಿಗಳ ನಡುವಿನ ಸೆಣಸಾಟ ಕೂಡ ದುಪ್ಪಟ್ಟಾಗಿರಲಿದೆ.

ನ್ಯಾಯಾರ್ಕ್​ನಲ್ಲಿ ಅವಾರ್ಡ್​ ಸಮಾರಂಭಕ್ಕೆ ತೆರೆಳಿದ್ದ ಅಲ್ಲು ಅರ್ಜುನ್​ ಮುಹೂರ್ತಕ್ಕೆ ಬರಲು ಸಾಧ್ಯವಾಗಿಲ್ಲ. ಇನ್ನೂ ಶ್ರೀವಲ್ಲಿ ಕೂಡ ಗೈರಾಗಿದ್ದು, ಫ್ಯಾನ್ಸ್​ ಇನ್ನೂ ಸ್ಯಾಡ್​​ ಮೂಡ್​ನಲ್ಲಿದ್ರು. 400 ಕೋಟಿಗೂ ಅಧಿಕ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮಾಡಿ ಅಬ್ಬರಿಸಿ ಬೊಬ್ಬಿರಿದ ಪುಷ್ಪ ಈ ಬಾರಿ ದಿ ರೈಸ್​ ಅವತಾರದಲ್ಲಿ ಮಿಂಚಲಿದ್ದಾರೆ. ನ್ಯೂಯಾರ್ಕ್ನ​ ಬೀದಿ ಬೀದಿಗಳಲ್ಲಿ ಸ್ಟೈಲೀಶ್​ ಐಕಾನ್​​ ಅಲ್ಲು  ದರ್ಬಾರ್​​ ಜೋರಾಗಿದೆ. ಅಲ್ಲಿಂದ ವಾಪಾಸಾದ ಮೇಲೆ ಪುಷ್ಪ ಸೀಕ್ವೆಲ್​ ಶೂಟಿಂಗ್​ ಶುರುವಾಗಲಿದೆ.

ರಾಕೇಶ್ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES